More

    ಹಾರ್ದಿಕ್ ಪಾಂಡ್ಯ ಮುಂಬೈ ಸೇರುವುದು ಬಹುತೇಕ ಖಚಿತ: ಹೈದರಾಬಾದ್‌ನಿಂದ ಆರ್‌ಸಿಬಿಗೆ ವರ್ಗಾವಣೆಯಾದ ಮಯಾಂಕ್

    ಬೆಂಗಳೂರು: ಸತತ ಎರಡು ಐಪಿಎಲ್ ಆವೃತ್ತಿಗಳಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ೈನಲ್‌ಗೇರಿಸಿ ಪರ್ದಾಪಣಾ ಸೀಸನ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ನಾಯಕ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮುಂದಿನ ಆವೃತ್ತಿಗೆ ಮುಂಬೈ ಇಂಡಿಯನ್ಸ್ ತಂಡ ಸೇರುವುದು ಬಹುತೇಖ ಖಚಿತಪಟ್ಟಿದೆ.
    ಐಪಿಎಲ್-17ರ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಗೆ ಮುನ್ನ ಗುಜರಾತ್ ಹಾಗೂ ಮುಂಬೈ ಎರಡು ್ರಾಂಚೈಸಿಗಳ ನಡುವೆ ಆಟಗಾರರ ವರ್ಗಾವಣೆಯ ಮಾತುಕತೆ ಬಹುತೇಕ ಅಂತಿಮಗೊಂಡಿದ್ದು ಭಾನುವಾರ ಅಧಿಕೃತಗೊಳ್ಳಲಿದೆ. ಹಾರ್ದಿಕ್ ಬದಲಿಗೆ ಮುಂಬೈ ತಂಡ ಯಾವುದೇ ಆಟಗಾರರನ್ನು ಗುಜರಾತ್ ತಂಡಕ್ಕೆ ವರ್ಗಾವಣೆ ಮಾಡಿಲ್ಲ.

    2022ರ ಮೆಗಾ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದಿಂದ ಬಿಡುಗಡೆಯಾಗಿದ್ದ ಹಾರ್ದಿಕ್ ಪಾಂಡ್ಯ, ಬರೋಬ್ಬರಿ 15 ಕೋಟಿ ರೂ.ಗಳಿಗೆ ಗುಜರಾತ್ ಟೈಟಾನ್ಸ್ ಸೇರಿದ್ದರು. ಈಗ ಇಷ್ಟೇ ಮೊತ್ತಕ್ಕೆ ಮುಂಬೈ ತಂಡ ಸೇರಲಿದ್ದಾರೆ ಎನ್ನಲಾಗಿದೆ. ಆದರೆ ಮುಂಬೈ ಇಂಡಿಯನ್ಸ್ ಬಳಿ ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡ್ ಮಾಡುವಷ್ಟು ಬಜೆಟ್ ಮಿತಿಯಿಲ್ಲ.

    2023ರ ಮಿನಿ ಹರಾಜಿನ ಬಳಿಕ ಮುಂಬೈ ಇಂಡಿಯನ್ಸ್ ಬಳಿ 5 ಲಕ್ಷ ರೂಪಾಯಿ ಮಾತ್ರ ಉಳಿಸಿಕೊಂಡಿದೆ. ಈ ಬಾರಿ ಎಲ್ಲ ತಂಡಗಳಿಗೆ 5 ಕೋಟಿ ರೂ. ಹೆಚ್ಚುವರಿ ಬಜೆಟ್ ನೀಡಲಾಗಿದೆ. ಇದರ ಜತೆಗೆ ಮುಂಬೈ ಇಂಡಿಯನ್ಸ್ ತಂಡ ಮೊತ್ತವನ್ನು ಸರಿದೂಗಿಸಲು ಕ್ಯಾಮರಾನ್ ಗ್ರೀನ್, ಜ್ರೋಾ ಆರ್ಚರ್ ಅವರನ್ನು ಮುಂಬೈ ತಂಡದಿಂದ ರಿಲೀಸ್ ಮಾಡಲಾಗಿದೆ ಎನ್ನಲಾಗಿದೆ.

    ಹಾರ್ದಿಕ್ ಪಾಂಡ್ಯ ಮುಂಬೈ ಸೇರಿದರೆ ನಾಯಕನಾಗಿ ವರ್ಗಾವಣೆಗೊಂಡ 3ನೇ ಆಟಗಾರ ಎನಿಸಲಿದ್ದಾರೆ. ಪಂಜಾಬ್ ಕಿಂಗ್ಸ್‌ನಿಂದ ಆರ್. ಅಶ್ವಿನ್, ರಾಜಸ್ಥಾನ ತಂಡದಿಂದ ಅಜಿಂಕ್ಯ ರಹಾನೆ ಈ ಹಿಂದೆ ನೇರ ವರ್ಗಾವಣೆಯಾಗಿದ್ದರು.
    ಆರ್‌ಸಿಬಿಗೆ ಮಯಾಂಕ್: ಆಲ್ರೌಂಡರ್ ಶಹಬಾಜ್ ಅಹ್ಮದ್ ಅವರನ್ನು ಆರ್‌ಸಿಬಿ ತಂಡದ ಸನ್‌ರೈಸರ್ಸ್‌ ತಂಡಕ್ಕೆ ವರ್ಗಾವಣೆ ಮಾಡಿದ್ದು, ಬದಲಿಗೆ ಮಯಾಂಕ್ ಡಾಗರ್‌ರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಮಯಾಂಕ್ ಡಾಗರ್ .8 ಕೋಟಿ ರೂಪಾಯಿಗಳಿಗೆ ಹೈದರಾಬಾದ್ ತಂಡಕ್ಕೆ ಸೇರ್ಪಡೆಯಾಗಿದ್ದರೆ, 2.4 ಕೋಟಿ ರೂ. ನೀಡಿ ಆರ್‌ಸಿಬಿ ತಂಡ ಶಹಬಾಜ್ ಅಹ್ಮದ್ ಅವರನ್ನು ಖರೀದಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts