More

    ಆರ್.ಅಶೋಕ್, ಸೋಮಣ್ಣ 2 ಕ್ಷೇತ್ರದಿಂದ ಕಣಕ್ಕೆ; 52 ಹೊಸ ಅಭ್ಯರ್ಥಿಗಳಿಗೆ ಮಣೆ

    ನವದೆಹಲಿ: ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಕೊನೆಗೂ ಬಿಡುಗಡೆಯಾಗಿದೆ. ಈ ಬಾರಿಯ ಚುನಾವಣೆಗೆ ಬಿಜೆಪಿ 52 ಹೊಸ ಮುಖಗಳಿಗೆ ಮಣೆ ಹಾಕಿದೆ. ಇದಲ್ಲದೆ ಸಚಿವ ಆರ್.ಆಶೋಕ್ ಹಾಗೂ ಸಚಿವ ವಿ.ಸೋಮಣ್ಣ ಅವರಿಗೆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದೆ.

    ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಲ್ಲಿ ಸಚಿವ ವಿ. ಸೋಮಣ್ಣ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇದರೊಂದಿಗೆ ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರ ವಿರುದ್ಧ ಸಚಿವ ಆರ್. ಅಶೋಕ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

    ದೆಹಲಿಯ ಪಕ್ಷದ ಕಚೇರಿಯಲ್ಲಿ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಪಕ್ಷದ ನಾಯಕ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ಕೆ. ಅಣ್ಣಾಮಲೈ, ಪಕ್ಷದ ಹಿರಿಯ ನಾಯಕ ಮನ್ಸುಖ್ ಮಾಂಡವೀಯ ಮುಂತಾದವರು ಉಪಸ್ಥಿತರಿದ್ದರು.

    52 ಹೊಸ ಅಭ್ಯರ್ಥಿಗಳು

    ಒಬಿಸಿಯ 32 ಮಂದಿ, ಎಸ್​ಸಿ 30, ಎಸ್​ಟಿ 16 ಹಾಗೂ 9 ವೈದ್ಯರು, ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಟಿಕೆಟ್ ನೀಡಲಾಗಿದೆ. 8 ಮಂದಿ ಮಹಿಳೆಯರು, ಐವರು ವಕೀಲರು, ಮೂವರು ಶಿಕ್ಷಕರು, 9 ಸ್ನಾತಕೋತ್ತರ ಪದವೀಧರರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ.

    ವಿಜಯನಗರ – ಸಿದ್ಧಾರ್ಥ ಸಿಂಗ್, ರಾಮದುರ್ಗ- ಎಸ್ ಸರ್ ಚಿಕ್ಕರೇವಣ್ಣ, ಶಿಕಾರಿಪುರ- ಬಿವೈ ವಿಜಯೇಂದ್ರ, ಕುಂದಾಪುರ- ಕಿರಣ್ ಕುಮಾರ್, ಚಾಮರಾಜ್ ಪೇಟೆ – ಭಾಸ್ಕರ್ ರಾವ್, ಮಂಡ್ಯ- ಅಶೋಕ್ ಜೈರಾಮ್, ಕುಂದಾಪುರ- ಕಿರಣ್ ಕುಮಾರ್, ಬೆಳಗಾವಿ ಉತ್ತರ – ರವಿ ಪಾಟೀಲ ಇತರೆ ಹೊಸ ಮುಖಗಳು ಈ ಬಾರಿ ಬಿಜೆಪಿಯಿಂದ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

    8 ಮಹಿಳೆಯರಿಗೆ ಟಿಕೆಟ್

    ಬಿಜೆಪಿ ಮೊದಲ ಪಟ್ಟಿಯಲ್ಲಿ 8 ಮಹಿಳೆಯರಿಗೆ ಆದ್ಯತೆ. 8 ರಲ್ಲಿ 5 ಮಂದಿ ಹೊಸ ಮುಖಕ್ಕೆ ಬಿಜೆಪಿ ಟಿಕೆಟ್ ನೀಡಿದೆ. ಸುಧಾ – ನಾಗಮಂಗಲ, ಭಾಗೀರತಿ – ಸುಳ್ಯ, ಆಶಾ ತಿಮ್ಮಪ್ಪ – ಪುತ್ತೂರು, ರತ್ನ ಮಾಮನಿ – ಸೌದತ್ತಿ, ಶಿಲ್ಪ ರಾಘವೇಂದ್ರ – ಸಂಡೂರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಪಡೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts