More

    ಬಿಹಾರದಲ್ಲಿ ಇನ್ಮುಂದೆ ಸಾರ್ವಜನಿಕ ಸ್ಥಳದಲ್ಲಿ ಉಗುಳುವಂತಿಲ್ಲ…! ಏನು ಶಿಕ್ಷೆ ಫಿಕ್ಸ್​ ಮಾಡಿದೆ ಗೊತ್ತಾ ಅಲ್ಲಿನ ಸರ್ಕಾರ?

    ಬಿಹಾರ್: ಕರೊನಾ ಮಹಮಾರಿಯಿಂದ ತಪ್ಪಿಸಿಕೊಳ್ಳಲು ಎಲ್ಲ ರೀತಿಯ ಮಾರ್ಗಗಳನ್ನೂ ಹುಡುಕಲಾಗುತ್ತಿದೆ. ಅದರದ್ದೇ ಒಂದು ಭಾಗವಾಗಿ ಬಿಹಾರ ಆರೋಗ್ಯ ಇಲಾಖೆ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ.

    ಬಿಹಾರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸಿ ಆರೋಗ್ಯ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ. ಕರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಪ್ರಸರಣ ಮತ್ತಷ್ಟು ಅಧಿಕವಾಗುವ ಸಾಧ್ಯತೆ ಇರುವದರಿಂದ ಬಿಹಾರ ಸರ್ಕಾರ ಈ ಕ್ರಮ ಕೈಗೊಂಡಿದೆ.

    ಸಾಂಕ್ರಾಮಿಕ ರೋಗ ಕಾಯ್ದೆ 1897ರ ಅಡಿಯಲ್ಲಿ ಈ ನಿಷೇಧ ಮಾಡಲಾಗಿದ್ದು, ಇನ್ನು ಮುಂದೆ ಯಾರಾದರೂ ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ, 200 ರೂಪಾಯಿ ದಂಡ ವಿಧಿಸಿಲಾಗುವುದು. ಹಾಗೇ 6 ತಿಂಗಳು ಜೈಲು ಶಿಕ್ಷೆಯನ್ನೂ ನೀಡಬಹುದಾಗಿದೆ.

    ರಾಜ್ಯದಲ್ಲಿ ರಸ್ತೆಗಳ ಮೇಲೆ, ಸರ್ಕಾರಿ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಪೊಲೀಸ್ ಸ್ಟೇಶನ್​, ಆರೋಗ್ಯ ಮತ್ತು ವೈದ್ಯಕೀಯ ಸಂಸ್ಥೆಗಳ ಆವರಣಗಳಲ್ಲಿ ಎಲ್ಲೂ ತಂಬಾಕು, ಪಾನ್​ ಮಸಾಲಾ, ಗುಟ್ಖಾವನ್ನು ಉಗುಳುವಂತಿಲ್ಲ, ಬೀಡಿ, ಸಿಗರೇಟು ಸೇದುವಂತಿಲ್ಲ. ಇದು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುವುದು. 200 ರೂ.ದಂಡ ಮತ್ತು ಆರು ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುವುದು ಆರೋಗ್ಯ ಸಚಿವಾಲಯದ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

    ಹೀಗೆ ಸಾರ್ವಜನಿಕ ಸ್ಥಳದಲ್ಲಿ ಉಗುಳುವುದರಿಂದ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಸಾಧ್ಯತೆಯೂ ಅತಿ ಹೆಚ್ಚು ಹಾಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts