More

    ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿ

    ಬೀಳಗಿ: ದೇಶಕ್ಕಾಗಿ ಪ್ರಾಣಾರ್ಪಣೆಗೂ ಸಿದ್ಧರಾದ ಸೈನಿಕರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕ ಅಧ್ಯಕ್ಷ ಗುರುರಾಜ ಲೂತಿ ಹೇಳಿದರು.

    ತಾಲೂಕಿನ ಕಾತರಕಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧ ಗುರಪ್ಪ ಕೋಟಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

    ನಿವೃತ್ತ ಯೋಧರು ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಜತೆಗೆ ಯುವ ಸಮೂಹಕ್ಕೆ ಅಗತ್ಯ ಮಾರ್ಗದರ್ಶನ ಮಾಡಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಹೇಳಿದರು.

    ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಅಧ್ಯಕ್ಷ ಡಿ.ಎಂ. ಸಾಹುಕಾರ ಮಾತನಾಡಿ, ಅನ್ನ ಉತ್ಪಾದಿಸುವ ಕೃಷಿಕ, ಮಕ್ಕಳ ಎದೆಯಲ್ಲಿ ಅಕ್ಷರ ಬಿತ್ತುವ ಶಿಕ್ಷಕ, ಭಾರತಾಂಬೆ ರಕ್ಷಣೆಗೆ ನಿಂತ ಸೈನಿಕರನ್ನು ಸಮಾಜ ಗೌರವಿಸಬೇಕು, ಸದಾ ಅವರ ಕರ್ತವ್ಯವನ್ನು ಸ್ಮರಿಸಬೇಕು ಎಂದರು.

    ರಂಗಭೂಮಿ ಕಲಾವಿದ ಅಶೋಕ ವಜ್ಜರಮಟ್ಟಿ ಮಾತನಾಡಿದರು. ನಿವೃತ್ತ ಕಮಾಂಡರ್ ಈರಯ್ಯ ಮಠಪತಿ ಅಧ್ಯಕ್ಷತೆ ವಹಿಸಿದ್ದರು. ಯೋಧನ ತಾಯಿ ಸಿದ್ದವ್ವ ಕೋಟಿ, ಪತ್ನಿ ಸುಜಾತಾ ಕೋಟಿ, ನಿವೃತ್ತ ಯೋಧ ಮಲ್ಲಿಕಾರ್ಜುನ ಕಾಳಪ್ಪಗೋಳ, ಮಹಾಂತೇಶ ಸಾವಕಾರ, ಶ್ರೀಶೈಲ ಕೆರಕಲಮಟ್ಟಿ, ಭೀಮಪ್ಪ ಮೇಟಿ, ಹನುಮಂತ ಕೆರಕಲಮಟ್ಟಿ, ಶ್ರೀಶೈಲ ಎನ್.ಸುಳ್ಳದ, ಮೌನೇಶ ಕಂಬಾರ, ಮಲ್ಲಪ್ಪ ಕೌಜಲಗಿ, ಬಿ.ಟಿ. ಕೆರಕಲಮಟ್ಟಿ, ಎಚ್.ಎನ್. ಅಂಗಡಿ, ಪಿ.ಬಿ.ಮೇಟಿ, ಗೋಪಾಲ ಬೆಳ್ಳುಬ್ಬಿ ಇದ್ದರು. ಎಸ್.ಪಿ. ಅಗಡಿ ನಿರೂಪಿಸಿದರು. ವಿಠ್ಠಲ ಬಡಿಗೇರ ಸ್ವಾಗತಿಸಿದರು. ಸಿದ್ದು ಕೆರಕಲಮಟ್ಟಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts