More

    3 ನಿಮಿಷದಲ್ಲಿ ಮೂರೂವರೆ ಕೆಜಿ ಮೊಸರು ತಿಂದು ದಾಖಲೆ!

    ಪಟನಾ: ಬಿಹಾರ ರಾಜಧಾನಿ ಪಟನಾದಲ್ಲಿ ನಿನ್ನೆ (ಜ.20) ಮೊಸರು ತಿನ್ನುವ ವಿಶೇಷ ಸ್ಪರ್ಧೆ ಆಯೋಜಿಸಲಾಗಿತ್ತು. ಈ ವೇಳೆ ವ್ಯಕ್ತಿಯೊಬ್ಬ ಕೇವಲ 3 ನಿಮಿಷಗಳಲ್ಲಿ 3.5 ಕೆಜಿ ಮೊಸರು ತಿನ್ನುವ ಮೂಲಕ ದಾಖಲೆ ಬರೆದಿದ್ದಾನೆ.

    ಕಳೆದ 10 ವರ್ಷದಿಂದ ಈ ಸ್ಪರ್ಧೆಯನ್ನು ಆಯೋಜನೆ ಮಾಡಿಕೊಂಡ ಬರಲಾಗಿದೆ. ಮಹಿಳೆಯರು, ಪುರುಷರು ಹಾಗೂ ಹಿರಿಯ ನಾಗರಿಕರು ಎಂದು ಮೂರು ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗುತ್ತದೆ. ಮೊಸರಿನಲ್ಲಿರುವ ಆರೋಗ್ಯದ ಲಾಭವನ್ನು ಪ್ರಚಾರ ಮಾಡುವ ಉದ್ದೇಶದಿಂದ ಬಿಹಾರದ ಸುಧಾ ಡೈರಿ ಈ ಸ್ಪರ್ಧೆಯನ್ನು ನಡೆಸುತ್ತಾ ಬಂದಿದೆ.

    ಬಿಹಾರದ ಬಾರ್ಹ್​ ಮೂಲದ ನಿವಾಸಿ ಅಜಯ್​ ಕುಮಾರ್​ ಎಂಬುವರು 3 ನಿಮಿಷಗಳಲ್ಲಿ 3 ಕೆಜಿ 420 ಗ್ರಾಂ ಮೊಸರು ತಿನ್ನುವ ಮೂಲಕ ಮೊದಲ ಸ್ಥಾನವನ್ನು ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಪಟನಾ ಮೂಲದ ಪ್ರೇಮಾ ತಿವಾರಿ ಎಂಬುವರು ಅದೇ ಸಮಯದಲ್ಲಿ 2 ಕೆಜಿ 718 ಗ್ರಾಂ ಮೊಸರು ತಿನ್ನುವ ಮೂಲಕ ಮೊದಲ ಸ್ಥಾನ ಪಡೆದರು.

    ಹಿರಿಯ ನಾಗರಿಕರ ವಿಭಾಗದಲ್ಲಿ ಹಾಲಿ ಚಾಂಪಿಯನ್​ ಆಗಿರುವ ಶಂಕರ್​ ಕಾಂತ್​ ಎಂಬುವರು 3 ನಿಮಿಷದಲ್ಲಿ 3 ಕೆಜಿ 647 ಗ್ರಾಂ ಮೊಸರು ತಿನ್ನುವ ಮೂಲಕ ದಾಖಲೆ ಬರೆದರು. ಮೂವರು ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ‘

    ಕಳೆದ ವರ್ಷ ಶಂಕರ್​ ಕಾಂತ್​ ಅವರು 4 ಕೆಜಿ ಮೊಸರು ತಿಂದಿದ್ದರು. ಈ ಬಾರಿ 500 ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. (ಏಜೆನ್ಸೀಸ್​)

    ಕಾರು ಚಾಲಕನಿಂದ ದೌರ್ಜನ್ಯ ಪ್ರಕರಣ: ಇದೊಂದು ಡ್ರಾಮಾ ಎಂದ ಬಿಜೆಪಿ, ತಿರುಗೇಟು ಕೊಟ್ಟ ಡಿಸಿಡಬ್ಲ್ಯು ಮುಖ್ಯಸ್ಥೆ

    ಸಿದ್ಧಗಂಗಾ ಮಠದಲ್ಲಿ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ಸಿಎಂ: ಪುಣ್ಯ ಸಂಸ್ಮರಣೋತ್ಸವಕ್ಕೆ ಹರಿದುಬಂದ ಭಕ್ತಸಾಗರ

    ಪ್ಲೀಸ್​ ಸಹಾಯ ಮಾಡಿ ಪಠಾಣ್​ ಸಿನಿಮಾ ಟಿಕೆಟ್​ ಸಿಗದಿದ್ರೆ ಸಾಯ್ತಿನಿ: ಶಾರೂಖ್ ಅಭಿಮಾನಿಯ ಹುಚ್ಚಾಟ, ನೆಟ್ಟಿಗರ ತರಾಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts