More

    ಜನನ ಪ್ರಮಾಣಪತ್ರದಲ್ಲಿ ಮಕ್ಕಳಿಬ್ಬರ ವಯಸ್ಸು 102, 104: ಇದು ಅಧಿಕಾರಿಯ ಎಡವಟ್ಟಲ್ಲ, ಉದ್ದೇಶಪೂರ್ವಕ ಪ್ರಮಾದ!

    ಲಖನೌ: ಉತ್ತರ ಪ್ರದೇಶದ ಮಕ್ಕಳಿಬ್ಬರ ವಯಸ್ಸು ಬರೋಬ್ಬರಿ 100 ವರ್ಷಕ್ಕಿಂತ ಹೆಚ್ಚು. ಹೀಗೆಂದು ನಾವು ಹೇಳುತ್ತಿಲ್ಲ ಮಕ್ಕಳಿಗೆ ನೀಡಿರುವ ಜನನ ಪ್ರಮಾಣಪತ್ರವೇ ಹೇಳುತ್ತಿದೆ. ಅಧಿಕಾರಿಗಳ ಎಡವಟ್ಟು ಹೀಗೂ ಇರುತ್ತದಾ ಎಂದು ಯೋಚಿಸಬಹುದು. ಆದರೆ, ಇದು ಎಡವಟ್ಟಲ್ಲ ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ.

    ಹೌದು, ಶುಭ್(4) ಹೆಸರಿನ ಮಗುವಿನ ವಯಸ್ಸನ್ನು 104 ಎಂದು ಹಾಗೂ ಸಂಕೇತ್​(2) ಹೆಸರಿನ ಮಗುವಿನ ವಯಸ್ಸನ್ನು 102 ಎಂದು ಜನನ ಪ್ರಮಾಣ ಪತ್ರದಲ್ಲಿ ನಮೂದಿಸಲಾಗಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬರೇಲಿ ನ್ಯಾಯಾಲಯವು ಲಂಚ ನೀಡಲು ಒಪ್ಪದಿದ್ದಕ್ಕೆ ತಪ್ಪು ಜನನ ಪ್ರಮಾಣಪತ್ರ ನೀಡಿದ ಗ್ರಾಮಾಭಿವೃದ್ಧಿ ಅಧಿಕಾರಿ ವಿರುದ್ಧ ಕೇಸ್​ ದಾಖಲಿಸುವಂತೆ ಇತ್ತೀಚೆಗಷ್ಟೇ ಆದೇಶ ಹೊರಡಿಸಿದೆ.

    ಖುತಾರ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಬೆಲ ಗ್ರಾಮದ ಪವನ್​ ಕುಮಾರ್ ಎಂಬುವರು ತಮ್ಮ ಸೋದರಳಿಯರಾದ ಸುಭ್​(4) ಮತ್ತು ಸಂಕೇತ್​(2) ಅವರ ಜನನ ಪ್ರಮಾಣಪತ್ರವನ್ನು ತಪ್ಪಾಗಿ ವಿತರಿಸಿದ್ದಾರೆ ಎಂದು ಕೋರ್ಟ್​ ಮೆಟ್ಟಿಲೇರಿದ್ದರು.

    ಪ್ರಮಾಣ ಪತ್ರಕ್ಕಾಗಿ 2 ತಿಂಗಳ ಹಿಂದಯೇ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಗ್ರಾಮಾಭಿವೃದ್ಧಿ ಅಧಿಕಾರಿ ಸುಶೀಲ್​ ಚಂದ್​ ಅಗ್ನಿಹೋತ್ರಿ ಮತ್ತು ಗ್ರಾಮ ಪಂಚಾಯಿತಿ ಮುಖ್ಯಸ್ಥ ಪವನ್​ ಮಿಶ್ರಾ ಅವರು ಪ್ರತಿ ಜನನ ಪ್ರಮಾಣ ಪತ್ರ ನೀಡಲು 500 ರೂ. ಲಂಚ ಕೇಳಿದರು ಎಂದು ಪವನ್​ ಕುಮಾರ್​ ಆರೋಪಿಸಿದ್ದಾರೆ.

    ಲಂಚ ನೀಡಲು ನಿರಾಕರಿಸಿದಾಗ ಮಕ್ಕಳಿಬ್ಬರು ಜನನ ಪ್ರಮಾಣ ಪತ್ರದಲ್ಲಿ ಜನವರಿ 6, 2018ರ ಬದಲಾಗಿ ಜೂನ್​ 13, 1916 ಹಾಗೂ ಜೂನ್​ 13, 2016ರ ಬದಲಾಗಿ ಜನವರಿ 6, 1918 ಎಂದು ನಮೂದಿಸಿ ನೀಡಿದ್ದಾರೆ ಎಂದು ನ್ಯಾಯಾಲಯದ ಮುಂದೆ ದೂರು ನೀಡಿದ್ದಾರೆ.

    ನ್ಯಾಯಾಲಯವು ಜನವರಿ 17ರಂದು ತೀರ್ಪನ್ನು ಪ್ರಕಟಿಸಿದ್ದು, ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳಬೇಕಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts