More

    ಸರ್ಕಾರಿ ಕಂಪನಿಯಿಂದ ಶೀಘ್ರದಲ್ಲಿಯೇ ಅತಿದೊಡ್ಡ ಐಪಿಒ: ಪಿಎಸ್​ಯು ಹೂಡಿಕೆದಾರರಿಗೆ ಲಾಭ ಮಾಡಿಕೊಳ್ಳಲು ಸುವರ್ಣಾವಕಾಶ

    ಮುಂಬೈ: ಎನ್‌ಟಿಪಿಸಿ ಗ್ರೀನ್ ಎನರ್ಜಿಯ (NTPC Green Energy) 10,000 ಕೋಟಿ ರೂ.ಗಳ ಐಪಿಒ ಶೀಘ್ರದಲ್ಲೇ ಹೂಡಿಕೆಗೆ ತೆರೆದುಕೊಳ್ಳಲಿದೆ. ಕಂಪನಿಯು ತನ್ನ ಐಪಿಒ ನಿರ್ವಹಣೆಗಾಗಿ ನಾಲ್ಕು ಹೂಡಿಕೆ ಬ್ಯಾಂಕ್‌ಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಇದು 2022 ರಲ್ಲಿ ಭಾರತೀಯ ಜೀವ ವಿಮಾ ನಿಗಮದ (LIC) ನಂತರ ಸಾರ್ವಜನಿಕ ವಲಯದ (ಸರ್ಕಾರಿ) ಕಂಪನಿಯ ಅತಿದೊಡ್ಡ ಐಪಿಒ ಆಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಪಿಎಸ್​ಯು ಸ್ಟಾಕ್​ಗಳು (ಸರ್ಕಾರಿ ಕಂಪನಿಯ ಷೇರುಗಳು) ಹೂಡಿಕೆದಾರರಿಗೆ ಬಹುದೊಡ್ಡ ಲಾಭ ನೀಡಿವೆ. ಈ ಸರ್ಕಾರಿ ಕಂಪನಿಯ ಐಪಿಒ ಹೂಡಿಕೆದಾರರಿಗೆ ಒಂದು ದೊಡ್ಡ ಅವಕಾಶವಾಗಿ ಪರಿಣಮಿಸಿದೆ.

    ಮೂಲಗಳ ಪ್ರಕಾರ, ಹಣಕಾಸು ಮತ್ತು ತಾಂತ್ರಿಕ ಬಿಡ್‌ಗಳ ನಂತರ, ಐಡಿಬಿಐ ಕ್ಯಾಪಿಟಲ್ ಮಾರ್ಕೆಟ್ಸ್ & ಸೆಕ್ಯುರಿಟೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಐಎಫ್‌ಎಲ್ ಸೆಕ್ಯುರಿಟೀಸ್ ಮತ್ತು ನುವಾಮಾ ವೆಲ್ತ್ ಮ್ಯಾನೇಜ್‌ಮೆಂಟ್ ಈ ಐಪಿಒ ನಿರ್ವಹಣೆಗಾಗಿ ಶಾರ್ಟ್‌ಲಿಸ್ಟ್ ಮಾಡಲಾಗಿದೆ. ವರದಿಯ ಪ್ರಕಾರ, ಐಡಿಬಿಐ ಕ್ಯಾಪಿಟಲ್‌ನ ಬಿಡ್ ಅತ್ಯಂತ ಕಡಿಮೆ ಇದೆ. ಮಾಹಿತಿಯ ಪ್ರಕಾರ, ಗೋಲ್ಡ್ಮನ್ ಸ್ಯಾಕ್ಸ್, ಆಕ್ಸಿಸ್ ಕ್ಯಾಪಿಟಲ್, ಐಸಿಐಸಿಐ ಸೆಕ್ಯುರಿಟೀಸ್ ಮತ್ತು ಡಿಎಎಂ ಕ್ಯಾಪಿಟಲ್ ಸೇರಿದಂತೆ ಹತ್ತು ಹೂಡಿಕೆ ಬ್ಯಾಂಕ್‌ಗಳು ಐಪಿಒ ನಿರ್ವಹಣೆಯ ಆರ್ಡರ್​ ಪಡೆದುಕೊಳ್ಳಲು ಬಿಡ್ ಮಾಡಿದ್ದವು.

    ಈ ಐಪಿಒ ಮೂಲಕ ಕಂಪನಿಯು ಸಂಗ್ರಹಿಸುವ ಮೊತ್ತವನ್ನು ಇಂಧನ ಪರಿವರ್ತನೆಯನ್ನು, ಅಂದರೆ ಹಸಿರು ಶಕ್ತಿ ಯೋಜನೆಗಳನ್ನು ಮುಂದುವರಿಸಲು ಬಳಸುತ್ತದೆ. ಎನ್‌ಟಿಪಿಸಿ ಅಧ್ಯಕ್ಷ ಮತ್ತು ಎಂಡಿ ಗುರ್ಗುದೀಪ್ ಸಿಂಗ್ ಅವರು ಡಿಸೆಂಬರ್‌ನಲ್ಲಿ, ತಮ್ಮ ಕಂಪನಿಯು ಮುಂದಿನ 1-2 ವರ್ಷಗಳಲ್ಲಿ ತನ್ನ ಹಸಿರು ವಿದ್ಯುತ್ ಘಟಕವನ್ನು ಪಟ್ಟಿ ಮಾಡಲು (ಷೇರು ಮಾರುಕಟ್ಟೆ ಪ್ರವೇಶಿಸಲು) ಪರಿಗಣಿಸುತ್ತಿದೆ ಎಂದು ಹೇಳಿದ್ದರು.

    ಏಕೆಂದರೆ ಭವಿಷ್ಯದಲ್ಲಿ ವಿದ್ಯುತ್‌ಗೆ ಹೆಚ್ಚಿನ ಬೇಡಿಕೆ ಸಾಧ್ಯತೆ ಗೋಚರಿಸುತ್ತದೆ. ಕಂಪನಿಯು 2030 ರ ವೇಳೆಗೆ 60,000 MW ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸಾಧಿಸುವ ಗುರಿಯನ್ನು ಹೊಂದಿದೆ. ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಅದನ್ನು ತಲುಪುವ ನಿರೀಕ್ಷೆಯಿದೆ.

    NTPC ಯ ಸಂಪೂರ್ಣ ಅನುದಾನಿತ ಘಟಕಗಳು ಪ್ರಸ್ತುತ 3,400 MW ಗಿಂತ ಹೆಚ್ಚಿನ ವಿದ್ಯುತ್​ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. 26,000 ಮೆಗಾವ್ಯಾಟ್‌ನ ಯೋಜನೆಗಳು ವಿವಿಧ ಹಂತಗಳಲ್ಲಿವೆ.

    ಬೆಂಗಳೂರಿನ ಫೀನಿಕ್ಸ್ ಮಾಲ್​ನಲ್ಲಿ 4D ಥಿಯೇಟರ್​: ದಕ್ಷಿಣ ಭಾರತದ ಅತಿದೊಡ್ಡ ಚಿತ್ರಮಂದಿರದ ವೈಶಿಷ್ಟ್ಯಗಳೇನು?

    ಪಾಕ್​ ಗಡಿಯಲ್ಲಿ ಸೊಳ್ಳೆ ಇರದ ಸ್ಥಳದಲ್ಲಿ ಅದಾನಿ ಗ್ರೂಪ್​ನಿಂದ ಅದ್ಭುತ ಕಾರ್ಯ: ವಿಶ್ವದ ಅತಿದೊಡ್ಡ ಸೋಲಾರ್​ ವಿದ್ಯುತ್​ ತಯಾರಿಕೆ ಉದ್ಯಾನವನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts