More

    ಇಷ್ಟಲಿಂಗ ಪೂಜೆಯಿಂದ ಜನ್ಮ ಸಾರ್ಥಕ

    ಲಕ್ಷ್ಮೇಶ್ವರ: ವೀರಶೈವ ಧರ್ಮದಲ್ಲಿ ಗುರು-ಲಿಂಗ-ಜಂಗಮಕ್ಕೆ ವಿಶಿಷ್ಟ ಸ್ಥಾನವಿದೆ. ಶ್ರೀ ಗುರುವಿನಿಂದ ಶಿವದೀಕ್ಷೆ ಸಂಪನ್ನರಾಗಿ ಇಷ್ಟಲಿಂಗ ಪಡೆದು ಪೂಜಿಸಿದರೆ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.

    ಮಹಾಶಿವರಾತ್ರಿ ಜಾತ್ರಾಮಹೋತ್ಸವ ನಿಮಿತ್ತ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಗುರುವಾರ ಆಯೋಜಿಸಿದ್ದ ಶಿವಲಿಂಗ ಪೂಜೆ, ಜಂಗಮ ವಟುಗಳಿಗೆ ಅಯ್ಯಾಚಾರ-ಲಿಂಗದೀಕ್ಷೆ ವಿವಿಧ ಧಾರ್ವಿುಕ ಕಾರ್ಯಕ್ರಮಗಳನ್ನು ನೆರವೇರಿಸಿ ಅವರು ಆಶೀರ್ವಚನ ನೀಡಿದರು. ಉಪವಾಸ ವ್ರತಾಚರಣೆ ಆತ್ಮ ಸಾಕ್ಷಾತ್ಕಾರದ ಹಬ್ಬವಾಗಿದೆ. ಅಜ್ಞಾನದ ಅಂಧಕಾರ ಕಳೆದು ಜಗತ್ತಿಗೆ ಸುಜ್ಞಾನ ದಯಪಾಲಿಸಲು ಸಾಕ್ಷಾತ್ ಶಿವನೇ ಧರೆಗಿಳಿದ ಪುಣ್ಯದಿನವಾಗಿದೆ. ಶಿವನೆಂದರೆ ಮುಕ್ತಿಪ್ರಾಪ್ತಿ, ಪಾಪನಾಶ, ಮಂಗಳಕರ, ಪರಿಪೂರ್ಣ ಪ್ರಾಪ್ತ ಎಂಬುದಾಗಿದೆ. ಶಿವರಾತ್ರಿಯಂದು ಕೈಗೊಳ್ಳುವ ಉಪವಾಸ ವ್ರತಾಚರಣೆಯಿಂದ ದೇಹ, ಬುದ್ಧಿ, ಮನಸ್ಸು ಪ್ರಸನ್ನಚಿತ್ತವಾಗಿ ಸುಜ್ಞಾನದ ಬೆಳಕಿನತ್ತ ಸಾಗಿಸುತ್ತದೆ. ವೀರಶೈವ ಧರ್ಮದವರು ಅಯ್ಯಾಚಾರ ಮತ್ತು ಶಿವದೀಕ್ಷೆ ಸಂಸ್ಕಾರ ಪಡೆಯುವುದು ಪ್ರಮುಖವಾಗಿದೆ. ವಿಭೂತಿ, ಲಿಂಗ, ಜೋಳಿಗೆ, ದಂಢ ಇವು ಸಂಸ್ಕಾರದ ಸಂಕೇತಗಳು. ಪ್ರತಿಯೊಬ್ಬರೂ ನಿತ್ಯ ‘ಓಂ ನಮಃ ಶಿವಾಯ’ ಪಂಚಾಕ್ಷರಿ ಮಂತ್ರ ಪಠಣ ಮಾಡಬೇಕು ಎಂದರು.

    ಲಕ್ಷ್ಮೇಶ್ವರ, ಕುಂದಗೋಳ, ಶಿಗ್ಗಾಂವಿ ತಾಲೂಕು ಹಾಗೂ ಮುಕ್ತಿಮಂದಿರ ಕ್ಷೇತ್ರದ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿದ್ದರು. 100ಕ್ಕೂ ಹೆಚ್ಚು ಜಂಗಮ ವಟುಗಳಿಗೆ ಲಿಂಗದೀಕ್ಷೆ ನೀಡಲಾಯಿತು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts