More

    ಜ.27ರಿಂದ 3 ದಿನ ಮೈಸೂರಲ್ಲಿ ಬೃಹತ್​ ಕೃಷಿಮೇಳ: ವಿಜಯವಾಣಿ, ದಿಗ್ವಿಜಯ ನ್ಯೂಸ್​ ಆಯೋಜನೆ

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಲವು ಮಹತ್ವಾಕಾಂಕ್ಷೆಯ ಬುತ್ತಿಯೊಂದಿಗೆ ಮತ್ತೊಂದು ಕೃಷಿಮೇಳ ಆಯೋಜಿಸಲು ವಿಜಯವಾಣಿ ಮತ್ತು ದಿಗ್ವಿಜಯ 24×7 ಸುದ್ದಿ ವಾಹಿನಿ ಸಜ್ಜಾಗಿದೆ.

    2020ರಲ್ಲಿ ಮೈಸೂರಿನಲ್ಲಿ ಆಯೋಜಿಸಿದ್ದ ಬೃಹತ್​ ಕೃಷಿಮೇಳ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಸಾಧಿಸಿತ್ತು. ಭಾರತೀಯ ಕೃಷಿಯ ಶಕ್ತಿ, ಸೌಂದರ್ಯ, ಸವಾಲು, ಸಮಸ್ಯೆ ಮತ್ತು ಪರಿಹಾರೋಪಾಯಗಳ ಬಗ್ಗೆ ಬೆಳಕು ಚೆಲ್ಲಿತ್ತು. ಇದೇ ರೀತಿ ಮತ್ತೊಂದು ಬೃಹತ್ ಕೃಷಿಮೇಳ ‘ಸುಸ್ಥಿರ ಅಭಿವೃದ್ಧಿ ನಮ್ಮ ಗುರಿ’ ಧೇಯದೊಂದಿಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ 2023ರ ಜನವರಿ 27, 28, ಮತ್ತು 29ರಂದು ನಡೆಯಲಿದೆ.

    ಕೃಷಿಗೆ ವಿವಿಧ ಯೋಜನೆಯಡಿ ಸಿಗುವ ಸಾಲ-ಸೌಲಭ್ಯ, ರೈತರ ಆದಾಯ ದ್ವಿಗುಣಗೊಳಿಸುವ ಅತ್ಯಾಧುನಿಕ ಕೃಷಿ ತಂತ್ರಜ್ಞಾನ, ಸುಧಾರಿತ ಬೇಸಾಯ, ಮಾರುಕಟ್ಟೆ, ಮೌಲ್ಯವರ್ಧನೆ ಬಗ್ಗೆ ಮಾಹಿತಿ, ಕೃಷಿ ಉಪಕರಣ, ನರ್ಸರಿ, ಸಕ್ಕರೆ ಉದ್ಯಮ, ಕೃಷಿ ವಸ್ತು ಪ್ರದರ್ಶನ ಮಳಿಗೆಗಳು, ಕೃಷಿ ಸಂಬಂಧಿಸಿದ ವಿಷಯಗಳ ಬಗ್ಗೆ ತಜ್ಞರಿಂದ ವಿಚಾರಗೋಷ್ಠಿ, ವಿವಿಧ ತಳಿಯ ಹಸುಗಳು, ಕೋಳಿ, ಕುರಿಗಳು, ತರೇಹವಾರಿ ಹೂವುಗಳು, ತರಕಾರಿ, ಸಿರಿಧಾನ್ಯ, ಮಾವು, ಹಲಸು, ಟ್ರ್ಯಾಕ್ಟರ್​- ಟಿಲ್ಲರ್​, ಬಿತ್ತನೆ ಬೀಜಗಳು, ರಸಗೊಬ್ಬರ… ಇವರು ಮಾಹಿತಿ ಹೂರಣ ಸವಿಯುವ ಜತೆಗೆ ದೇಸೀ ಕ್ರೀಡೆ-ವಿವಿಧ ಸ್ಪರ್ಧೆಗಳಲ್ಲೂ ಮಿಂದೇಳಬಹುದು ಈ ಕೃಷಿ ಮೇಳದಲ್ಲಿ.

    ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಭಾಗದಲ್ಲಿ ಕೃಷಿಯೇ ಪ್ರಧಾನ ಕಸುಬು. ಈ ಭಾಗದ ರೈತರನ್ನೇ ಹೆಚ್ಚಾಗಿ ಕೇಂದ್ರೀಕರಿಸಿಕೊಂಡು ಈ ಮೇಳ ಆಯೋಜಿಸಲಾಗುತ್ತಿದೆ. ಮೂರು ದಿನಗಳ ಕಾಲ ಕೃಷಿ ತಜ್ಞರಿಂದ ಯುವ ರೈತರು ಸೇರಿದಂತೆ ಅನ್ನದಾತರಿಗೆ ಉಪಯುಕ್ತ ಮಾಹಿತಿ ಸಿಗಲಿದೆ. ಮಳಿಗೆ ಕಾಯ್ದಿರಿಸಲು ಮೊಬೈಲ್​ ನಂ: 88844 32389 (ಶಿವಮೂರ್ತಿ), 88844 32322 (ರಾಜು) ಸಂಪರ್ಕಿಸಬಹುದು.

    ಅಣಬೆ ಪದಾರ್ಥ ತಿಂದು ರಾತ್ರಿಯಿಡೀ ನರಳಾಡಿ ಪ್ರಾಣಬಿಟ್ಟ ತಂದೆ-ಮಗ: ಈ ಕುಟುಂಬದಲ್ಲಿ ನಡೆದಿದೆ ದುರಂತಗಳ ಸರಮಾಲೆ… ಇವರ ಕರುಣಾಜನಕ ಕಥೆ ಕೇಳಿದ್ರೆ ಮನಕಲಕುತ್ತೆ…

    ನಿಮ್ಮ ಕಥೆ- ಚಿತ್ರಕಥೆ- ಸಂಭಾಷಣೆ ಬೇಡ, ಕೇಳಿದ ಪ್ರಶ್ನೆಗೆ ಮಾತ್ರ ಉತ್ತರಿಸಿ: ಸಂಸದ ಪ್ರಜ್ವಲ್​ ರೇವಣ್ಣಗೆ ಹೈಕೋರ್ಟ್​ ಚಾಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts