More

    ರಸ್ತೆಗೆ ಮಣ್ಣು, ಮುಳ್ಳು ಜಡಿದ ಗ್ರಾಮಸ್ಥರು

    ಬೀಳಗಿ: ಕರೊನಾ ವೈರಸ್ ಹರಡದಂತೆ ತಡೆಯುವ ಹಿನ್ನೆಲೆ ತಾಲೂಕಿನ ಸುನಗ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ 218ರ ಸುನಗ ಕ್ರಾಸ್ ಬಳಿ ಮತ್ತು ಸುನಗದಿಂದ ತೋಳಮಟ್ಟಿ ಮತ್ತು ಮನ್ನಿಕೇರಿ ಕ್ರಾಸ್ ರಸ್ತೆಗೆ ಗರಸು ಹಾಕಿ, ಮುಳ್ಳುಕಂಟಿ ಹಚ್ಚಿ ಯಾರೂ ಊರೊಳಗೆ ಬರದಂತೆ ದಿಗ್ಬಂಧನ ಹಾಕಿಕೊಂಡಿದ್ದಾರೆ.

    ಸುನಗ ತಾಂಡಾ ನಂ.1 ಮತ್ತು ನಂ. 2 ಹಾಗೂ ವಿವಿಧ ಗ್ರಾಮದ ಕೆಲವರು ಗೋವಾ, ಮಹಾರಾಷ್ಟ್ರ, ವಿದೇಶದಲ್ಲಿ ವಾಸವಾಗಿದ್ದರು. ಈಗ ತಮ್ಮ ಗ್ರಾಮಕ್ಕೆ ಮರಳಿ ಬರುತ್ತಿದ್ದಾರೆ. ಅವರು ಪೊಲೀಸ್ ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡದೆ ಗ್ರಾಮಗಳಲ್ಲಿ ಪ್ರವೇಶ ಮಾಡುತ್ತಿರುವುದರಿಂದ ಅದರಲ್ಲಿ ಸೋಂಕಿತರಿದ್ದರೆ ಇಡೀ ಸಮುದಾಯ ಅಪಾಯಕ್ಕೆ ಸಿಲುಕಲಿದೆ ಎಂಬ ಮುಂಜಾಗ್ರತೆ ಹಿನ್ನೆಲೆ ಸುನಗ ಗ್ರಾಮ ಪಂಚಾಯಿತಿ, ಗ್ರಾಮಸ್ಥರು ಒಗ್ಗೂಡಿ ಇಂತಹ ನಿರ್ಣಯ ಕೈಗೊಂಡು ಗ್ರಾಮದೊಳಗೆ ಯಾರು ಬರದಂತೆ ದಿಗ್ಬಂಧನ ಹೇರಿಕೊಂಡಿದ್ದಾರೆ.

    ಗ್ರಾಪಂ ಉಪಾಧ್ಯಕ್ಷ ಮಲ್ಲಪ್ಪ ತೋಳಮಟ್ಟಿ ಮಾತನಾಡಿ, ಗ್ರಾಮದಲ್ಲಿ ಅಗತ್ಯ ವಸ್ತುಗಳು ದೊರೆಯುವಂತೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಕಿರಾಣಿ ಹಾಗೂ ದಿನಸಿ ಸಾಮಗ್ರಿಗಳು ಅಂಗಡಿ ತೆರೆದಿರುತ್ತವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳವಂತೆ ಜನರಿಗೆ ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಗ್ರಾಪಂ ಅಧ್ಯಕ್ಷ ವಿಠ್ಠಲ ಕೆರಿಕಾರ, ಗ್ರಾಪಂ ಪಿಡಿಒ ಆರ್.ಜಿ. ನೇಸುರ, ಕ್ಲಕ್ ಭೀಮಪ್ಪ ದಳವಾಯಿ, ಸಾಬಣ್ಣ ಬಣ್ಣಪ್ಪನ್ನವರ, ಬಸು ಮೇಟಿ, ಸುರೇಶ ಮೇಟಿ, ರುದ್ರಪ್ಪ ಅನಿಕೇರಿ, ಸಂತೋಷ ಹಲಗಲಿ ಅನೇಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts