More

    ನೂತನ ಸಚಿವರ ಹೆಸರು ಪ್ರಕಟವಾದ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ

    ಬೆಂಗಳೂರು: ನೂತನ ಸಚಿವರ ಹೆಸರು ಪ್ರಕಟವಾದ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

    ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಟ್ವೀಟ್​ ಮೂಲಕ ಆಕ್ರೋಶ ಹೊರಹಾಕಿದ್ದು, ಯಡಿಯೂರಪ್ಪನವರೇ ಮಂತ್ರಿಮಂಡಲ ವಿಸ್ತರಣೆಯಲ್ಲಿ ಸಚಿವರ ಆಯ್ಕೆ ಪ್ರಕ್ರಿಯೆಯ ಮಾನದಂಡಗಳೇನು? ನಿಮಗೆ, ನಮ್ಮ ರಾಜ್ಯ ಮತ್ತು ರಾಷ್ಟ್ರದ ನಾಯಕರುಗಳಿಗೆ ನಿಷ್ಟಾವಂತ ಯುವ ಕಾರ್ಯಕರ್ತರು ಕಾಣುತ್ತಿಲ್ಲವೆ? ನಮ್ಮ ಕಷ್ಟ-ನಷ್ಟಗಳನ್ನು ಆಲಿಸುತ್ತಿದ್ದ ಶ್ರೀ ಅನಂತಕುಮಾರ್ ಜಿ ರವರ ಇಲ್ಲದಿರುವಿಕೆ ಎದ್ದು ಕಾಣುತ್ತಿದೆ ಎಂದು ಬೇಸರ ಹೊರಹಾಕಿದ್ದಾರೆ.

    ಇದನ್ನೂ ಓದಿರಿ: ಸಚಿವ ಸ್ಥಾನಕ್ಕೆ ಎಚ್. ನಾಗೇಶ್​ ರಾಜೀನಾಮೆ

    ಗೆದ್ದ ಹಿರಿಯ ಶಾಸಕರಿಗೆ ಬೆಲೆಯೇ ಇಲ್ವಾ?
    ಬಿಜೆಪಿಯ ಹಿರಿಯ ಶಾಸಕ ಜಿ.ಎಚ್​. ತಿಪ್ಪಾರೆಡ್ಡಿ ಮಾತನಾಡಿ, ಸೋತ ಸಿ.ಪಿ.ಯೋಗೇಶ್ವರ್​ಗೆ ಏಕೆ ಮಂತ್ರಿಗಿರಿ? ಗೆದ್ದ ಹಿರಿಯ ಶಾಸಕರಿಗೆ ಬೆಲೆಯೇ ಇಲ್ವಾ? ಸರ್ಕಾರ ರಚನೆಗೆ ಸಹಕರಿಸಿದ್ದಕ್ಕೆ ಯೋಗೀಶ್ವರ್​ಗೆ ಮಂತ್ರಿಗಿರಿ ಅಂತಾರೆ, ಅದೇನು ಸಹಾಯ ಮಾಡಿದ್ದಾರೋ ನನಗೆ ಅರ್ಥ ಆಗ್ತಿಲ್ಲ. ಸೋತವರಿಗೆ ವಿಧಾನ ಪರಿಷತ್ ಸ್ಥಾನ ಕೊಟ್ಟಿದ್ದು ಸಂತೋಷ. ಬಿಜೆಪಿ ಸರ್ಕಾರ ರಚನೆ ವೇಳೆ ಯೋಗೇಶ್ವರ್ ನನಗೂ ಕರೆ ಮಾಡಿದ್ದರು. ಯಾವ ಕಾರಣಕ್ಕೆ ನನಗೆ ಕರೆ ಮಾಡಿ ಮಾತಾಡುತ್ತಿದ್ದರೋ ಗೊತ್ತಿಲ್ಲ. ಸಂಪುಟದಲ್ಲಿ ಬೆಳಗಾವಿ, ಬೆಂಗಳೂರಿನವರೇ ಅರ್ಧಕ್ಕಿಂತ ಹೆಚ್ಚಿದ್ದಾರೆ. ಪಕ್ಷ ವಿರೋಧಿ‌ ಕೆಲಸ ಮಾಡಿದ ಒಂದಿಬ್ಬರಿಗೂ ಮಂತ್ರಿಗಿರಿ ಕೊಡ್ತಿದ್ದಾರೆ. ಮೂರು ಸಲದ ಬಿಜೆಪಿ ಅಧಿಕಾರದಲ್ಲೂ ಜಿಲ್ಲೆಗೆ ಮಂತ್ರಿಸ್ಥಾನ ಸಿಕ್ಕಿಲ್ಲ. ಈ ಸಲದ ಸಚಿವ ಸಂಪುಟದಲ್ಲಿ‌ ಸಮಾನತೆ ಕಾಣುತ್ತಿಲ್ಲ. ಜಿಲ್ಲೆ, ರಾಜ್ಯ ಮಟ್ಟದಲ್ಲಿ ಜನ ಸೇವೆಗೆ ಅವಕಾಶ ಸಿಗದೆ ನಿರಾಸೆಯಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ರೇಣುಕಾಚಾರ್ಯ ಕಣ್ಣೀರು
    ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮಾತನಾಡಿ ನನಗೆ ಈ ಬಾರಿ ಸಂಪುಟದಲ್ಲಿ ಅವಕಾಶ ಸಿಗಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ ಸಚಿವ ಸ್ಥಾನಕ್ಕಾಗಿ ನಾನು ಲಾಬಿ ಮಾಡಿಲ್ಲ, ಅರ್ಜಿಯನ್ನೂ ಹಾಕಿರಲಿಲ್ಲ. ಲಾಬಿ ಮಾಡದೆ ಇದ್ದದ್ದೂ ತಪ್ಪು ಎಂದು ಎನಿಸುತ್ತಿದೆ ಎಂದು ಕಣ್ಣೀರು ಹಾಕಿದ್ದಾರೆ.

    ಇದನ್ನೂ ಓದಿರಿ: ನಾನು ರೇಪ್​ ಮಾಡಿಲ್ಲ ಆದ್ರೆ… ಸಚಿವರ ಸ್ಫೋಟಕ ಹೇಳಿಕೆಯಿಂದ ಗಾಯಕಿ ಆರೋಪಕ್ಕೆ ಟ್ವಿಸ್ಟ್​!

    ಎಚ್​. ವಿಶ್ವನಾಥ್ ಕೆಂಡಾಮಂಡಲ​
    ಮೈತ್ರಿ ಸರ್ಕಾರ ಬೀಳುವಲ್ಲಿ ಪ್ರಮುಖ ಪಾತ್ರವಹಿಸಿದ ಎಚ್​. ವಿಶ್ವನಾಥ್​ ಸಿಎಂ ಬಿ.ಎಸ್​. ಯಡಿಯೂರಪ್ಪ ವಿರುದ್ಧ ಗುಡುಗಿದ್ದು, ಯಡಿಯೂರಪ್ಪ ನಾಲಿಗೆ ಹಾಗೂ ಮಾತು ಕಳೆದುಕೊಂಡಿದ್ದಾರೆ. ಯಡಿಯೂರಪ್ಪ ಅವರನ್ನು ಸಿಎಂ ಮಾಡಲು ಪ್ರಯತ್ನ ಪಟ್ಟೆ‌. ಅವರೂ ಸಹ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ರಾಜಕೀಯ ನಾಯಕರು ಸಮಯಕ್ಕೆ ಅಷ್ಟೆ. ಯಾರಿಗೂ ಕೃತಜ್ಞತೆ ಇಲ್ಲ. ನಾಗೇಶನನ್ನು ಯಾಕೆ ಸಂಪುಟದಿಂದ ತೆಗೆಯಬೇಕು? ಮುನಿರತ್ನಗೆ ಯಾಕೆ ಸಚಿವ ಸ್ಥಾನ ಕೊಡುತ್ತಿಲ್ಲ? ಯೋಗೀಶ್ವರ್‌ಗೆ ಯಾಕೆ ಕೊಡುತ್ತಿದ್ದೀರಿ? ಎಂದು ಪ್ರಶ್ನಿಸಿರುವ ವಿಶ್ವನಾಥ್​, ಯೋಗೀಶ್ವರ್​ ವಿರುದ್ಧ 420 ಕೇಸ್ ಇದೆ. ಅವನು ವಂಚಕ. ಸಾವಿರಾರು ಜನರಿಗೆ ಮೋಸ ಮಾಡಿದ್ದಾನೆ. ಅವನಿಗೆ ನೀವೇನಾದರೂ ಸಿಕ್ಕಿ ಹಾಕಿಕೊಂಡಿದ್ದೀರಾ? ಎಂದು ಬಿಎಸ್​ವೈರನ್ನು ಪ್ರಶ್ನಿಸಿದರು.

    ಏಳು ಮಂದಿಗೆ ಒಲಿದ ಸಚಿವ ಸ್ಥಾನ: ನೂತನ ಸಚಿವರ ಹೆಸರು ಪ್ರಕಟಿಸಿದ ಸಿಎಂ ಬಿಎಸ್​ವೈ

    ನೂತನ ಸಚಿವರ ಪ್ರಮಾಣ ವಚನಕ್ಕೂ ಮುನ್ನವೇ ಸಿಎಂ ಬಿಎಸ್​ವೈ ವಿರುದ್ಧ ಎಚ್​. ವಿಶ್ವನಾಥ್​ ಗುಡುಗು

    ನಾನು ಅರ್ಜಿ ಹಾಕಿರಲಿಲ್ಲ, ಸೋತಿದ್ರೆ ಮಂತ್ರಿಯಾಗ್ತಿದ್ದೆಯೇನೋ- ರೇಣುಕಾಚಾರ್ಯ ಕಣ್ಣೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts