More

    ಜಮ್ಮು ಕಾಶ್ಮೀರದಲ್ಲಿ ನಿಜವಾಗಿಯೂ ಗೆದ್ದೋರು ನಾವೇ! ಭರವಸೆ ಮತ್ತು ಪ್ರಜಾಪ್ರಭುತ್ವ ಗೆದ್ದಿದೆ ಎಂದ ಬಿಜೆಪಿ

    ಶ್ರೀನಗರ: ಜಮ್ಮು ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಸಮಿತಿ (ಡಿಡಿಸಿ)ಯ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ 75 ಸ್ಥಾನ ತನ್ನದಾಗಿಸಿಕೊಂಡಿದ್ದರೆ ಗುಪ್ಕರ್​ ಮೈತ್ರಿ ಕೂಟದ ಪಕ್ಷಗಳು 112 ಸ್ಥಾನ ತಮ್ಮದಾಗಿಸಿಕೊಂಡಿವೆ. ಆದರೆ ಜಮ್ಮು ಕಾಶ್ಮೀರದಲ್ಲಿ ನಿಜವಾಗಿಯೂ ಗೆದ್ದವರು ನಾವು ಎಂದು ಬಿಜೆಪಿ ಹೇಳಿಕೊಂಡಿದೆ.

    ಇದನ್ನೂ ಓದಿ: ಕರ್ಫ್ಯೂ ವೇಳೆ ಬಾರ್, ಪಬ್ ಮುಚ್ಚದಿದ್ದರೆ ಅಬಕಾರಿ ಪರವಾನಗಿ ರದ್ದು; ಸಚಿವರ ಖಡಕ್​ ಎಚ್ಚರಿಕೆ

    ಜಮ್ಮು ಕಾಶ್ಮೀರದಲ್ಲಿ ಭರವಸೆ ಮತ್ತು ಪ್ರಜಾಪ್ರಭುತ್ವದ ಜಯಗಳಿಸಿದೆ. ಬಿಜೆಪಿ ರಾಜ್ಯದ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ನಂತರ ಎನ್‌ಸಿ (67), ಪಿಡಿಪಿ (27) ಮತ್ತು ಕಾಗ್ರೆಸ್ (26) ಪಕ್ಷಗಳು ಕಾಣಿಸಿಕೊಂಡಿವೆ. ಬಿಜೆಪಿಯನ್ನು ಒಂಟಿಯಾಗಿ ಹೋರಾಡಲು ಸಾಧ್ಯವಾಗದ ಕಾರಣ ಗುಪ್ಕರ್ ಮೈತ್ರಿ ರೂಪುಗೊಂಡಿತು. ಅದರ ಹೊರತಾಗಿಯೂ, ಬಿಜೆಪಿ 4.87 ಲಕ್ಷ ಮತಗಳನ್ನು ಗಳಿಸಿದೆ. ಎನ್‌ಸಿಗೆ 2.82 ಲಕ್ಷ ಮತಗಳು, ಪಿಡಿಪಿಗೆ 57,000 ಮತಗಳು, ಕಾಂಗ್ರೆಸ್ 1.39 ಲಕ್ಷ ಮತಗಳು ಸಿಕ್ಕಿವೆ. ಎನ್‌ಸಿ, ಪಿಡಿಪಿ ಮತ್ತು ಕಾಂಗ್ರೆಸ್‌ನ ಒಟ್ಟು ಮತ ಪಾಲುಗಿಂತ ಬಿಜೆಪಿಗೆ ಹೆಚ್ಚು ಸಿಕ್ಕಿದೆ. ಕಾಶ್ಮೀರ ಕಣಿವೆಯಲ್ಲಿ ಬಿಜೆಪಿಗೆ ಸ್ಥಾನ ಸಿಗುತ್ತಿರುವುದು ಇದೇ ಮೊದಲು ಎಂದು ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದ ಡಿಡಿಸಿ ಚುನಾವಣೆಯ ಬಿಜೆಪಿಯ ಉಸ್ತುವಾರಿ ಅನುರಾಗ್ ಠಾಕೂರ್ ಮಾತನಾಡಿದ್ದು, “ಸ್ವತಂತ್ರ ಅಭ್ಯರ್ಥಿಗಳು ಕಾಂಗ್ರೆಸ್ ಮತ್ತು ಪಿಡಿಪಿಗಿಂತ ಹೆಚ್ಚಿನ ಮತಗಳನ್ನು ಪಡೆದಿದ್ದಾರೆ. ತ್ರಿವರ್ಣವನ್ನು ಬಿಚ್ಚಿಡಲು ನಿರಾಕರಿಸಿದ ಮೆಹಬೂಬಾ ಮುಫ್ತಿ ಅವರಿಗೆ ಇಂದು ಸೂಕ್ತ ಉತ್ತರ ಸಿಕ್ಕಿದೆ. ಜಮ್ಮು ಕಾಶ್ಮೀರದ ಜನರು ಮೋದಿಜಿಯಲ್ಲಿ ಇಟ್ಟಿರುವ ನಂಬಿಕೆ, ಪ್ರಧಾನಿಯವರ ನೀತಿಗಳಿಗೆ ಮತ್ತು ಪ್ರಜಾಪ್ರಭುತ್ವ ತತ್ವಗಳನ್ನು ಬಲಪಡಿಸುವ ಕಾರ್ಯಗಳಿಗೆ ಜವರು ತೋರಿಸಿದ ಬೆಂಬಲ ಬಿಜೆಪಿಗೆ ಕಾಶ್ಮೀರ ಕಣಿವೆಯಲ್ಲಿ 3 ಸ್ಥಾನಗಳು ದೊರೆಯಲು ಕಾರಣಗಳಾಗಿವೆ” ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಹೋಟೆಲ್​ ರೂಂನ ಬೆಡ್​ಶೀಟ್​ನಲ್ಲಿ ಹೆಂಡತಿಯ ಮೃತದೇಹ ಸುತ್ತಿಟ್ಟು ಪರಾರಿಯಾದ ಗಂಡ! ಬಾಗಿಲು ತೆರೆದ ಸಿಬ್ಬಂದಿಗೆ ಕಾದಿತ್ತು ಶಾಕ್​!

    “ಸ್ವತಂತ್ರ ಅಭ್ಯರ್ಥಿಗಳು ಮತ್ತು ಬಿಜೆಪಿಯ ಒಟ್ಟು ಮತ ಪಾಲು 52% ಕ್ಕಿಂತ ಹೆಚ್ಚಾಗಿದೆ. ಗುಪ್ಕರ್ ಗ್ಯಾಂಗ್ ತನ್ನ ವಿಶ್ವಾಸಾರ್ಹತೆ ಮತ್ತು ಜನರ ನಂಬಿಕೆಯನ್ನು ಕಳೆದುಕೊಂಡಿದೆ ಎಂಬುದಕ್ಕೆ ಇದು ಸ್ಪಷ್ಟ ಸೂಚನೆಯಾಗಿದೆ.” ಎಂದು ಅನುರಾಗ್​ ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಡಾನ್ಸ್​ ಮಾಡಲು ವಧುವನ್ನು ಎಳೆದ ವರನ ಸ್ನೇಹಿತರು- ಮುಂದೆ ಆಗಬಾರದ್ದೆಲ್ಲಾ ಆಗೋಯ್ತು!

    2ನೇ ಪತ್ನಿ ಜತೆ ಪ್ರಸ್ತಕ್ಕೆ ಮುಂದಾಗಿದ್ದವನಿಗೆ ಮೊದಲನೇ ಹೆಂಡತಿ ಕೊಟ್ಟಳು ಬಿಗ್​ ಶಾಕ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts