More

    ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿ ತಳಭಾಗದಲ್ಲಿ ಬೃಹತ್ ಪಾಣಿಪೀಠ ಪತ್ತೆ!

    ಮಂಗಳೂರು: ಇತಿಹಾಸಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ತಳಭಾಗದಲ್ಲಿ ಬೃಹತ್ ಪಾಣಿಪೀಠ ಕಂಡುಬಂದಿದೆ. ಈ ಮೂಲಕ ದೇವಸ್ಥಾನವು ಮತ್ತೊಂದು ಅಚ್ಚರಿಗೆ ಕಾರಣವಾಗಿದೆ.

    ಇಲ್ಲಿನ ಶ್ರೀವರುಣ ದೇವರ ವಿಗ್ರಹದ ಪಾಣಿಪೀಠದ ಕೆಳಗಡೆ ಬೃಹತ್​ ಪಾಣಿಪೀಠ ಕಂಡುಬಂದಿದ್ದು, ಅದರ ಎದುರೇ ತಾಮ್ರದ ಸಣ್ಣ ಕರಡಿಗೆ ಕೂಡ ಪತ್ತೆಯಾಗಿದೆ. ಮೂರು ದಿನಗಳ ಹಿಂದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿ ಮಧ್ಯೆ ಇರುವ ಕಟ್ಟೆಯ ಕೆಳಭಾಗದ ವರುಣ ದೇವರ ವಿಗ್ರಹದ ಬಳಿ ಭೂಗರ್ಭದಲ್ಲಿ ನೀಲಿ-ಬಿಳಿ ಮಿಶ್ರಿತ ಹುಡಿ ಮಣ್ಣಿನೊಂದಿಗೆ ಅಂಟಿಕೊಂಡಿದ್ದ ವರುಣ ದೇವರ ವಿಗ್ರಹದ ಪಾಣಿಪೀಠ ಕಂಡುಬಂದಿತ್ತು. ಅದರ ಕೆಳಗೇ ಬೃಹತ್ ಪಾಣಿಪೀಠ ಪತ್ತೆಯಾಗಿದೆ.

    ಮಹಾಲಿಂಗೇಶ್ವರ ದೇವಸ್ಥಾನದ ಪುನರ್ ನಿರ್ಮಾಣ ಸಂದರ್ಭದಲ್ಲೂ ದೇವಳದ ಒಳಾಂಗಣದಲ್ಲಿ ಶಿಲಾ ಶಾಸನಗಳು, ಕೆತ್ತನೆ ಶಿಲ್ಪಗಳು, ಗರ್ಭಗುಡಿಯಲ್ಲಿ ಪ್ರಭಾವಳಿ, ರಾಜರ ಕಾಲದ ನಾಣ್ಯಗಳು ಪತ್ತೆಯಾಗಿದ್ದವು. ಈಗ ಪುಷ್ಕರಣಿ ಕಟ್ಟೆಯ ಪುನರ್​ನಿರ್ಮಾಣ ಸಂದರ್ಭದಲ್ಲಿ ಅಚ್ಚರಿಗಳು ಕಂಡುಬಂದಿವೆ.

    ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts