More

    ಹುಣಸೆಹಣ್ಣಿನ ಬೀಜ ನುಂಗಿ 10 ವರ್ಷದ ಬಾಲಕ ಸಾವು

    ಬಿಹಾರ: 10 ವರ್ಷದ  ಬಾಲಕನೊಬ್ಬ  ಹುಣಸೆಹಣ್ಣು ತಿಂದು ಸಾವನ್ನಪ್ಪಿದ್ದಾನೆ. ಮುಜಾಫರ್‌ಪುರ ಜಿಲ್ಲೆಯಲ್ಲಿ  ಈ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

    ಮುಜಾಫರ್‌ಪುರದ ಸಕ್ರಾದ ಮಚ್ಚಿ ಗ್ರಾಮದ ರಾಜೇಶ್ ಮಹತೋ ಅವರ 10 ವರ್ಷದ ಮಗ ಆದರ್ಶ್ ಹುಣಸೆಹಣ್ಣು ತಿಂದು ಸಾವನ್ನಪ್ಪಿದ್ದಾನೆ. ಆದರ್ಶ್ ಮೂರನೇ ತರಗತಿ ವಿದ್ಯಾರ್ಥಿ. ಹುಣಸೆಹಣ್ಣು ಈತನ ಪ್ರಾಣಕ್ಕೆ ಕುತ್ತು ತಂದಿದೆ.

    ವರದಿಗಳ ಪ್ರಕಾರ, ಆದರ್ಶ್ ಶನಿವಾರ ಹುಣಸೆಹಣ್ಣು ತಿನ್ನುತ್ತಿದ್ದನು ಈ ವೇಳೆ  ಹುಣಸೆ ಬೀಜಗಳನ್ನು ನುಂಗಿದ್ದನು. ಅವನಿಗೆ ಉಸಿರಾಡಲು ಕಷ್ಟವಾಯಿತು. ಕುಟುಂಬಸ್ಥರು  ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.ಆದರೆ ಇದ್ದಕ್ಕಿದ್ದಂತೆ ಬಾಲಕನ ಸ್ಥಿತಿ ಗಂಭೀರವಾಯಿತು. ಅವರ ಕುಟುಂಬಸ್ಥರು ಚಿಕಿತ್ಸೆಗಾಗಿ ಮುಜಾಫರ್‌ಪುರಕ್ಕೆ ಕರೆದೊಯ್ದಿದ್ದಾರೆ.  ಆದರ್ಶ್ ಅವರ ಶ್ವಾಸಕೋಶಕ್ಕೆ ಹುಣಸೆ ಬೀಜಗಳು ಅಂಟಿಕೊಂಡಿರುವುದು ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಾಲಕನನ್ನು  ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಪಾಟ್ನಾಗೆ ಕಳುಹಿಸಿದ್ದಾರೆ.

    ವೈದ್ಯರ ಸಲಹೆಯಂತೆ ಕುಟುಂಬಸ್ಥರು ಆದರ್ಶ್ ಜತೆ ಪಾಟ್ನಾಗೆ ತೆರಳಿದರು. ಆದರೆ ಬಾಲಕನನ್ನು ಪಾಟ್ನಾಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಹುಣಸೆ ಹಣ್ಣಿಗೆ ಮಗು ಬಲಿಯಾಗಿರುವ ಸುದ್ದಿ ಇಡೀ ಪ್ರದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಒಂದು ಸಣ್ಣ ತಪ್ಪು ನಗುಮುಖದ ಮಗುವಿನ ಜೀವವನ್ನು ತೆಗೆದುಕೊಂಡಿತು. ಬಾಲಕನ ಸಾವಿಗೆ ಪೋಷಕರು ಅಳಲು ತೋಡಿಕೊಂಡರು. ಗ್ರಾಮದಲ್ಲಿ ದುಃಖದ ಛಾಯೆ ಆವರಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 

    48ನೇ ವರ್ಷದ ಸುಶ್ಮಿತಾ ಸೇನ್ ತನಗಿಂತ 15 ವರ್ಷ ಕಿರಿಯ ವಯಸ್ಸಿನ ಹುಡುಗನನ್ನು ಮದುವೆ ಆಗ್ತಾರಾ? 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts