More

    ಬೈಕ್​ನಲ್ಲಿ ಹೋಗುತ್ತಾ ವ್ಯಾಲೆಟ್​ ಎಗರಿಸಿದರು, ಎಟಿಎಂ ಪಿನ್​ ಕೇಳಲು ಬಂದು ತಗ್ಲಾಕಿಕೊಂಡರು

    ನೋಯ್ಡಾ: ಇಲ್ಲಿನ ಗಡಿ ಚೌಕಂಡಿ ಗ್ರಾಮದಲ್ಲಿ ಬುಧವಾರ ರಾತ್ರಿ ಕಳ್ಳರಿಬ್ಬರು ಬೈಕ್​ನಲ್ಲಿ ಹೋಗುತ್ತಿರುವಾಗ ವ್ಯಕ್ತಿಯ ಬಳಿ ವ್ಯಾಲೆಟ್​ ಎಗರಿಸಿದ್ದರು. ವ್ಯಾಲೆಟ್​ನಲ್ಲಿದ್ದ ಎಟಿಎಂ ಕಾರ್ಡ್​ ಬಳಸಿ ಹಣ ಪಡೆಯಲು ಮುಂದಾದಾಗ ಪಿನ್​ ನಂಬರ್​ ಕೇಳಿತ್ತು. ಹಾಗಾಗಿ, ಪಿನ್​ ನಂಬರ್​ ಪಡೆದುಕೊಳ್ಳಲೆಂದು ವ್ಯಾಲೆಟ್​ ಅನ್ನು ಕದ್ದ ಸ್ಥಳಕ್ಕೆ ಮರಳಿದಾಗ ಪೊಲೀಸರಿಗೆ ತಗ್ಲಾಕಿಕೊಂಡಿದ್ದಾರೆ.

    ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಸೆಂಟ್ರಲ್​ ನೋಯ್ಡಾದ ಡಿಸಿಪಿ ಹರೀಶ್​ ಚಂದರ್​, ಆರೋಪಿಗಳು ಊಟ ಮಾಡಲೆಂದು ರೆಸ್ಟೋರೆಂಟ್​ಗೆ ಬಂದಿದ್ದ ವ್ಯಕ್ತಿಯೊಬ್ಬನ ಬಳಿಯಿಂದ ಮೊಬೈಲ್​ ಫೋನ್​ ಮತ್ತು ವ್ಯಾಲೆಟ್​ ಕದ್ದು ಪರಾರಿಯಾಗುತ್ತಿದ್ದರು. ಗನ್​ ತೋರಿಸಿ ಅದನ್ನು ಕದ್ದಿದ್ದರು. ಆ ವ್ಯಾಲೆಟ್​ನಲ್ಲಿ ಒಂದಷ್ಟು ನಗದು, ಡಿಎಲ್​, ಆಧಾರ್​ಕಾರ್ಡ್​ ಮತ್ತು ಎಟಿಎಂ ಕಾರ್ಡ್​ಗಳಿದ್ದವು. ಸ್ವಲ್ಪ ದೂರು ಸಾಗಿದ ಬಳಿಕ ಎಟಿಎಂ ಕಾರ್ಡ್​ನ ಪಿನ್​ ನಂಬರ್​ ಪಡೆದುಕೊಳ್ಳಲೆಂದು ಅವರಿಬ್ಬರು ಮರಳಿ, ಅದನ್ನು ಪಡೆದುಕೊಂಡು ಮತ್ತೆ ಪರಾರಿಯಾಗಿದ್ದರು ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಮಾನಸಿಕ ಕಿರುಕುಳ ಆರೋಪ, ಪತಿ ವಿರುದ್ಧ ಪತ್ನಿ ದೂರು

    ವ್ಯಾಲೆಟ್​ ಮತ್ತು ಮೊಬೈಲ್​ ಕಳೆದುಕೊಂಡಿದ್ದ ವ್ಯಕ್ತಿ ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿದ್ದ. ಕೂಡಲೇ ಇಡೀ ಪ್ರದೇಶದಲ್ಲಿ ನಾಕಾಬಂದಿ ಏರ್ಪಡಿಸಿ, ತಪಾಸಣೆಯನ್ನು ತೀವ್ರಗೊಳಿಸಲಾಗಿತ್ತು. ನಾಕಾಬಂದಿಯ ಬಳಿ ಬಂದ ಅವರಿಬ್ಬರೂ ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದರು. ತಕ್ಷಣವೇ ಪೊಲೀಸ್​ ಸಿಬ್ಬಂದಿ ಅವರನ್ನು ಬೆನ್ನಟ್ಟಿದ್ದರು. ಪೊಲೀಸರು ಪ್ರತಿದಾಳಿ ಮಾಡಿದಾಗ ಗುಂಡು ತಗುಲಿ ಗಾಯಗೊಂಡ ಅವರನ್ನು ವಶಕ್ಕೆ ಪಡೆಯಲಾಯಿತು ಎಂದು ಹೇಳಿದ್ದಾರೆ.

    ಸ್ಥಳೀಯ ನಿವಾಸಿಗಳಾದ ಗೌರವ್​ ಸಿಂಗ್​ (25) ಮತ್ತು ಸದಾನಂದ (25) ಬಂಧಿತರು. ಅವರು ಕದ್ದಿದ್ದ 3,200 ರೂ. ನಗದು ಇದ್ದ ವ್ಯಾಲೆಟ್​ ಮತ್ತು ಮೊಬೈಲ್​ ಫೋನ್​ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಜತೆಗೆ ಅವರ ಬಳಿಯಿದ್ದ ಎರಡು ನಾಡಪಿಸ್ತೂಲ್​ಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

    ಸಲೂನ್​ ಶಾಪ್​ನಲ್ಲಿ ಪಿಪಿಇ ಕಿಟ್​ ಧರಿಸಿಯೇ ಹೇರ್​ ಕಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts