More

    ಕಲಬುರಗಿಯಲ್ಲಿ ಬಿಐಎಸ್ ದಾಳಿ

    ಹುಬ್ಬಳ್ಳಿ: ನಕಲಿ ಐಎಸ್​ಐ ಗುರುತು ಮತ್ತು ಬಿಐಎಸ್ (ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಪ್ರಮಾಣಪತ್ರದ ಗುರುತು, ಲೈಸೆನ್ಸ್ ಸಂಖ್ಯೆ ಹಾಕಿ 20 ಲೀ. ನೀರಿನ ಜಾರ್ ಮಾರಾಟ ಮಾಡುತ್ತಿದ್ದ ಕಲಬುರಗಿಯ ಘಟಕವೊಂದರ ಮೇಲೆ ದಾಳಿ ಮಾಡಿದ ಇಲ್ಲಿಯ ಬಿಐಎಸ್ ಕಚೇರಿ ಅಧಿಕಾರಿಗಳು, ಪ್ರಕರಣ ದಾಖಲಿಸಿದ್ದಾರೆ.

    ಕಲಬುರಗಿ ಕೈಲಾಶ ನಗರ ಬ್ರಹ್ಮಪುರದಲ್ಲಿಯ ನಂದಿ ಡ್ರಿಂಕಿಂಗ್ ವಾಟರ್ ಪ್ಲಾಂಟ್​ನ ಮೇಲೆ ಗುರುವಾರ ದಾಳಿ ನಡೆಸಲಾಗಿತ್ತು. ಈ ಘಟಕದವರು ಸೂಕ್ತ ಪರವಾನಗಿ ಮತ್ತು ಪ್ರಮಾಣಪತ್ರ ಇಲ್ಲದೆ 20 ಲೀ. ನೀರಿನ ಜಾರ್​ಗಳನ್ನು ಬೇರೆ ಬೇರೆ ಹೆಸರುಗಳಲ್ಲಿ ಉತ್ಪಾದಿಸಿ ಮಾರಾಟ ಮಾಡುತ್ತಿದ್ದರು. ಬೇರೆ ಉತ್ಪಾದಕರ ಐಎಸ್​ಐ ಮತ್ತು ಬಿಐಎಸ್ ಗುರುತು, ಲೈಸೆನ್ಸ್ ನಂಬರ್​ಗಳನ್ನು ನಮೂದಿಸುತ್ತಿದ್ದರು. ದಾಳಿ ವೇಳೆ ಲೇಬಲ್ ಅಂಟಿಸಿದ ಹಲವು ಜಾರ್​ಗಳು ಮತ್ತು ಐಎಸ್​ಐ ಗುರುತು ಇರುವ ಹಲವು ಲೇಬಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಬಿಐಎಸ್ ಕಾನೂನು ಪ್ರಕಾರ ಸ್ಟ್ಯಾಂಡರ್ಡ್ ಮಾರ್ಕ್, ಅಧಿಕೃತ ಲೈಸನ್ಸ್ ಇಲ್ಲದೆ ಹೀಗೆ ವಸ್ತುಗಳನ್ನು ಉತ್ಪಾದಿಸಿ ಮಾರಾಟ ಮಾಡುವಂತಿಲ್ಲ. ಈ ಹಿನ್ನೆಲೆಯಲ್ಲಿ ನಂದಿ ಡ್ರಿಂಕಿಂಗ್ ವಾಟರ್ ಪ್ಲಾಂಟ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಿಐಎಸ್ ಹುಬ್ಬಳ್ಳಿ ಕಚೇರಿ ಮುಖ್ಯಸ್ಥ ಮತ್ತು ವೈಜ್ಞಾನಿಕ ಅಧಿಕಾರಿ ಎಸ್.ಡಿ. ಸೆಲ್ವನ್ ನೇತೃತ್ವದಲ್ಲಿ ಪೊಲೀಸರ ಸಹಿತವಾಗಿ ದಾಳಿ ಮಾಡಲಾಗಿತ್ತು.

    ಮಾಹಿತಿ ನೀಡಿ

    ಯಾವುದೇ ವಸ್ತು ಉತ್ಪಾದಿಸುವವರು ಐಎಸ್​ಐ ಮಾರ್ಕ್​ನ ದುರ್ಬಳಕೆ ಮಾಡುತ್ತಿರುವ ಕುರಿತು ಸಾರ್ವಜನಿಕರಿಗೆ ಮಾಹಿತಿ ಇದ್ದರೆ, ಬಿಐಎಸ್ ಕೇರ್ ಮೊಬೈಲ್ ಆಪ್ ಮೂಲಕ ತಿಳಿಸಬಹುದು. ಜ್ಠಚಿಟಃಚಿಜಿಠ.ಜಟಡ.ಜ್ಞಿ ಇ ಮೇಲ್​ಗೆ ಅಥವಾ ಬಿಐಎಸ್ ಹುಬ್ಬಳ್ಳಿ ಶಾಖಾ ಕಚೇರಿ, ಕೆಎಸ್​ಎಫ್​ಸಿ ಕಟ್ಟಡ, ರಾಯಾಪುರ, ಧಾರವಾಡ (ದೂ.ಸಂ. 0836-2957898) ವಿಳಾಸಕ್ಕೆ ಪತ್ರದ ಮೂಲಕವೂ ತಿಳಿಸಬಹುದು. ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts