More

    ಮುಳುಗಡೆ ಸಂತ್ರಸ್ತರಿಗೆ ಸೌಲಭ್ಯ ಒದಗಿಸಿ

    ಬೀಳಗಿ: ಬೀಳಗಿ ತಾಲೂಕು ಮುಳುಗಡೆ ಬಾಧಿತ ಪ್ರದೇಶವಾಗಿದ್ದರಿಂದ ಸಂತ್ರಸ್ತರ ಪುನರ್ವಸತಿ ಕೇಂದ್ರದಲ್ಲಿ ಸರಿಯಾದ ಸೌಲಭ್ಯಗಳು ದೊರೆಯುತ್ತಿಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇದರಿಂದ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ತಾಪಂ ಸದಸ್ಯ ಶ್ರೀಶೈಲ ಸೂಳಿಕೇರಿ ಆರೋಪಿಸಿದರು.

    ಸ್ಥಳೀಯ ತಾಲೂಕು ಪಂಚಾಯಿತಿಯಲ್ಲಿ ಅಧ್ಯಕ್ಷ ರಾಮಣ್ಣ ಬಿರಾದಾರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ 25 ನೇ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ಈ ಹಿಂದಿನ ಸಭೆಯ ನಡಾವಳಿಯ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ. ಅಂದು ಚರ್ಚೆಗೆ ಬಂದ ವಿಷಯಗಳ ಪಾಲನೆಯಾಗಿದೆಯೋ ಅಥವಾ ಇಲ್ಲವೋ ಎನ್ನುವುದನ್ನು ತಾಪಂ ಅಧ್ಯಕ್ಷರು ಹಾಗೂ ತಾಪಂ ಇಒ ಅವರು ಮನದಟ್ಟು ಮಾಡಿಕೊಳ್ಳಬೇಕು. ತಮ್ಮಲ್ಲಿದ್ದ ನ್ಯೂನತೆಗಳು ಸರಿಪಡಿಸಿಕೊಳ್ಳಬೇಕು ಎಂದರು.

    ಗಿರಿಸಾಗರ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರ ಶಿಥಿಲಗೊಂಡ ಬಗ್ಗೆ ಎರಡು ವರ್ಷಗಳಿಂದ ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ನಮಗೆ ಕೇಳುತ್ತಾರೆ. ಅದಕ್ಕೆ ನಾವೇನು ಉತ್ತರ ನೀಡಬೇಕೆಂದು ತಾಪಂ ಸದಸ್ಯೆ ಗಂಗವ್ವ ಯರನಾಳ ಸಭೆಗೆ ಪ್ರಶ್ನಿಸಿದರು. ಈ ವಿಷಯವಾಗಿ ಸಿಡಿಪಿಒ ಎಂ.ಎಂ. ಈಸರನಾಳ ಮಾತನಾಡಿ, ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ 18 ಲಕ್ಷ ರೂ. ಅನುದಾನವನ್ನು ಸರ್ಕಾರ ನೀಡುತ್ತಿದೆ. ಆದರೆ, ಗ್ರಾಮ ಪಂಚಾಯಿತಿಯಲ್ಲಿ 5 ಲಕ್ಷ ರೂ. ಮಾತ್ರ ಟೆಂಡರ್ ಕರೆಯಲು ಅವಕಾಶ ಇದೆ. ಇದರ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಆದಷ್ಟು ಬೇಗ ನಿಮ್ಮ ಬೇಡಿಕೆ ಈಡೇರಲಿದೆ ಎಂದು ಹೇಳಿದರು.

    ಕೃಷಿ, ಹೆಸ್ಕಾಂ, ಸಮಾಜ ಕಲ್ಯಾಣ, ತೋಟಗಾರಿಕೆ, ಪಿಡಿಬ್ಲುೃಡಿ, ಲೋಕೋಪಯೋಗಿ, ಕೈಗಾರಿಕೆ, ಆರೋಗ್ಯ ಇಲಾಖೆ ಹಾಗೂ ಇನ್ನೂ ಅನೇಕ ಇಲಾಖೆ ವಿಷಯಗಳು ಚರ್ಚೆಗೆ ಬಂದವು.

    ಜಿಪಂ ಸದಸ್ಯ ಮಗಿಯಪ್ಪ ದೇವನಾಳ, ತಾಪಂ ಇಒ ಎಂ.ಕೆ. ತೋದಲಬಾಗಿ, ಬಿಇಒ ಎಚ್.ಜಿ. ಮಿರ್ಜಿ, ಹೆಸ್ಕಾಂ ಎಇ ವಿಜಯಕುಮಾರ ಚವ್ಹಾಣ್, ತಾಪಂ ಸದಸ್ಯೆ ಸಾವಿತ್ರಿ ಹೊಸಮನಿ, ಸಮಾಜ ಕಲ್ಯಾಣ ಅಧಿಕಾರಿ ಎಚ್.ಎಂ. ಕಟ್ಟಿಮನಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts