More

    ಜಾತ್ಯತೀತ ನಿಲುವು ನನ್ನದು

    ಬೀಳಗಿ: ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನನ್ನ ವಿರುದ್ಧ ಜಾತಿ ವ್ಯವಸ್ಥೆಯಿಂದ ಮತಗಳನ್ನು ಸೆಳೆಯಬಹುದು ಎಂದು ನಡೆಸಿದ ಪ್ರಯೋಗ ವಿಫಲವಾಗಿದೆ. ನನ್ನದು ಜಾತ್ಯತೀತ ನಿಲುವು. ಜಾತಿ ವ್ಯವಸ್ಥೆ, ಪಕ್ಷ ರಾಜಕಾರಣ, ಹಣದ ವಹಿವಾಟು ಸಹಕಾರಿ ಕ್ಷೇತ್ರದಲ್ಲಿ ಇರಬಾರದು. ಇದ್ದರೆ ಅದರ ಪಾವಿತ್ರತೆ ಎತ್ತಿ ಹಿಡಿಯಲು ಸಾಧ್ಯವಾಗುವುದಿಲ್ಲ ಎಂದು ವಿಧಾನ ಪರಿಷತ್ ವಿರೋಧ ನಾಯಕ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಎಸ್.ಆರ್. ಪಾಟೀಲ ಹೇಳಿದರು.

    ಬಾಡಗಂಡಿಯ ಬಾಪೂಜಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಶನಿವಾರ ನೂರಾರು ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಭಾರತ ದೇಶದ ಅಭಿವೃದ್ಧಿ ಹೆಬ್ಬಾಗಿಲು ಸಹಕಾರಿ ಕ್ಷೇತ್ರವಾಗಿದೆ. ಸರ್ಕಾರ ಮಾಡದಂತಹ ಸಾಧನೆಯನ್ನು ಸಹಕಾರಿ ಕ್ಷೇತ್ರದಲ್ಲಿ ಮಾಡಬಹುದು. ಸಹಕಾರಿ ರಂಗ ಜಾತ್ಯತೀತ, ಪಕ್ಷಾತೀತ ಪ್ರಾಮಾಣಿಕವಾಗಿ ಹೊರಹೊಮ್ಮಿದಾಗ ಸಹಕಾರಿ ಕ್ಷೇತ್ರದ ನಿಜ ಉದ್ದೇಶ ಈಡೇರುತ್ತದೆ. ತಾಲೂಕಿನ ಪಿಕೆಪಿಎಸ್ ಮತದಾರರಿಗೆ ಹಣದ ಆಸೆ-ಆಮಿಷ, ಹಣದ ವಹಿವಾಟು ಆಸೆ ಒಡ್ಡಿದರೂ ಅವರು ಬಲಿಯಾಗಲಿಲ್ಲ. ಹಣದಿಂದ ಎಲ್ಲವನ್ನು ಪಡೆಯಲಾಗದು. ನಿಷ್ಪಕ್ಷಪಾತವಾದ ನನ್ನ ಸಹಕಾರಿ ಕೆಲಸಗಳನ್ನು ನೋಡಿ 25 ಜನ ಪ್ರಾಮಾಣಿಕತೆಯಿಂದ ಮತಗಳನ್ನು ಹಾಕಿದ್ದಾರೆ. ಈ ಸಹಕಾರಿ ಕ್ಷೇತ್ರದ ಜತೆ ನನ್ನದು ಅವಿನಾಭಾವ ಸಂಬಂಧವಿದೆ. ಜಿಲ್ಲೆಯಲ್ಲಿ ಶೇ.60 ರೈತರಿಗೆ ಸಾಲವನ್ನು ನೀಡಿರುವ ಹೆಮ್ಮೆ ಇದೆ. ನನ್ನ ಎದುರಾಳಿ ಬಗ್ಗೆ ನನಗೆ ಗೌರವವಿದೆ ಎಂದರು.

    ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಸತ್ಯಪ್ಪ ಮೇಲ್ನಾಡ, ಶ್ರೀಶೈಲ ನಾಯಕ, ಸಂಗಣ್ಣ ಮುಧೋಳ, ಹನುಮಂತಗೌಡ ಬಿರಾದಾರ, ನಿಂಗನಗೌಡ ಪಾಟೀಲ, ತೆಗ್ಗಿ ಪಿಕೆಪಿಎಸ್ ಅಧ್ಯಕ್ಷ ಮಲ್ಲಪ್ಪ ಕಾಳಗಿ, ವೆಂಕಟೇಶ ನಾಯಕ, ರಾಜೇಂದ್ರ ಬಾರಕೇರ, ನಾಗರಾಜ ಅಣ್ಣಿಗೇರಿ, ತಾಪಂ ಸದಸ್ಯ ಶ್ರೀಶೈಲ ಸೂಳಿಕೇರಿ, ಎಂ.ಎಂ. ಖಾಜಿ, ಡಿ.ಕೆ. ಚಿಕ್ಕಗಲಗಲಿ, ಬಸವರಾಜ ಹಳ್ಳದಮನಿ, ಪಾಂಡು ಪೋಲೇಶಿ, ಲಚ್ಚಪ್ಪಗೌಡ ಒಂಟಗೋಡಿ ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts