More

    ಭ್ರಷ್ಟಾಚಾರದಲ್ಲಿ ಮುಳುಗಿದ ಬಿಜೆಪಿ ಸರ್ಕಾರ: ಮಲ್ಲಿಕಾರ್ಜುನ ಖರ್ಗೆ

    ಶಿವಮೊಗ್ಗ: ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳಿಗೆ ಲಂಚದ ಕಳಂಕ ಮೆತ್ತಿದ್ದು ಇದು ಜನರ ನಿದ್ದೆಗೆಡೆಸಿದೆ. ಒಟ್ಟಾರೆ ಕೇಂದ್ರದಂತೆ ರಾಜ್ಯದಲ್ಲೂ ಲಂಚಕೋರರ ಸರ್ಕಾರ ಇದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೂರಿದರು.

    ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದು ಈ ಬಾರಿ ಕಾಂಗ್ರೆಸ್‌ಗೆ ಉತ್ತಮ ವಾತಾವರಣ ಇದೆ. ಜನರು ಕಾಂಗ್ರೆಸ್‌ಗೆ ಸ್ಪಂದಿಸುತ್ತಿದ್ದಾರೆ. ವಿಶೇಷವಾಗಿ ಈ ಚುನಾವಣೆ ಕಾಂಗ್ರೆಸ್‌ಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಹಾಲಿ ಇಂದಿನ ಸರ್ಕಾರ ಹೇಗೆ ನಡೆದುಕೊಳ್ಳುತ್ತಿದೆ ಮತ್ತು ಅವರ ಆಡಳಿತ ಹೇಗೆ ಸಾಗಿದೆ ಎಂಬುದೂ ಎಲ್ಲರಿಗೂ ಮನವರಿಕೆ ಆಗಿದೆ. ಪಿಎಸ್‌ಐ, ಇಂಜಿನಿಯರ್ ಸೇರಿದಂತೆ ಹಲವಾರು ನೇಮಕಾತಿಗಳಲ್ಲಿ ಹಗರಣ ನಡೆಸಿದೆ. ಹಾಗಾಗಿ ನಾವು ಜನರಿಗೆ ಸ್ವಚ್ಛ ಆಡಳಿತ ನೀಡುವುದನ್ನು ಎದುರು ನೋಡುತ್ತಿದ್ದೇವೆ ಎಂದರು.
    ಜನರ ಅಪೇಕ್ಷೆ ಒಳ್ಳಯ ಆಡಳಿತದ ಅಪೇಕ್ಷ ಇತ್ತು. 40 ಪರ್ಸೆಂಟ್ ಕಮಿಷನ್ ಪಡೆದ ಆರೋಪವನ್ನು ಗುತ್ತಿಗೆದಾರರು ನೇರವಾಗಿ ಆರೋಪಿಸಿದ್ದಾರೆ. ಸ್ವತಃ ಅರ್ಜಿ ಬರೆದು ರಾಷ್ಟ್ರಪತಿ, ಪ್ರಧಾನಿ, ಲೋಕಾಯುಕ್ತ, ರಾಜ್ಯಪಾಲರಿಗೆ ಸಲ್ಲಿಸಿದ್ದರೂ ಯಾವುದೇ ಕ್ರಮವಿಲ್ಲ ಎಂದು ದೂರಿದರು.
    ಲಕ್ಷ ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ
    ರಾಜ್ಯದಲ್ಲಿ 2.5 ಲಕ್ಷ ಹುದ್ದೆ ಮತ್ತು ಕೇಂದ್ರದಲ್ಲಿ 30 ಲಕ್ಷ ಹುದ್ದೆ ಖಾಲಿ ಇವೆ. ಕೈಯಲ್ಲಿ ಅಧಿಕಾರವಿದ್ದರೂ ಎರಡೂ ಸರ್ಕಾರಗಳು ಖಾಲಿ ಹುದ್ದೆಗಳ ಭರ್ತಿ ಮಾಡಲಿಲ್ಲ. ಇನ್ನೂ ಪ್ರತಿ ವರ್ಷ ಎರಡು ಕೋಟಿ ಉದ್ಯೋಗದ ಲೆಕ್ಕ, ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ. ಕೊಡುತ್ತೇವೆ ಎಂಬ ಲೆಕ್ಕ ಕೊಡಬೇಕು. 410 ರೂ. ಇದ್ದ ಸಿಲಿಂಡರ್ ದರ 1,150 ರೂ ದಾಟಿದೆ. ಪೆಟ್ರೋಲ್, ಡಿಸೇಲ್ ದರ ಏರಿಕೆ ಆಗಿದೆ. ಜಿಎಸ್‌ಟಿ ಗಗನಮುಖಿಯಾಗಿದೆ ಎಂದು ಖರ್ಗೆ ಕಿಡಿಕಾರಿದರು.
    ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಎಚ್.ಸಿ.ಯೋಗೇಶ್, ಗ್ರಾಮಾಂತರ ಅಭ್ಯರ್ಥಿ ಡಾ. ಶ್ರೀನಿವಾಸ್ ಕರಿಯಣ್ಣ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts