More

  ಇಶಾನಿ ಬಿಗ್‌ ಬಾಸ್‌ ಮನೆ ಜರ್ನಿ ಹೇಗಿತ್ತು?, ಮನೆಯಲ್ಲಿ ಯಾರೂ ಮುಗ್ಧರಿಲ್ಲ ಎಂದು ಕಿಡಿ..!

  ಬಿಗ್​​ ಬಾಸ್​​ ಮನೆಯ ಸ್ಪರ್ಧಿ ಇಶಾನಿ ಇದೀಗ ಮನೆಯಿಂದ ಶನಿವಾರ ಹೊರ ಬಂದಿದ್ದಾರೆ. ಸದಯ ಮನೆಯಿಂದ ಹೊರಬಂದು ಸಂದರ್ಶನವೊಂದರಲ್ಲಿ ಮಾತನಾಡಿದ ಇಶಾನಿ, ಶಾಕಿಂಗ್​​​ ಹೇಳಳಿಕೆಯೊಂದನ್ನ ನೀಡಿದ್ದಾರೆ. ಇಶಾನಿ ಮನೆಯಲ್ಲಿರುವ ಯಾವ ಸ್ಪರ್ಧಿಯೂ ಮುಗ್ಧರಲ್ಲ ಎಂದಿದ್ದಾರೆ.


  ಐಶಾನಿ. ನಾನು ಸಿಂಗರ್, ಸಾಂಗ್ ರೈಟರ್. ಏನು ಹೇಳಬೇಕು ಎಂದು ಗೊತ್ತಾಗ್ತಿಲ್ಲ. ಬಿಗ್‌ಬಾಸ್ ಮನೆಯಿಂದ ಆಚೆ ಬಂದಿದೀನಿ. 99 ಪರ್ಸೆಂಟ್‌ ನನಗೆ ನಾನು ಇರ್ತೀನಿ ಅಂತ ಕಾನ್ಫಿಡೆನ್ಸ್ ಇತ್ತು. ಉಳಿದ ಒಂದು ಪರ್ಸೆಂಟ್ ನನಗೆ ಆಗಲ್ಲ ಅನಿಸಿತ್ತು. ಆದರೆ ಮನೆ ಹೊರಗೆ ಬಂದಿರೋದು ಬೇಸರ ತಂದಿದೆ.
  ಹಾಗಾದ್ರೆ ಬಿಗ್​​ ಬಾಸ್​​ ಮನೆಯಲ್ಲಿ ಯಾರು ಫೇಕ್​​? ಯಾರು ರಿಯಲ್​​​ ಎಂಬ ಪ್ರಶ್ನೆಗೆ ಇಶಾನಿ ಉತ್ತರಿಸಿದ್ದಾರೆ


  ನನ್ನ ಪ್ರಕಾರ ಮೈಕಲ್ ತುಂಬ ಜೆನ್ಯೂನ್ ಆಗಿದ್ದಾರೆ. ಆನಸ್ಟ್ ಆಗಿದ್ದರು. ಲಾಯಲ್ ಆಗಿದ್ದರು. ಅದು ಪ್ರಾರಂಭದಲ್ಲಿ ನನಗೆ ಕಾಣಿಸಲಿಲ್ಲ. ಕೊನೆಕೊನೆಗೆ ಕಾಣಿಸಿತು. ಈಗ ನಾನು ವಾಪಸ್ ಹೋಗಲು ಸಾಧ್ಯವಾದರೆ ಎಲ್ಲದಕ್ಕೂ ಮೈಕಲ್ ಸೈಡ್ ತಗೋತಿದ್ದೆ.


  ತುಕಾಲಿ ಅವರನ್ನು ನಾನು ಊಸರವಳ್ಳಿ ಎಂದು ಕರೆದಿದ್ದೆ. ಅದಕ್ಕೆ ಕಾರಣವಿದೆ. ಯಾಕೆಂದರೆ ಅವರು ಒಂದ್ಸಲ ನನ್ನ ಜೊತೆ ಸರಿಯಾಗಿ ಮಾತಾಡ್ತಿದ್ರು. ಮತ್ತೊಮ್ಮೆ ಇನ್ನೊಂದು ಗ್ರೂಪಲ್ಲಿ ಹೋಗಿ ಇನ್ನೇನಾದ್ರೂ ಹೇಳ್ತಿದ್ರು. ಉದ್ದೇಶಪೂರ್ವಕವಾಗಿ ಡ್ರಾಮಾ ಕ್ರಿಯೇಟ್ ಮಾಡಿ ಕಾಣೆಯಾಗ್ತಿದ್ರು. ಹಾಗಾಗಿ ಅವರು ನನಗೆ ಒಂಚೂರು ಇಷ್ಟವಾಗಲಿಲ್ಲ ಎಂದಿದ್ದಾರೆ.

  ಜತೆಗೆ ಮನೆಯಲ್ಲಿ ಯಾರೂ ಮುಗ್ಧರಿಲ್ಲ ಎಂದು ಕಿಡಿ ಕಾರಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts