More

    ಬಿಜೆಪಿಯಿಂದ ದೇಶದಲ್ಲಿ ಬಡತನ ಹೆಚ್ಚಳ

    ಚಿತ್ರದುರ್ಗ: ಬಿಜೆಪಿ ಶ್ರೀಮಂತರ ಅನುಕೂಲಕ್ಕಾಗಿ ವಿಮಾನ ನಿಲ್ದಾಣ, ಬುಲೆಟ್ ಟ್ರೈನ್, ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸಿ ಬಡವರನ್ನು ಕಡೆಗಣಿಸಿದೆ. ಹೀಗಾಗಿ ದೇಶ ಮತ್ತು ರಾಜ್ಯದಲ್ಲಿ ಕಳೆದ 8 ವರ್ಷಗಳಿಂದಲೂ ಬಡತನ ರೇಖೆ ಹೆಚ್ಚಿದೆ ಎಂದು ಆಮ್ಆದ್ಮಿ ಪಕ್ಷದ ರಾಜ್ಯ ಜಂಟಿ ಕಾರ‌್ಯದರ್ಶಿ ಬಿ.ಇ.ಜಗದೀಶ ಆರೋಪಿಸಿದರು.

    ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಮಧ್ಯಮ ವರ್ಗದವರೂ ಬಡವರಾಗಲಿದ್ದು ಶ್ರೀಮಂತರು ಬಿಟ್ಟರೆ ಉಳಿದವರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಬಿಜೆಪಿ ದುರಾಡಳಿತದ ಕುರಿತು ರಾಜ್ಯದ ಜನರಿಗೆ ಮನವರಿಕೆ ಮಾಡುವ ಸಲುವಾಗಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್‌ಸಿಂಗ್ ಮಾನ್ ಮಾ. 4ರಂದು ದಾವಣಗೆರೆಯ ಪಕ್ಷದ ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯ 10 ಸಾವಿರ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಭಾಗವಹಿಸುತ್ತಿದ್ದಾರೆ. ಇಲ್ಲಿಂದ ವಿಧಾನಸಭಾ ಚುನಾವಣಾ ಪ್ರಚಾರ ಆರಂಭವಾಗಲಿದೆ ಎಂದು ತಿಳಿಸಿದರು.

    ಗುಡಿಸಲುಮುಕ್ತ ದೇಶ ನಿರ್ಮಿಸುವ ಗುರಿ ಹೊಂದಿರುವ ಬಿಜೆಪಿಯವರಿಗೆ ಬಡವರ ಕುರಿತು ಕಾಳಜಿ ಇಲ್ಲ. ಇದಕ್ಕೆ ಚಿತ್ರದುರ್ಗದ ಶಾಸಕರು ಆಶ್ರಯ ಮನೆಗಳನ್ನು ಬೆಂಬಲಿಗರಿಗೆ ನೀಡುತ್ತಿರುವುದೇ ಉತ್ತಮ ಉದಾಹರಣೆ ಎಂದು ದೂರಿದರು.

    ರಾಜ್ಯದಲ್ಲಿ ಶೇ.40 ಕಮಿಷನ್ ಪಡೆಯುವ ಸರ್ಕಾರ ತೊಲಗಿಸಿ, ಭ್ರಷ್ಟಾಚಾರಮುಕ್ತವನ್ನಾಗಿಸಿ, ದೆಹಲಿ ಮಾದರಿಯಲ್ಲಿ ಆರೋಗ್ಯ, ಶಿಕ್ಷಣ, ಆಹಾರ ಪ್ರತಿಯೊಬ್ಬರಿಗೂ ಸಿಗುವಂತೆ ಮಾಡುವುದೇ ಎಎಪಿ ಉದ್ದೇಶವಾಗಿದೆ ಎಂದರು.
    ಪಕ್ಷದ ಪದಾಧಿಕಾರಿಗಳಾದ ಕೆಂಚಪ್ಪ, ಲಕ್ಷ್ಮಿಕಾಂತರೆಡ್ಡಿ, ಮಹಮ್ಮದ್ ಇಮ್ರಾನ್, ಕುಬೇಂದ್ರನಾಯ್ಕ ಇತರರಿದ್ದರು.

    *ಕೋಟ್*
    ಬಿಜೆಪಿ ಸಿಬಿಐ, ಇಡಿ ದುರುಪಯೋಗ ಪಡಿಸಿಕೊಂಡು ದೆಹಲಿ ಉಪಮುಖ್ಯಮಂತ್ರಿ ಬಂಧಿಸಿರುವುದನ್ನು ವಿರೋಧಿಸಿ ಮಾ. 1ರಂದು ಚಿತ್ರದುರ್ಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
    ಫಾರೂಖ್, ಎಎಪಿ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts