More

    ಬಿಮ್ಸ್ ವೈದ್ಯಕೀಯ ಸಿಬ್ಬಂದಿಗೆ ಅಭಿನಂದನೆ

    ಬೆಳಗಾವಿ: ಕರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಲುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಬಿಮ್ಸ್ ಸಿಬ್ಬಂದಿಗೆ ಭಾನುವಾರ ಸೇನಾಧಿಕಾರಿಗಳು ಹೂವು ಹಾಗೂ ಉಡುಗೊರೆ ನೀಡಿ ಅಭಿನಂದಿಸಿದರು.

    ನಗರದ ಜಿಲ್ಲಾಸ್ಪತ್ರೆಗೆ ಭಾನುವಾರ ಭೇಟಿ ನೀಡಿದ ಮರಾಠಾ ಲಘು ಪದಾತಿದಳದ ಸ್ಪೆಷಲ್ ಕಮಾಂಡರ್ ಬ್ರಿಗೇಡಿಯರ್ ರೋಹಿತ್ ಚೌಧರಿ ಹಾಗೂ ಮಿಲಿಟರಿ ಆಸ್ಪತ್ರೆ ಕರ್ನಲ್ ಪದ್ಮಿನಿ ಎಚ್.ಎಸ್. ಅವರು ಕೋವಿಡ್-19 ನಿಯಂತ್ರಣ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು. ಸ್ವತಃ ಸೇನಾಧಿಕಾರಿಗಳೇ ವೈದ್ಯಲೋಕದ ಸಿಬ್ಬಂದಿಗೆ ಅಭಿನಂದಿಸುವುದನ್ನು ಕಂಡ ಜಿಲ್ಲಾಸ್ಪತ್ರೆಯ ವಾರ್ಡ್ ಬಾಯ್ಸ ಹಾಗೂ ಆಯಾಗಳು ಜೈಹಿಂದ್ ಹಾಗೂ ಭಾರತ ಮಾತಾಕಿ ಜೈ ಎಂದು ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದರು. ಬಿಮ್ಸ್ ನಿರ್ದೇಶಕ ವಿನಯ ದಾಸ್ತಿಕೊಪ್ಪ, ಆರ್‌ಎಂಒ ಸಂಜಯ ಕಟ್ಟೆ, ಸಿಎಂಒ ಬಸವರಾಜ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts