More

    ‘ಬಿಜೆಪಿಯೇ ನಿಜವಾದ ತುಕ್ಡೆ ತುಕ್ಡೆ ಗ್ಯಾಂಗ್​​!’ ಕೆಲ ತಿಂಗಳ ಹಿಂದೆ ಬಿಜೆಪಿಯೊಂದಿಗಿದ್ದ ನಾಯಕನ ಹೇಳಿಕೆ

    ಅಮೃತಸರ: ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು, ಆಡಳಿತ ನಡೆಸಿ, ಕೆಲ ತಿಂಗಳ ಹಿಂದಷ್ಟೇ ಮೈತ್ರಿಯನ್ನು ಮುರಿದು ಹೋದ ಶಿರೋಮಣಿ ಅಕಾಲಿ ದಳ (ಎಸ್​ಎಡಿ)ದ ನಾಯಕರು ಇದೀಗ ಬಿಜೆಪಿ ವಿರುದ್ಧ ಆರೋಪಗಳನ್ನು ಮಾಡಲಾರಂಭಿಸಿದ್ದಾರೆ. ದೇಶದಲ್ಲಿ ನಿಜವಾದ ತುಕ್ಡೆ ತುಕ್ಡೆ ಗ್ಯಾಂಗ್​ ಬಿಜೆಪಿಯೇ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ದೂರಿದ್ದಾರೆ.

    ಇದನ್ನೂ ಓದಿ: ಬೈಕ್​ ಸವಾರನ ಮೇಲೆ ಖಾಸಗಿ ಬಸ್ಸು ಹರಿದು ಸಾವು! ಸ್ಥಳೀಯರ ಆಕ್ರೋಶಕ್ಕೆ ಸುಟ್ಟು ಭಸ್ಮವಾದ ಬಸ್ಸು

    ಪಂಜಾಬ್​ನ ಮಾಜಿ ಮುಖ್ಯಮಂತ್ರಿ ಹಾಗೂ ಎಸ್​ಎಟಿ ಪಕ್ಷದ ಹಿರಿಯ ನಾಯಕ ಸುಖಬೀರ್​​ ಸಿಂಗ್​ ಬಾದಲ್​ ಇಂತದ್ದೊಂದು ಆರೋಪ ಮಾಡಿದ್ದಾರೆ. ‘ಬಿಜೆಪಿ ದೇಶದ ನಿಜವಾದ ತುಕ್ಡೆ ತುಕ್ಡೆ ಗ್ಯಾಂಗ್. ಇದು ರಾಷ್ಟ್ರೀಯ ಐಕ್ಯತೆಯನ್ನು ತುಂಡುಗಳಾಗಿ ಒಡೆದಿದೆ. ಮುಸ್ಲಿಮರ ವಿರುದ್ಧ ನಾಚಿಕೆಯಿಲ್ಲದೆ ಹಿಂದೂಗಳನ್ನು ಪ್ರಚೋದಿಸುತ್ತದೆ. ಈಗ ಶಾಂತಿ ಪ್ರಿಯ ಪಂಜಾಬಿ ಹಿಂದೂಗಳನ್ನು ನಮ್ಮ ಸಿಖ್ ಸಹೋದರರ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸುತ್ತಿದೆ. ದೇಶಭಕ್ತ ಪಂಜಾಬ್​ನ್ನು ಬಿಜೆಪಿ ಕೋಮು ಜ್ವಾಲೆಗೆ ತಳ್ಳಲು ಪ್ರಯತ್ನಿಸುತ್ತಿದೆ’ ಎಂದು ಬಾದಲ್ ಅವರು ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ಅಮ್ಮನಿಗೆ 118 ಬಾರಿ ಚಾಕು ಇರಿದು ಕೊಂದ ಮಗ! ಪೊಲೀಸರಿಗೆ ಕರೆ ಮಾಡಿ ಬಾಡಿ ಬ್ಯಾಗ್​ ತರಲು ಹೇಳಿದ

    ಬಿಜೆಪಿ ನೇತೃತ್ವದ ಸರ್ಕಾರ ತನ್ನ ‘ಅಹಂ’ ಅನ್ನು ಬದಿಗಿಟ್ಟು ಪ್ರತಿಭಟನೆ ನಡೆಸುತ್ತಿರುವ ರೈತರ ಮಾತುಗಳನ್ನು ಕೇಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. (ಏಜೆನ್ಸೀಸ್​)

    ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಸ್ನೇಕ್​ ಡ್ಯಾನಿ ದುರಂತ ಸಾವು: 75 ಬಾರಿ ಬಚಾವ್​ ಆದ್ರೂ ಬೆಂಬಿಡದ ಮೃತ್ಯು!

    ಮದುವೆ ಮಂಟಪದಿಂದ ಎದ್ದು ಹೋದ ವಧು! ವಾಪಾಸು ಬರುವಷ್ಟರಲ್ಲಿ ಪೂರ್ತಿ ಕುಟುಂಬವೇ ಹೆಮ್ಮೆ ಪಡುತ್ತಿತ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts