More

    ಪೂರ್ವ ನೌಕಾಪಡೆ ಕಮಾಂಡರ್ ಮುಖ್ಯಸ್ಥರಾಗಿ ಬಿಸ್ವಜಿತ್ ಅಧಿಕಾರ ಸ್ವೀಕಾರ

    ವಿಶಾಖಪಟ್ಟಣಂ: ಈಸ್ಟರ್ನ್ ನೇವಲ್ ಕಮಾಂಡ್ (ಇಎನ್‌ಸಿ) ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಬಿಸ್ವಜಿತ್ ದಾಸ್‌ಗುಪ್ತಾ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ.
    ವೈಸ್ ಅಡ್ಮಿರಲ್ ಎಸ್. ಎನ್. ಘೋರ್ಮಡೆ, ನವದೆಹಲಿಯ ರಕ್ಷಣಾ ಸಚಿವಾಲಯದ (ನೌಕಾಪಡೆ) ಇಂಟಿಗ್ರೇಟೆಡ್ ಹೆಡ್​ ಕ್ವಾರ್ಟರ್ಸ್ ನಿಯಂತ್ರಕ ಸಿಬ್ಬಂದಿಯಾಗಿ ವರ್ಗಾವಣೆಗೊಂಡಿದ್ದು, ದಾಸ್​​ಗುಪ್ತಾ ಈ ಅಧಿಕಾರ ವಹಿಸಿಕೊಂಡಿದ್ದಾರೆ.

    ಇದನ್ನೂ ಓದಿ: ತಂದೆಯಿಲ್ಲದ ಹೆಣ್ಣು ಮಗುವಿನ ಸಂಪೂರ್ಣ ವಿದ್ಯಾಭ್ಯಾಸಕ್ಕೆ ನೆರವಾದ ಕಿಚ್ಚ ಸುದೀಪ್​

    ಬಿಸ್ವಜಿತ್ ದಾಸ್‌ಗುಪ್ತಾ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿ. 1985 ರಲ್ಲಿ ಭಾರತೀಯ ನೌಕಾಪಡೆಗೆ ಸೇರಿದ ಅವರು ನೆವಿಗೇಷನ್ ಮತ್ತು ನಿರ್ದೇಶನದಲ್ಲಿ ಪರಿಣತರಾಗಿದ್ದಾರೆ. ಪ್ರಮುಖ ಯುದ್ಧನೌಕೆಗಳಾದ ಐಎನ್ಎಸ್ ನಿಶಾಂಕ್, ಐಎನ್ಎಸ್ ಕಾರ್ಮುಕ್, ಐಎನ್ಎಸ್ ತಬಾರ್ ಮತ್ತು ಐಎನ್ಎಸ್ ವಿರಾಟ್ ಸೇರಿದಂತೆ ಮುಂಚೂಣಿ ನೌಕೆಗಳ ಕಮಾಂಡರ್ ಆಗಿದ್ದಾರೆ.

    ಇದನ್ನೂ ಓದಿ: ಕ್ವಾರಂಟೈನ್ ಕೇಂದ್ರದಲ್ಲಿ ಪ್ರೇಮ ಪ್ರಸಂಗ: ಯುವಕ-ಬಾಲಕಿ ಪರಾರಿ! 

    ಕಾರ್ಯಾಚರಣೆ, ತರಬೇತಿ, ಸಿಬ್ಬಂದಿ ನೇಮಕಾತಿ, ನಿರ್ದೇಶನದಂತಹ ಹಲವು ಪ್ರಮುಖ ಜವಾಬ್ದಾರಿ ನಿರ್ವಹಿಸಿದ ಅನುಭವ ಇವರಿಗಿದೆ.
    ಅವರ ವಿಶೇಷ ಸೇವೆಗಾಗಿ ಅತಿ ವಿಶಿಷ್ಟ್ ಸೇವಾ ಪದಕ ಮತ್ತು ವಿಶಿಷ್ಠ್ ಸೇವಾ ಪದಕ ಹಾಗೂ ಗೌರವಕ್ಕೆ ಪಾತ್ರರಾಗಿದ್ದಾರೆ. ಆಪರೇಷನ್ ರಾಹತ್ ಅಡಿ 2015 ರಲ್ಲಿ ಕಲಹ ಪೀಡಿತ ಯೆಮನ್‌ನಿಂದ ಜನರನ್ನು ಸ್ಥಳಾಂತರಿಸುವ ಕಾರ್ಯಾಚರಣೆಗಾಗಿ ಅವರು ಯುದ್ಧ ಸೇವಾ ಪದಕ ಹಾಗೂ ಗೌರವಕ್ಕೆ ಪಾತ್ರರಾಗಿದ್ದಾರೆ.

    ಪಾಗಲ್​ ಪ್ರೇಮಿಯ ಪ್ರತೀಕಾರದ ಹುಚ್ಚಾಟ ಮಾಡಿರುವ ಅನಾಹುತ ಏನೆಂದು ತಿಳಿದರೆ ಶಾಕ್​ ಆಗೋದ ಗ್ಯಾರಂಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts