More

    ಟೋಲ್‌ಗೆ ಅನುಮತಿ ನೀಡಿದ್ದೇ ಬಿಜೆಪಿ: ಗೋಣಿ ಮಾಲತೇಶ್

    ಶಿಕಾರಿಪುರ: ಶಿಕಾರಿಪುರ-ಶಿರಾಳಕೊಪ್ಪ ಹಾಗೂ ಶಿವಮೊಗ್ಗ-ಸವಳಂಗ ರಸ್ತೆಯಲ್ಲಿರುವ ಟೋಲ್‌ಗಳ ನಿರ್ಮಾಣಕ್ಕೆ ಅನುಮತಿ ನೀಡಿದ್ದೇ ಬಿಜೆಪಿ ಸರ್ಕಾರ ಎಂದು ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ದೂರಿದರು.
    ತಾವೇ ಮೊದಲು ಟೋಲ್ ನಿರ್ಮಿಸಿ ಈಗ ಚುನಾವಣೆ ಸಮೀಪಿಸುತ್ತಿರುವಾಗ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ. ಶಿವಮೊಗ್ಗ- ಶಿಕಾರಿಪುರ- ಹಾನಗಲ್ ರಸ್ತೆಯಲ್ಲಿ ಟೋಲ್ ಸಂಗ್ರಹಿಸಲು ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಟೆಂಡರ್ ಕರೆದ ದಾಖಲೆಯನ್ನು ಸೋಮವಾರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.
    ಈ ರಸ್ತೆಯಲ್ಲಿ ಟೋಲ್ ಸಂಗ್ರಹಣೆಗೆ 2022ರ ಜು.6ರಂದು ಟೆಂಡರ್ ಕರೆಯಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಾವಳಿ ಪ್ರಕಾರ ಒಂದು ಟೋಲ್ ಪಾಯಿಂಟ್‌ನಿಂದ ಮತ್ತೊಂದು ಟೋಲ್ ಪಾಯಿಂಟ್‌ಗೆ 60 ಕಿ.ಮೀ ಇರಬೇಕು. ಆದರೆ ಇವರು 30 ಕಿ.ಮೀ ದೂರದಲ್ಲೇ ಮಾಡಿರುವುದು ಕಾನೂನು ಬಾಹಿರ. ಶಿವಮೊಗ್ಗ ಹಾಗೂ ಶಿಕಾರಿಪುರ ತಾಲೂಕಿನ ರೈತರು, ಕೂಲಿ ಕಾರ್ಮಿಕರು ಈ ಮಾರ್ಗವಾಗಿ ಅತಿ ಹೆಚ್ಚು ಓಡಾಡುತ್ತಾರೆ. ಟೋಲ್ ಸಂಗ್ರಹಣೆಗೆ ಕಾರಣೀಭೂತರಾಗಿ ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಭಂಡಾರಿ ಮಾಲತೇಶ್, ಪಚ್ಚಿ ಸಂದೀಪ್, ಬನ್ನೂರು ಚರಣ್, ಬೇಗೂರು ಅರುಣ್ ನಾಯಕ್, ಶಿವರಾಜ್, ರವಿಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts