More

    ಕನಿಷ್ಠ 21 ಸಾವಿರ ರೂ. ವೇತನ ನೀಡಿ

    ದೇವದುರ್ಗ: ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ನೀಡಲು ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ ಪಟ್ಟಣದಲ್ಲಿ ಬಿಸಿಯೂಟ ಯೋಜನಾಧಿಕಾರಿ ಬಂದೋಲಿ ಸಾಬ್‌ಗೆ ಸೋಮವಾರ ಮನವಿ ಸಲ್ಲಿಸಿತು.

    ನೌಕರರು ಮೃತಪಟ್ಟಾಗ ಕುಟುಂಬಕ್ಕೆ ಕನಿಷ್ಠ 25 ಲಕ್ಷ ರೂ. ಪರಿಹಾರ ಒದಗಿಸಿ

    ರಾಜ್ಯದಲ್ಲಿ ಅತಿ ಕಡಿಮೆ ಸಂಬಳದಲ್ಲಿ ಅಕ್ಷರ ದಾಸೋಹ ಬಿಸಿಯೂಟ ನೌಕರರು ಕೆಲಸ ಮಾಡುತ್ತಿದ್ದಾರೆ. ಬೇಡಿಕೆ ಈಡೇರಿಕೆಗೆ ಹಲವು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರಗಳು ಸ್ಪಂದಿಸುತ್ತಿಲ್ಲ. ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 1.20ಲಕ್ಷ ನೌಕರಿಗೆ ಜೀವನ ಭದ್ರತೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇದನ್ನೂ ಓದಿ: ರಿಷಭ್​ ಪಂತ್​ ಶೀಘ್ರ ದೇಶೀಯ ಕ್ರಿಕೆಟ್​ಗೆ ವಾಪಸ್; ಜನವರಿಯಲ್ಲಿ ಟೀಮ್​ ಇಂಡಿಯಾದತ್ತ!​

    ಕನಿಷ್ಠ 21 ಸಾವಿರ ರೂ. ವೇತನ ನೀಡಬೇಕು. ಬಿಸಿಯೂಟ ಅನುದಾನ ನೀಡುವ ಎಸ್ಡಿಎಂಸಿ ಜಂಟಿ ಖಾತೆ ಆದೇಶ ವಾಪಸ್ ಪಡೆಯಬೇಕು. ಕೆಲಸದ ವೇಳೆ ನೌಕರರು ಮೃತಪಟ್ಟಾಗ ಕುಟುಂಬಕ್ಕೆ ಕನಿಷ್ಠ 25 ಲಕ್ಷ ರೂ. ಪರಿಹಾರ ನೀಡಬೇಕು. ನಿವೃತ್ತಿಯಾದ ನೌಕರರಿಗೆ ಈಡುಗಂಟು ನೀಡಬೇಕು. ಬಿಸಿಯೂಟ ಯೋಜನೆ ಖಾಸಗೀಕರಣ ಕೈಬಿಡಬೇಕು. ಬೇಡಿಕೆ ಈಡೇರಸದಿದ್ದರೆ ನ.2ರಿಂದ ಕೆಲಸವನ್ನು ಬಹಿಷ್ಕರಿಸಿ ಬೆಂಗಳೂರು ಚಲೋ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ತಾಲೂಕು ಅಧ್ಯಕ್ಷೆ ಮರಿಯಮ್ಮ, ತಾಲೂಕು ಕಾರ್ಯದರ್ಶಿ ಶ್ರೀಲೇಖಾ , ಖಜಾಂಚಿ ಶೋಭಾ, ಸಂಗಮ್ಮ, ಪದ್ಮಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts