More

    ಅತಿಯಾದ ಡಯಟ್​​ ಮಾಡಿದ್ದೇ ಮುಳುವಾಯ್ತು, ಆಸ್ಪತ್ರೆಗೆ ಸೇರಿದ ಬಿಗ್​ಬಾಸ್​ ಮಾಜಿ ಸ್ಪರ್ಧಿ​!

    ಲಂಡನ್​: ದೇಹದ ಆಕಾರ ಪಡೆಯಲು ಅತಿಯಾದ ಡಯಟ್​ ಮಾಡಲು ಹೋದ ಬಿಗ್​ಬಾಸ್​ ಮಾಜಿ ಸ್ಪರ್ಧಿ ಹಾಗೂ ಮಾಡೆಲ್​ ಸೋಫಿಯಾ ಹಯಾತ್​ ಈಗ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

    ಅತಿಯಾದ ಉಪವಾಸ ಮಾಡಲು ಹೋಗಿ ದೇಹದಲ್ಲಿದ್ದ ಉಪ್ಪಿನಂಶ ತೀವ್ರ ಕಡಿಮೆಯಾಗಿದ್ದು, ಅವರನ್ನು ಲಂಡನ್​ನಲ್ಲಿನ ಆಸ್ಪತ್ರೆಯೊಂದರಲ್ಲಿ ದಾಖಲು ಮಾಡಲಾಗಿದೆ.

    ಕಳೆದ ಕೆಲ ವರ್ಷಗಳಿಂದ ಬ್ರಿಟನ್​ನಲ್ಲಿ ನೆಲೆಸಿರುವ ಹಯಾತ್​ ಅವರಿಗೆ ಐದು ಪಾಕೆಟ್​ ಉಪ್ಪನ್ನು ನೀಡಲಾಯಿತಂತೆ. ನಂತರ ಚೇತರಿಸಿಕೊಂಡ ಅವರನ್ನು ಚಿಕಿತ್ಸೆ ನೀಡಲಾಗುತ್ತಿದೆ.

    ಇತ್ತೀಚೆಗೆ ಆಧ್ಯಾತ್ಮಿಕತೆಯತ್ತ ಒಲವು ಮೂಡಿಸಿಕೊಂಡಿದ್ದ ಹಯಾತ್​, ಇದರ ಜತೆಗೆ ದೇಹ ಸೌಂದರ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಅತಿಯಾದ ಉಪವಾಸ ಮಾಡಿದ್ದೇ ಈ ಸ್ಥಿತಿಗೆ ಕಾರಣವಾಯಿತು ಎಂದು ಹೇಳಲಾಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಸೋಫಿಯಾ, ನಾನು ಉಪವಾಸದಿಂದ ದೇಶ ಶುದ್ಧೀಕರಿಸುವ ಅಭ್ಯಾಸವನ್ನು ಮಾಡುತ್ತಿದ್ದೆ, ಇದು ಅತಿಯಾಗಿ ದೇಹ ಸ್ಥಿತಿ ಅಪಾಯಮಟ್ಟಕ್ಕೆ ತಲುಪಿತ್ತು, ಈ ವೇಳೆ ವೈದ್ಯರು ನನ್ನನ್ನು ಕಾಪಾಡಿದ್ದಾರೆ ಎಂದು ತಮ್ಮ ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

    2016ರಲ್ಲಿ ಪ್ರಸಾರವಾದ ಹಿಂದಿ ಭಾಷೆಯ ಬಿಗ್​ಬಾಸ್​ 7ನೇ ಆವೃತ್ತಿಯಲ್ಲಿ ಸೋಫಿಯಾ ಹಯಾತ್​ ಭಾಗವಹಿಸಿದ್ದರು. (ಏಜೆನ್ಸೀಸ್​) 

    20 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದ ಪಿಡಿಒ: ಜಮೀನು ಪಹಣಿಗಾಗಿ ಲಂಚ ಕೇಳಿದ್ದ ಅಧಿಕಾರಿ ವಿರುದ್ಧ ರೈತನಿಂದ ದೂರು

    ಬಿಸಿಯೂಟದ ತೊಗರಿಬೇಳೆ ಮಾರಾಟ ಮಾಡಿದ್ದ ವಿಡಿಯೋ ವೈರಲ್: ಮುಖ್ಯ ಶಿಕ್ಷಕನ ಅಮಾನತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts