More

    ದೇಗುಲ ಸುತ್ತಮುತ್ತ ಸ್ವಚ್ಛತೆ ಕಾಪಾಡಿ

    ಬೀಳಗಿ: ಭಕ್ತಿಯಿಂದ ದೇವರ ಧ್ಯಾನ, ನಾಮಸ್ಮರಣೆ ಮಾಡಿದರೆ ಬದುಕು ಸಾರ್ಥಕವಾಗುತ್ತದೆ. ಎಲ್ಲರ ಹೃದಯ, ಭಾವನೆ, ಉಸಿರಿನಲ್ಲಿ ಶಿವನಿದ್ದಾನೆ. ನಿತ್ಯ ಶಿವನ ಸ್ಮರಣೆ ಮಾಡುತ್ತ ಕಾಲ ಕಳೆಯಬೇಕು ಎಂದು ಗಿರಿಸಾಗರದ ರುದ್ರಮುನಿ ಶಿವಾಚಾರ್ಯರು ಹೇಳಿದರು.

    ತಾಲೂಕಿನ ಸುನಗ ಗ್ರಾಮದ ದೈತ್ಯೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ರಾಜಗೋಪುರ ಕಲಶಾರೋಹಣ, ಧರ್ಮಸಭೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶುಕ್ರವಾರ ಮಾತನಾಡಿದರು.

    ದೇಹದಲ್ಲಿ ಶಿವನಿರುತ್ತಾನೆ, ಶಿವ ಹೊರ ಹೋದರೆ ದೇಹ ಶವವಾಗುತ್ತದೆ. ವೈಜ್ಞಾನಿಕತೆಯಲ್ಲಿ ಆಧ್ಯಾತ್ಮಿಕತೆ ಅಡಗಿದ್ದು, ನಂಬುಗೆಯಲ್ಲಿ ಶಿವನಿದ್ದಾನೆ. ಭಕ್ತಿಯಲ್ಲಿ ವಿಶ್ವಾಸ, ನಂಬಿಕೆ, ಶ್ರದ್ಧೆ ಇದ್ದರೆ ಭಗವಂತ ಒಳ್ಳೆಯದನ್ನು ಮಾಡುತ್ತಾನೆ. ದೇವಾಲಯದ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು ಎಂದರು.

    ಕಲಾದಗಿಯ ಗಂಗಾಧರ ಶಿವಾಚಾರ್ಯ ಸ್ವಾಮಿಗಳು ದೈತ್ಯೇಶ್ವರ ದೇವಾಲಯದ ಕಲಶಾರೋಹಣ ನೆರವೇರಿಸಿ ಮಾತನಾಡಿ, ಶ್ರದ್ಧಾ ಭಕ್ತಿಯಿಂದ ದೇವರ ಕೆಲಸ ಮಾಡಬೇಕು. ಸಂತೃಪ್ತ ಜೀವನ ಸಾಗಿಸಲು ಪರಮಾತ್ಮ ಉತ್ತಮ ಮಾರ್ಗ ತೋರಿಸುವನು ಎಂದರು. ಕಸಾಪ ತಾಲೂಕು ಅಧ್ಯಕ್ಷ ಡಿ.ಎಂ. ಸಾಹುಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವಾಲಯ ಎಂದರೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗೆ ಮೀಸಲಾಗಿರುವ ಸ್ಥಳವಾಗಿದೆ ಎಂದರು.

    ಪ್ರವೀಣ ಹಿರೇಮಠ, ಮಲ್ಲಿಕಾರ್ಜುನ ಹಿರೇಮಠ, ಚನ್ನವೀರಯ್ಯ ಹಿರೇಮಠ, ಮುರುಗೇಶ ಹಿರೇಮಠ, ಗ್ರಾಪಂ ಅಧ್ಯಕ್ಷ ವಿಠ್ಠಲ ಕೆರಿಕಾರ, ಗ್ರಾಪಂ ಉಪಾಧ್ಯಕ್ಷ ಮಲ್ಲಪ ತೋಳಮಟ್ಟಿ, ಎಸ್.ಆರ್. ಮೇಟಿ, ಪಿ.ವಿ. ನಾಯ್ಕ, ಕೆ.ಪಿ. ವಿರಕ್ತಮಠ, ಕೆ.ವೈ. ಬೂದಿಹಾಳ, ವೈ.ಟಿ. ಲಗಮನಿ, ಎಂ.ಎಲ್. ನಾಗರಾಳ, ಟಿ.ಕೆ. ಕಲಾದಗಿ, ಆರ್.ಎ. ನಾಗರಾಳ, ಬಿ.ಜಿ. ದಳವಾಯಿ, ಮಹಾದೇವ ಆಸೋದಿ, ಅಲ್ಲಾಸಾಬ ಹುಡೇದ, ಸೋಮರಾಯ ಬೂದಿಹಾಳ, ಲಕ್ಷ್ಮಣ ನಾಗರಾಳ ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts