More

    ಕಾಂಗ್ರೆಸ್​ ಬಿಡಲಿದ್ದಾರಾ ಗೆಹ್ಲೋಟ್​? ಹೊಸ ಬಾಂಬ್​ ಸಿಡಿಸಿದ ಸಚಿನ್​ ಪೈಲೆಟ್​…

    ಜೈಪುರ: ಇತ್ತೀಚೆಗಷ್ಟೇ ರಾಜಸ್ಥಾನದ ಮಾನ್​ಘರ್​ ರಾಷ್ಟ್ರೀಯ ಸ್ಮಾರಕವನ್ನು ಮೋದಿ ಉದ್ಘಾಟಿಸಿದ್ದರು. ಅದೇ ವೇದಿಕೆಯಲ್ಲಿ ಅಲ್ಲಿನ ಮುಖ್ಯಮಂತ್ರಿ ಗೆಹ್ಲೋಟ್​ಗೂ ಸ್ಥಾನವಿತ್ತು. ಇದು ರಾಷ್ಟ್ರ ರಾಜಕಾರಣದಲ್ಲಿ ವಿಶೇಷ ಘಟನೆ ಆಗಿತ್ತು.

    ಈ ವಿಷಯದ ಬಗ್ಗೆ ಮಾತನಾಡಿದ ಸಚಿನ್​ ಪೈಲೆಟ್​, ‘ಇದು ಒಂದು ಕುತೂಹಲಕಾರಿ ಘಟನೆ. ಈ ಹಿಂದೆ ಮೋದಿ, ಸದನದಲ್ಲಿ ಗುಲಾಂ ನಬಿ ಆಝಾದ್​ರನ್ನು ಹೊಗಳಿದ್ದರು. ಅದಾದ ಮೇಲೆ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ. ಮೋದಿಯ ಈ ನಡೆಯನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದಿದ್ದಾರೆ.

    ಈ ಹಿಂದೆ ರಾಜ್ಯಸಭೆಯಲ್ಲಿ ಸಂಸದ ಗುಲಾಂ ನಬಿ ಆಝಾದ್​ರನ್ನು ಅವರ ಅವಧಿಯ ಕೊನೆಯ ದಿನದಂದು ಮೋದಿ ಹೊಗಳಿದ್ದರು. ಅದಾದ ಸ್ವಲ್ಪ ಸಮಯದಲ್ಲಿ ಆಝಾದ್​, ಕಾಂಗ್ರೆಸ್​ ಬಿಟ್ಟು ಹೊಸ ಪಕ್ಷ ಘೋಷಿಸಿದ್ದರು. ಈಗ ಗೆಹ್ಲೋಟ್​ ಕಾಂಗ್ರೆಸ್​ ಬಿಡಲಿದ್ದಾರಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

    ಮಾನ್​ಘರ್​ ಕಾರ್ಯಕ್ರಮದಲ್ಲಿ ರಾಜಸ್ಥಾನ ಸಿಎಂ ಮತ್ತು ಪ್ರಧಾನಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಗೆಹ್ಲೋಟ್​ರ ಕುರಿತು ‘ನಾನು ಮತ್ತು ಅಶೋಕ್​ ಜಿ ಮುಖ್ಯಮಂತ್ರಿಗಳಾಗಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಇವರು ನುರಿತ ರಾಜಕಾರಣಿ ಆಗಿದ್ದು ಇಡೀ ವೇದಿಕೆಯಲ್ಲಿ ಅತ್ಯಂತ ಹಿರಿಯ ವ್ಯಕ್ತಿ’ ಎಂದು ಹೇಳಿದ್ದರು.

    ಗೆಹ್ಲೋಟ್​ ಹಿಂದೆ ‘ನಮ್ಮ ಪ್ರಧಾನಿ ವಿದೇಶಕ್ಕೆ ಹೋದಾಗ ಅವರಿಗೆ ಉತ್ತಮ ಸ್ಥಾನಮಾನ ಸಿಗುತ್ತಿದೆ. ಏಕೆಂದರೆ ಅವರು ಪ್ರಜಾಪ್ರಭುತ್ವ ಆಳವಾಗಿ ಬೇರೂರಿರುವ, ಗಾಂಧಿ ಹುಟ್ಟಿದ ದೇಶದ ಪ್ರಧಾನಿಯಾಗಿದ್ದಾರೆ. ಜಗತ್ತು, ಆ ದೇಶದ ಪ್ರಧಾನಿ ತಮ್ಮ ಬಳಿಗೆ ಬರುತ್ತಿದ್ದಾರೆ ಎಂದು ಹೆಮ್ಮೆಪಡುತ್ತೆ’ ಎಂದಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts