More

    ಒಳನಾಡು, ಕರಾವಳಿಯ ಮೀನುಗಾರ ಮಹಿಳೆಯರಿಗೆ ಬೈಕ್

    ದಾವಣಗೆರೆ: ಒಳನಾಡು, ಕರಾವಳಿ ಭಾಗದ ಮೀನುಗಾರ ಮಹಿಳೆಯರಿಗೆ ಮೀನು ಮಾರಾಟಕ್ಕಾಗಿ ಶೇ.50ರ ಸಬ್ಸಿಡಿ ರೂಪದಲ್ಲಿ ದ್ವಿಚಕ್ರ ವಾಹನಗಳನ್ನು ಪ್ರಾಯೋಗಿಕವಾಗಿ ನೀಡುವ ಪ್ರಸ್ತಾವನೆ ಇದೆ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. 500 ರಿಂದ 1 ಸಾವಿರ ಮೀನುಗಾರರಿಗೆ ವಾಹನ ನೀಡುವ ಉದ್ದೇಶ ವಿದೆ. ಇದು ಜಾರಿಯಾದಲ್ಲಿ ಅವರ ಬದುಕಿಗೆ ಅನುಕೂಲ ಆಗಲಿದೆ ಎಂದು ಹೇಳಿದ್ದಾರೆ. ಮತ್ಸ್ಯರ್ಶಿನಿ ಹೋಟೆಲ್​ಗಳ ಮೂಲಕ ಗುಣಮಟ್ಟದ ಮೀನುಗಳನ್ನು ಕಡಿಮೆ ದರದಲ್ಲಿ ಗ್ರಾಹಕರಿಗೆ ನೀಡುವ ಉದ್ದೇಶವಿದೆ. ಸ್ಥಳೀಯವಾಗಿ ಸಿಗದ ಹಾಗೂ ಆಂಧ್ರದಿಂದ ತರಿಸುವ ಮೀನುಗಳನ್ನು ಇಲ್ಲಿಯೇ ಉತ್ಪಾದಿಸುವ ಆಲೋಚನೆ ಇದೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts