More

    ಬಿಜೆಪಿ ಕೋಟೆ ಭದ್ರಗೊಳಿಸಲು ಚಿತ್ರದುರ್ಗಕ್ಕೆ ಬರುತ್ತಿದ್ದಾರೆ ಪ್ರಧಾನಿ ಮೋದಿ

    ಚಿತ್ರದುರ್ಗ: ಬಿಜೆಪಿ ಪರ ಅಲೆ ಎಬ್ಬಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮೇ ೨ ರಂದು ಕೋಟೆ ನಗರಿಗೆ ಭೇಟಿ ನೀಡುತ್ತಿದ್ದಾರೆ. ಅವರು ಬೆಳಗ್ಗೆ ೧೦.೩೦ ರಿಂದ ೧೨ ರವರೆಗೆ ನಡೆಸಲಿರುವ ರ‌್ಯಾಲಿಗೆ ಚಿತ್ರದುರ್ಗ ಸಜ್ಜಾಗಿದೆ.

    ಬಿಜೆಪಿ ಸಮಾವೇಶಕ್ಕಾಗಿ ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ೩೩೦/೬೫೦ ಅಡಿ ಉದ್ದಗಲದ ಬೃಹತ್ ಪೆಂಡಾಲ್ ನಿರ್ಮಾಣವಾಗಿದೆ. ಚಳ್ಳಕೆರೆ ಗೇಟ್‌ಗೆ ಅಭಿಮುಖವಾಗಿ ೪೦/೬೦ ಅಡಿ ಅಳತೆಯ ಆಕರ್ಷಕ ವೇದಿಕೆ ತಲೆ ಎತ್ತಿದೆ. ಅಂದಾಜು ೭೫ ಸಾವಿರ ಕುರ್ಚಿಗಳನ್ನು ಹಾಕಲು ಯೋಜಿಸಲಾಗಿದೆ. ನಗರದ ತುಂಬ ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ.

    ದಾವಣಗೆರೆ ಜಿಲ್ಲೆಯ ಚನ್ನಗಿರಿ, ಮಾಯಕೊಂಡ ಹಾಗೂ ಜಗಳೂರು, ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು, ಹಿರಿಯೂರು, ಹೊಸದುರ್ಗ ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ಭಾಗವಹಿಸುವರು. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಂಸದರು ಮತ್ತಿತರ ಬಿಜೆಪಿ ಪಕ್ಷದ ಪ್ರಮುಖರು ಉಪಸ್ಥಿತರಿರುತ್ತಾರೆ. ಐದಾರು ಜಿಲ್ಲೆಗಳ ಬಿಜೆಪಿ ಕಾರ‌್ಯಕರ್ತರು, ಮೋದಿ ಅಭಿಮಾನಿಗಳ ಸಹಿತ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ.

    ಬಿಜೆಪಿ ಕೋಟೆ ಭದ್ರಗೊಳಿಸಲು ಚಿತ್ರದುರ್ಗಕ್ಕೆ ಬರುತ್ತಿದ್ದಾರೆ ಪ್ರಧಾನಿ ಮೋದಿ

    ಸಮಾವೇಶಕ್ಕೆ ಬಂದವರಿಗೆ ಮಜ್ಜಿಗೆ, ನೀರು, ಬಿಸ್ಕೆಟ್ ಇತ್ಯಾದಿ ಹಂಚಲಾಗುತ್ತದೆ. ಕ್ರೀಡಾಂಗಣದಲ್ಲಿ ೨೦ ಟಾಯ್ಲೆಟ್ ವ್ಯವಸ್ಥೆ ಮಾಡಲಾಗಿದೆ.

    ತಮಟೆ ಸದ್ದಿನೊಂದಿಗೆ ಬಿಜೆಪಿ ಸಮಾವೇಶಕ್ಕೆ ಚಾಲನೆ
    ಬೆಂಗಳೂರಿಂದ ವಿಶೇಷ ವಿಮಾನದಲ್ಲಿ ಚಳ್ಳಕೆರೆ ಡಿಆರ್‌ಡಿಒದ ಎಟಿಆರ್‌ಗೆ ಬೆಳಗ್ಗೆ ೧೦.೩೦ ಕ್ಕೆ ಬಂದಿಳಿಯಲಿರುವ ಪ್ರಧಾನಿ ಅಲ್ಲಿಂದ ನಗರದ ವೀರ ವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣಕ್ಕೆ ಹೆಲಿಕಾಪ್ಟರ್ ಮೂಲಕ ಬಂದು, ವೇದಿಕೆ ತಲುಪಲಿದ್ದಾರೆ. ತಮಟೆ ಬಡಿಯು ವ ಮೂಲಕ ಬಿಜೆಪಿ ಪ್ರಚಾರ ಸಭೆಗೆ ಚಾಲನೆ ನೀಡಲಿದ್ದಾರೆ.

    ಬಿಜೆಪಿ ಕೋಟೆ ಭದ್ರಗೊಳಿಸಲು ಚಿತ್ರದುರ್ಗಕ್ಕೆ ಬರುತ್ತಿದ್ದಾರೆ ಪ್ರಧಾನಿ ಮೋದಿ

    ಡ್ರೋನ್ ಹಾರಾಟ ನಿಷೇಧ
    ಸಮಾವೇಶದ ಸ್ಥಳ ಹಾಗೂ ಕ್ರೀಡಾಂಗಣದ ರಕ್ಷಣೆ ಗಮನದಲ್ಲಿಟ್ಟುಕೊಂಡು ೨ ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟವನ್ನು ನಿಷೇಧಿಸಲಾಗಿದೆ. ಐವರು ಎಸ್‌ಪಿಗಳ ನೇತೃತ್ವದಲ್ಲಿ ಸಾವಿರಕ್ಕೂ ಹೆಚ್ಚು ಪೊಲೀಸರು ಹಾಗೂ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.

    ಚಳ್ಳಕೆರೆ ಗೇಟ್‌ನಿಂದ ಮದಕರಿ ನಾಯಕ ವೃತ್ತದವರೆಗೆ ಹಾಗೂ ಸ್ಟೇಡಿಯಂನಿಂದ ಸಮಾವೇಶದ ಸ್ಥಳದವರೆಗೆ ಸಂಚಾರ ನಿಷೇಧಿಸಲಾಗಿದೆ. ಪೊಲೀಸರು ಸಂಚಾರ ಮಾರ್ಗ ಬದಲಾವಣೆ ಮಾಡಿದ್ದು, ವಾಹನಗಳ ಪಾರ್ಕಿಂಗ್ ಸ್ಥಳ ಗುರುತಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts