More

    ಗ್ರಾಮೀಣ ಪ್ರದೇಶದಲ್ಲಿ ಮುನ್ನಡೆ ಸಾಧಿಸಿದ ಬಿಜೆಪಿ

    ಬ್ಯಾಡಗಿ: ತಾಲೂಕಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಸಮಬಲದ ಹೋರಾಟ ನಡೆಸಿದ್ದರೂ, ಹಿಂದಿನಷ್ಟು ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಲ್ಪಮತಗಳಲ್ಲಿ ಪರಾಜಿತಗೊಂಡ ಅಭ್ಯರ್ಥಿಗಳು ಸೋಲಿಗೆ ಕಾರಣ ಹುಡುಕುತ್ತಿದ್ದಾರೆ.

    ಹಿಂದಿನ ಗ್ರಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಗರು 13 ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರದ ಗದ್ದುಗೆ ಏರಿದ್ದರು. 140ಕ್ಕೂ ಹೆಚ್ಚು ಕಾಂಗ್ರೆಸ್ ಬೆಂಬಲಿತರಿದ್ದರು. ಈ ಬಾರಿ 243 ಸದಸ್ಯರ ಪೈಕಿ 139 ಬಿಜೆಪಿ ಹಾಗೂ 102 ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಬಿಜೆಪಿ ಹಿಂದಿಗಿಂತ ಹೆಚ್ಚು ಸ್ಥಾನ ಪಡೆದು ಮುನ್ನೆಡೆ ಸಾಧಿಸಿದೆ ಎನ್ನಬಹುದು.

    13 ರಲ್ಲಿ ಬಹುಮತ: ತಾಲೂಕಿನ ಮೋಟೆಬೆನ್ನೂರು, ಶಿಡೇನೂರು, ಕಾಗಿನೆಲೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 18 ಗ್ರಾಪಂಗಳ ಪೈಕಿ 13 ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತರಿಗೆ ಸ್ಪಷ್ಟ ಬಹುಮತ ಸಿಗಬಹುದಾಗಿದೆ. ಇನ್ನುಳಿದ 5 ಪಂಚಾಯಿತಿ ಕಾಂಗ್ರೆಸ್ ಬೆಂಬಲಿಗರ ಪಾಲಾಗಬಹುದು. ಹಿಂದೆ ಕಾಂಗ್ರೆಸ್ 13 ಪಂಚಾಯಿತಿಗಳಲ್ಲಿ ಅಧಿಕಾರ ಹೊಂದಿತ್ತು. ಈಗ ಎಲ್ಲವೂ ಅದಲು ಬದಲಾಗಿದೆ. ಆದರೆ, ಮೀಸಲಾತಿ, ಪಕ್ಷೇತರ ಅಭ್ಯರ್ಥಿಗಳ ಒಲವು ಸಾಕಷ್ಟು ರಾಜಕೀಯ ಬದಲಾವಣೆ ಮಾಡಬಹುದಾಗಿದ್ದು, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಬಳಿಕ ಸ್ಪಷ್ಟ ಚಿತ್ರಣ ತಿಳಿಯಲಿದೆ.

    ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಜನಪರ ಕಾರ್ಯಕ್ರಮ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜಾರಿಗೊಳಿಸಿದ ವಿವಿಧ ಯೋಜನೆಗಳು ಜನರನ್ನು ತಲುಪಿವೆ. ಬಡವರ ಉದ್ಧಾರಕ್ಕೆ ಜಾರಿಗೊಳಿಸಿದ ಹೊಸ ಕಾರ್ಯಕ್ರಮ, ರೈತಪರ ಯೋಜನೆಗಳು, ಗ್ರಾಮೀಣ ಮಟ್ಟದಲ್ಲಿ ಬಿಜೆಪಿ ಕೈಹಿಡಿದಿದೆ. ಹೀಗಾಗಿ ಬಹುತೇಕರು ಬಿಜೆಪಿ ಬೆಂಬಲಿತರನ್ನು ಆಯ್ಕೆಗೊಳಿಸಿದ್ದಾರೆ. 13ಕ್ಕೂ ಹೆಚ್ಚು ಪಂಚಾಯಿತಿಗಳು ಬಿಜೆಪಿ ಪಾಲಾಗಲಿದ್ದು, ತಾಲೂಕಿನ ಅಭಿವೃದ್ಧಿಗೆ ಪೂರಕವಾಗಲಿದೆ.
    | ವಿರೂಪಾಕ್ಷಪ್ಪ ಬಳ್ಳಾರಿ, ಶಾಸಕ

    ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಜನಪ್ರಿಯ ಯೋಜನೆಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಮತದಾರ ಪ್ರಭುಗಳು ಅಭಿವೃದ್ಧಿಗೆ ಸಹಕಾರ ನೀಡಿರಬಹುದು. ಸೋತ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಲ್ಪಮತಗಳ ಹಿನ್ನೆಡೆ ಹೊಂದಿದ್ದು, ಮುಂಬರುವ ಚುನಾವಣೆ ನಮ್ಮ ಪರ ಜಯ ಸಿಗಲಿದೆ. ಒಟ್ಟಾರೆ ಮತಗಳ ಲೆಕ್ಕಾಚಾರದಲ್ಲಿ ನಾವು ಸೋತಿಲ್ಲ.
    | ಎಸ್.ಆರ್. ಪಾಟೀಲ, ಜೈವಿಕ ಇಂಧನ ಮಂಡಳಿ ಮಾಜಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts