More

    ಲೋಕ ಕಲ್ಯಾಣಕ್ಕೆ ಸೇವಾಲಾಲ್ ಕೊಡುಗೆ ಅಪಾರ

    ಬೀಳಗಿ: ವಿಶ್ವದಲ್ಲಿಯೇ ಹಿಂದು ಧಾರ್ಮಿಕ ಸಂಸ್ಕೃತಿ, ಪರಂಪರೆಗಳು ಮಾದರಿಯಾಗಿವೆ. ಲೋಕ ಕಲ್ಯಾಣಕ್ಕಾಗಿ ಶ್ರೀ ಸಂತ ಸೇವಾಲಾಲ್ ಮಹಾರಾಜರ ಕೊಡುಗೆ ಅಪಾರವಾಗಿದೆ ಎಂದು ಧರ್ಮ ಜಾಗೃತ ಮಹಾ ಸಂಚಾಲಕ ಹನುಮಂತ ಮಳಲಿ ಹೇಳಿದರು.

    ತಾಲೂಕಿನ ನಾಗರಾಳ ತಾಂಡಾದಲ್ಲಿ ಸಂತ ಸೇವಾಲಾಲ್ ಮಹಾರಾಜರ ಜಯಂತಿ ನಿಮಿತ್ತ ಸೇವಾಲಾಲ್ ಮಾಲಾಧಾರಿಗಳ ಪೂಜಾ ಕಾರ್ಯಕ್ರಮದಲ್ಲಿ ಮಂಗಳವಾರ ಪಾಲ್ಗೊಂಡು ಅವರು ಮಾತನಾಡಿದರು.

    ಯುವಕರು ಸಮಾಜದ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ಬೇರೆ ಧರ್ಮಕ್ಕೆ ಮತಾಂತರಗೊಳ್ಳದೆ ಹಿಂದು ಧರ್ಮ ರಕ್ಷಣೆಗೆ ಮುಂದಾಗಬೇಕು. ಪ್ರತಿ ತಾಂಡಾದಲ್ಲಿ ಸಂತ ಸೇವಾಲಾಲರ ಪ್ರವಚನ ಹಾಗೂ ಭಜನೆಗಳು ನಡೆಯಬೇಕು ಎಂದರು.

    ಸೋಮದೇವರಹಟ್ಟಿಯ ಬಂಜಾರ ಸಮಾಜದ ಸೋಮಲಿಂಗ ಮಹಾರಾಜರು ಮಾತನಾಡಿ, ಸೇವಾಲಾಲ್ ಮಹಾರಾಜರು ಅನೇಕ ಪವಾಡಗಳನ್ನು ಮಾಡುವ ಮೂಲಕ ಜಗತ್ತಿಗೆ ಬೆಳಕು ನೀಡಿದ್ದಾರೆ. ಜನ-ಜಾನುವಾರುಗಳಿಗೆ ಯಾವುದೇ ರೋಗ-ರುಜಿನಗಳು ಹರಡದಂತೆ ದೇವರಲ್ಲಿ ಪ್ರಾರ್ಥನೆ ಮಾಡುವ ಮೂಲಕ ಸಮಾಜದಲ್ಲಿ ಅನಾಚಾರ, ಕಂದಾಚಾರ, ಮೂಢನಂಬಿಕೆಗಳನ್ನು ಹೊಗಲಾಡಿಸಿದ್ದಾರೆ. ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸನ್ಮಾರ್ಗದತ್ತ ನಡೆಯಲು ಸಾಧ್ಯ ಎಂದರು. ನಾಗರಾಳ ದಿಗಬಂರೇಶ್ವರ ಮಠದ ಶೇಷಪ್ಪಯ್ಯ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಗಲಗಲಿ ಯುವ ಮುಖಂಡರಾದ ಆನಂದ ಇಂಗಳಗಾಂವಿ, ಸ್ವತಂತ್ರ ಸಿಂಧೆ, ಜಿಪಂ ಸದಸ್ಯ ಹನುಮಂತ ಕಾಖಂಡಕಿ ಮಾತನಾಡಿದರು.

    ಬೋಜು ರಾಠೋಡ, ಗುತ್ತಿಗೆದಾರ ಮಲ್ಲು ರಾಠೋಡ, ವೆಂಕಟೇಶ ನಾಯಕ, ರಾಮಪ್ಪ ರಾಠೋಡ, ಉಮೇಶ ರಾಠೋಡ, ರವಿ ಲಮಾಣಿ, ಶಶಿ ಚವಾಣ್, ಸುರೇಶ ಲಮಾಣಿ, ಸುಬ್ಬರಾಯಗೌಡ ಪಾಟೀಲ ಅನೇಕರು ಇದ್ದರು. ತಾಂಡಾದಲ್ಲಿ ಸಂತ ಸೇವಾಲಾಲ್ ಮಹಾರಾಜ ಭಾವಚಿತ್ರದ ಮೆರವಣಿಗೆ ವಿವಿಧ ವಾದ್ಯಮೇಳ ಹಾಗೂ ಕುಂಭಮೇಳದೊಂದಿಗೆ ವಿಜೃಂಭಣೆಯಿಂದ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts