More

    ಪ್ರಪಂಚ ಎದುರಿಸಿ ಬದುಕು ಕಟ್ಟಿಕೊಳ್ಳಿ

    ವಿಜಯವಾಣಿ ಸುದ್ದಿಜಾಲ ವಿಜಯಪುರ
    ಪ್ರಪಂಚಕ್ಕೆ ಹೆದರಿ ಬದುಕಬೇಡಿ. ಪ್ರಪಂಚವನ್ನು ಎದುರಿಸಿ ಬದುಕಿ ಎಂದು ಪ್ರಗತಿ ಆಂಗ್ಲ ಶಾಲೆಯ ಮುಖ್ಯಶಿಕ್ಷಕ ಜೆ.ಎನ್ ಪ್ರಕಾಶ್ ಹೇಳಿದರು.
    ಪಟ್ಟಣದ ಪ್ರಗತಿ ಆಂಗ್ಲ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಲೂಯಿಸ್ ಬ್ರೈಲ್ ಅವರ ಜನ್ಮದಿನಾಚರಣೆಯಲ್ಲಿ ಮಾತನಾಡಿದರು. ಎಲ್ಲ ಅಂಗಗಳಿದ್ದು, ಏನೂ ಸಾಧನೆ ಮಾಡಲಾಗದೆ ಇರುವಂತಹ ಸಂದರ್ಭದಲ್ಲಿ ಕಣ್ಣುಗಳನ್ನು ಕಳೆದುಕೊಂಡಿದ್ದ ವ್ಯಕ್ತಿಗಳ ಸಾಧನೆಯನ್ನು ನಾವೆಲ್ಲರೂ ಪ್ರಶಂಸಲೇಬೇಕು ಎಂದರು.
    ವಿಜಯಪುರದ ಅಂಧರ ಕ್ಷೇಮಾಭಿವೃದ್ಧಿ ಸಂಸ್ಥೆಯಲ್ಲಿ ಅಭ್ಯಾಸ ಮಾಡಿ, ರೈಲ್ವೆ ಇಲಾಖೆಯ ಮೈಸೂರಿನ ಕಚೇರಿಯಲ್ಲಿ ಅಧೀಕ್ಷಕರಾಗಿರುವ ಪ್ರವೀಣ್, ಅಂಧರು ಬಳಸುವ ಸ್ಟಿಕ್, ಬ್ರೈಲ್ ಬುಕ್, ಚೆಸ್ ಬೋರ್ಡ್, ಗಡಿಯಾರ ಇತ್ಯಾದಿ ಪರಿಕರಗಳನ್ನು ತೋರಿಸಿ, ಯಾವ ರೀತಿಯ ಅಕ್ಷರ ಬರೆಯುತ್ತಾರೆ, ಓದುತ್ತಾರೆ ಸಂವಹನ ಮಾಡುತ್ತಾರೆ ಎಂಬುದನ್ನು ತಿಳಿಸಿದರು. ಅಂಧರು ಹಿಡಿದುಕೊಂಡು ನಡೆಯುವಂತಹ ಬಿಳಿಯ ಕೋಲಿನ ಬಗ್ಗೆ ಸವಿವರವಾಗಿ ತಿಳಿಸಿದರು.
    ಸಂಸ್ಥೆಯ ಸಂಯೋಜಕ ರುದ್ರೇಶ್ ಮಾತನಾಡಿ, 200 ವರ್ಷಗಳ ಹಿಂದೆ 3ನೇ ವಯಸ್ಸಿನಲ್ಲಿ ಕಣ್ಣು ಕಳೆದುಕೊಂಡ ಬಾಲಕ ಓದಲೇ ಬೇಕೆಂಬ ಛಲದಿಂದ ಬೆಳೆದು, ಕಂಡು ಹಿಡಿದ ಅಂಧರ ಲಿಪಿ ಲಕ್ಷಾಂತರ ಅಂಧರ ಸಾಕ್ಷರತೆಗೆ, ಬದುಕಿಗೆ ದಾರಿ ಮಾಡಿದ್ದು ದೊಡ್ಡ ಇತಿಹಾಸ ಎಂದು ಹೇಳಿದರು.
    ಶಿಕ್ಷಕಿಯರಾದ ನಿರ್ಮಲಾ, ಶ್ರಾವಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts