More

    ಬಿಳಿನೆಲೆಯಲ್ಲಿ ಅಕ್ರಮ ಅಂಗಡಿಗಳ ಬೀಗ ತೆರವು

    ಕಡಬ: ತಾಲೂಕಿನ ಬಿಳೆನೆಲೆಯಲ್ಲಿ ಅಕ್ರಮ ಶೆಡ್ ತೆರವು ವಿಚಾರದಲ್ಲಿ ವಿವಾದ ಉಂಟಾಗಿ ಅಕ್ರಮ ಅಂಗಡಿಗಳಿಗೆ ಜಡಿಯಲಾಗಿದ್ದ ಬೀಗಗಳನ್ನು ತೆರವು ಮಾಡಲಾಗಿದೆ.

    ಸೋಮವಾರ ಬಿಳಿನೆಲೆ ಗ್ರಾಪಂ ನೂತನ ಆಡಳಿ ಮಂಡಳಿ ಪ್ರಥಮ ನಡೆಸಿ ಬೀಗ ಜಡಿದಿದ್ದ ಅಕ್ರಮ ಅಂಗಡಿಗಳ ಬೀಗ ತೆರವು ಮಾಡಲು ನಿರ್ಣಯ ಅಂಗೀಕರಿಸಿತು. ಬಳಿಕ 14 ಅಕ್ರಮ ಅಂಗಡಿಗಳಿಗೆ ಜಡಿದಿದ್ದ ಬೀಗಗಳನ್ನು ತೆರವು ಮಾಡಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ ಹಾಗೂ ಸದಸ್ಯರ ಸಮ್ಮುಖ ಕಾರ್ಯ ನಡೆಯಿತು. ಲಾಕ್‌ಡೌನ್ ವೇಳೆ ಬಿಳಿನೆಲೆ ಪಂಚಾಯಿತಿ ಕಟ್ಟಡದ ಬಳಿ ವ್ಯಕ್ತಿಯೊಬ್ಬರು ಶೆಡ್ ನಿರ್ಮಿಸಿ ತರಕಾರಿ ವ್ಯಾಪಾರ ಪ್ರಾರಂಭಿಸಿದ್ದರು. ಈ ಶೆಡ್ ಬಿಜೆಪಿ ಪ್ರಾಯೋಜಿತ ಎಂದು ಆರೋಪಿಸಿ ಅದನ್ನು ತೆರವು ಮಾಡಬೇಕೆಂದು ಕಾಂಗ್ರೆಸ್ ನೇತೃತ್ವದಲ್ಲಿ ಒಂದು ವಾರ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆದಿತ್ತು. ತೆರವು ಮಾಡಬಾರದು ಎಂದು ಬಿಜೆಪಿ ಪಟ್ಟು ಹಿಡಿದಿತ್ತು.

    ಬಳಿಕ ಜಿಲ್ಲಾಧಿಕಾರಿ ಬಳಿ ಕಾಂಗ್ರೆಸ್ ನಿಯೋಗ ತೆರಳಿ ಮನವಿ ಮಾಡಿದಾಗ ಎಲ್ಲ ಅಕ್ರಮ ಅಂಗಡಿಗಳಿಗೆ ಬೀಗ ಜಡಿಯುವ ಆದೇಶ ನೀಡಿದ್ದರು. ಪರಿಣಾಮ ವಿವಾದಕ್ಕೆ ಮೂಲ ಕಾರಣವಾಗಿದ್ದ ಶೆಡ್ ಸೇರಿದಂತೆ 17 ಅಕ್ರಮ ಅಂಗಡಿಗಳಿಗೆ ಬೀಗ ಜಡಿಯಲಾಗಿತ್ತು. ಈ ಪೈಕಿ ಎರಡು ಅಂಗಡಿಯವರು ನ್ಯಾಯಾಲಯದಲ್ಲಿ ದಾವೆ ಹೂಡಿ ಬೀಗ ತೆರವು ಮಾಡಿಸಿದ್ದರು. ಉಳಿದಂತೆ ಈಗ ನೂತನ ಆಡಳಿತ ಮಂಡಳಿ ನಿರ್ಧಾರದಿಂದ ವಿವಾದಕ್ಕೆ ಕಾರಣವಾಗಿದ್ದ ಶೆಡ್ ಹೊರತುಪಡಿಸಿ ಎಲ್ಲ ಅಕ್ರಮ ಅಂಗಡಿಗಳ ಬಾಗಿಲು ತೆರೆಯಲಾಗಿದೆ.
    ರಾಜಕೀಯವಾಗಿ ಪ್ರತಿಷ್ಠೆಗೆ ಕಾರಣವಾಗಿದ್ದ ಅಕ್ರಮ ಶೆಡ್ ನಿರ್ಮಾಣ ವಿಚಾರದಲ್ಲಿ ಈಗ ಕಾಂಗ್ರೆಸ್ ಗೆದ್ದಂತಾಗಿದೆ. ಅಕ್ರಮ ಶೆಡ್ ತೆರವು ಮಾಡಬೇಕೆಂದು ಪ್ರತಿಭಟನೆ ಮಾಡಿದ್ದ ಕಾಂಗ್ರೆಸ್ ಬೆಂಬಲಿತರು ಪಂಚಾಯಿತಿಯಲ್ಲಿ ಅಧಿಕಾರ ಹಿಡಿದಿದ್ದರಿಂದ ಆ ಒಂದು ಶೆಡ್ ಹೊರತುಪಡಿಸಿ ಉಳಿದ ಅಂಗಡಿಗಳ ಬೀಗ ತೆರವು ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts