More

    ಬಿಜೆಪಿ ಸಂಸದರಾಗಿದ್ದ ಪ್ರಬಲ ಪಂಚಮಸಾಲಿ ಮುಖಂಡ ಮರಳಿ ಕಾಂಗ್ರೆಸ್​ಗೆ!

    ಹಾವೇರಿ: ಮಾಜಿ ಸಂಸದ ಮಂಜುನಾಥ್ ಕುನ್ನೂರು ಕಾಂಗ್ರೆಸ್ ಸೇರ್ಪಡೆಗೆ ನಿರ್ಧಾರ ಮಾಡಿದ್ದು ಕೆಪಿಸಿಸಿ ಅದ್ಯಕ್ಷ ಡಿಕೆಶಿ ಹಾಗೂ ಸಿದ್ದರಾಮಯ್ಯ ಭೇಟಿಗೆ ತೆರಳಿದ್ದಾರೆ.

    ಇವರು 1989 – 1994, 1994-1999 ಅವಧಿಯಲ್ಲಿ ಶಿಗ್ಗಾವಿ ಕ್ಷೇತ್ರದ ಶಾಸಕರಾಗಿದ್ದರು. ನಂತರ 2004ರಲ್ಲಿ ಧಾರವಾಡ ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿದ್ದರು. ಮುಂದೆ 2009ರಲ್ಲಿ ಕಾಂಗ್ರೆಸ್​ನಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ದಸಿ ಪ್ರಹ್ಲಾದ್ ಜೋಶಿ ವಿರುದ್ಧ ಸೋತಿದ್ದರು.

    ನಂತರ 2018ರಲ್ಲಿ ಮತ್ತೆ ಬಿಜೆಪಿ ಸೇರಿದ್ದ ಇವರು ಇದೀಗ ವಾಪಸ್​ ಕಾಂಗ್ರೆಸ್​ಗೆ ಹೋಗುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್​, ಸಿಎಂ ಸ್ವಕ್ಷೇತ್ರದಲ್ಲಿ ಆಪರೇಷನ್ ಹಸ್ತ ಮಾಡಿದ ಹಾಗೆ ಆಗಿದೆ. ನಾಜಿ ಸಂಸದ ಮಂಜುನಾಥ್ ಕುನ್ನೂರು ಪ್ರಬಲ ಪಂಚಮಸಾಲಿ ಮುಖಂಡರೂ ಹೌದು. ಅವರೊಂದಿಗೆ, ಅವರ ಪುತ್ರ ಚಂದನ ಕುನ್ನೂರು ಕೂಡ ಕಾಂಗ್ರೆಸ್​ ಸೇರುತ್ತಿದ್ದಾರೆ.

    ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗೆ ಶಿಗ್ಗಾವಿಯಲ್ಲಿ ಶಾಕ್ ನೀಡಿರುವ ಕಾಂಗ್ರೆಸ್, ಸಿಎಂ ವಿರುದ್ಧ ಪಂಚಮಸಾಲಿ ‌ಅಸ್ತ್ರ ಪಯೋಗ ಮಾಡುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts