More

    ನಾಳೆ ಬಿಜೆಪಿ ಸಿಇಸಿ ಸಭೆ: 2ನೇ ಪಟ್ಟಿ ಕುರಿತು ಚರ್ಚೆ, ರಾಜ್ಯದ ಪ್ರಮುಖ ನಾಯಕರು ಭಾಗಿ ಸಾಧ್ಯತೆ!

    ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಕಾವೇರಿದ್ದು, ಬಿಜೆಪಿ ಎರಡನೇ ಪಟ್ಟಿಗಾಗಿ ಕಾತರದಿಂದ ಎದುರುನೋಡುತ್ತಿದೆ. ಇಂದು ನವದೆಹಲಿಯಲ್ಲಿ ನಡೆಯಬೇಕಿದ್ದ ಬಿಜೆಪಿ, ಸಿಇಸಿ ಸಭೆ ರದ್ದಾಗಿದ್ದು, ಸೋಮವಾರ (ಮಾ. 11) ಸಂಜೆ 5 ಗಂಟೆಗೆ ಮುಂದೂಡಿಕೆಯಾಗಿದೆ. ಈ ಬಗ್ಗೆ ಬಿಜೆಪಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ.

    ಇದನ್ನೂ ಓದಿ: ಭಾನುವಾರವೂ ಜನರಿಲ್ಲದೆ ಸಬ್ ರಿಜಿಸ್ಟ್ರಾರ್ ಕಚೇರಿಗಳು ಖಾಲಿ ಖಾಲಿ…!

    ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಿಇಸಿ ಸಭೆಗೆ ಈಗ ಸಮಯ ನಿಗದಿಯಾಗಿದ್ದು, ಸೋಮವಾರ ಸಂಜೆ ಐದು ಗಂಟೆಗೆ ನಡೆಯಲಿದೆ ಎಂದು ಹೇಳಲಾಗಿದೆ. ಈ ವೇಳೆ ಎರಡನೇ ಪಟ್ಟಿ ಕುರಿತು ರಾಜ್ಯದ ಪ್ರಮುಖ ನಾಯಕರು ದೆಹಲಿಗೆ ತೆರಳಲಿದ್ದಾರೆ.

    ಪಕ್ಷದ ಹಿರಿಯ ನಾಯಕರಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಆರ್​. ಅಶೋಕ್, ಅರವಿಂದ್ ಬೆಲ್ಲದ್, ಪ್ರಲ್ಹಾದ ಜೋಷಿ, ಬಿ.ವೈ. ವಿಜಯೇಂದ್ರ, ರಾಜೇಶ್ ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.

    ಮಾರ್ಚ್​​ 02ರಂದು ಲೋಕಸಭಾ ಚುನಾವಣೆಯ ಹಿನ್ನೆಲೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿತ್ತು. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ವಿನೋದ್‌ ತಾವ್ಡೆ ಅವರು ದಿಲ್ಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದರು. ಈ ಪಟ್ಟಿಯಲ್ಲಿ ಕರ್ನಾಟಕದಿಂದ ಯಾವುದೇ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಹೆಸರನ್ನು ಘೋಷಿಸರಲಿಲ್ಲ. ಆದರೆ ಈಗ ಎರಡನೇ ಪಟ್ಟಿಯಲ್ಲಿ ಇದನ್ನು ನಿರೀಕ್ಷಿಸಬಹುದು ಎಂಬ ಲೆಕ್ಕಾಚಾರಗಳಿವೆ.

    ಹರಾಜಿನಲ್ಲಿ ಒಂದೇ ಒಂದು ನಿಂಬೆ ಹಣ್ಣಿಗೆ 35,000 ರೂ.! ಖರೀದಿ ಮಾಡಿದ ವ್ಯಕ್ತಿಯ ಖುಷಿ ಹೇಳತೀರದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts