More

    ಬಿಗ್ ಬ್ರೇಕಿಂಗ್ – ರಾಜಕೀಯದಿಂದ ಹಿಂದೆ ಸರಿದ್ರು ರಜಿನಿಕಾಂತ್​ !

    ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ ಮುಂದಿನ ಏಪ್ರಿಲ್​-ಮೇ ತಿಂಗಳಲ್ಲಿ ನಡೆಯಲಿದ್ದು, ಜನವರಿಯಿಂದ ಡೂ ಆರ್ ಡೈ ರೀತಿಯಲ್ಲಿ ಚುನಾವಣಾ ರಾಜಕೀಯಕ್ಕೆ ಇಳಿಯುವುದಾಗಿ ಘೋಷಿಸಿದ್ದ ಸೂಪರ್​ ಸ್ಟಾರ್ ರಜಿನಿಕಾಂತ್​ ಇದೀಗ ಅದರಿಂದ ಹಿಂದೆ ಸರಿದಿದ್ದಾರೆ.  ಮೂರು ಪುಟಗಳ ವಿವರಣೆ ನೀಡಿರುವ ಅವರು ಅದನ್ನು ಟ್ವೀಟ್​ಗೆ ಅಪ್ಲೋಡ್ ಮಾಡಿ, ತಮಿಳುನಾಡು ಜನರ ಕ್ಷಮೆಯಾಚಿಸಿದ್ದಾರೆ.

    ರಾಜಕಾರಣದ ಹೊರತಾಗಿ ಜನಸೇವೆ ಮಾಡುವೆ. ಆರೋಗ್ಯ ಸ್ಥಿತಿ ಸರಿಯಾಗಿಲ್ಲದ ಕಾರಣ ಮತ್ತು ಕೋವಿಡ್ ಪರಿಸ್ಥಿತಿಯ ಕಾರಣ ಸದ್ಯ ಚುನಾವಣಾ ಕಣಕ್ಕೆ ಇಳಿದು ಕೆಲಸಮಾಡಲಾರೆ. ಹೀಗಾಗಿ ರಾಜಕೀಯದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ರಜಿನಿಕಾಂತ್ ಘೋಷಿಸಿದ್ದಾರೆ. ಮೂರ್ನಾಲ್ಕು ದಿನಗಳ ಹಿಂದಷ್ಟೇ ಅವರು ಅಣ್ಣಾತ್ತೆ ಚಿತ್ರೀಕರಣದ ಸಂದರ್ಭದಲ್ಲಿ ರಕ್ತದೊತ್ತಡದ ಸಮಸ್ಯೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಒಂದು ದಿನ ಇದ್ದು ಚಿಕಿತ್ಸೆ ಪಡೆದಿದ್ದರು. ಬಿಡುಗಡೆಯಾಗುವ ವೇಳೆ ಒಂದು ವಾರ ವಿಶ್ರಾಂತಿ ತೆಗೆದುಕೊಳ್ಳುವಂತೆ ಡಾಕ್ಟರ್ ಸಲಹೆ ನೀಡಿದ್ದರು ಎಂಬುದನ್ನು ಅವರು ಹೇಳಿದ್ದರು.

    ತಮಿಳು ಸೂಪರ್​ಸ್ಟಾರ್ ರಜಿನಿಕಾಂತ್​ ಹೊಸ ರಾಜಕೀಯ ಪಕ್ಷದೊಂದಿಗೆ ತಮಿಳುನಾಡು ರಾಜಕೀಯ ರಂಗ ಪ್ರವೇಶಕ್ಕೆ ವೇದಿಕೆ ಸಜ್ಜುಗೊಳಿಸುತ್ತಿದ್ದು, ರಾಜಕೀಯ ಪಕ್ಷವನ್ನು ಜನವರಿ ತಿಂಗಳಲ್ಲಿ ಸ್ಥಾಪಿಸುತ್ತೇವೆ. ಇದಕ್ಕೆ ಸಂಬಂಧಿಸಿ ಘೋಷಣೆಯನ್ನು ಡಿಸೆಂಬರ್ 31ರಂದು ಮಾಡುತ್ತೇವೆ. ಪ್ರತಿಯೊಂದನ್ನೂ ನಾವು ಬದಲಾಯಿಸೋಣ. ಸದ್ಯ ಎದುರಾಗಿರುವ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ತೇವೆ. ನಾವು ಪ್ರಾಮಾಣಿಕ, ಪಾರದರ್ಶಕ, ಭ್ರಷ್ಟಾಚಾರ ಮುಕ್ತ ಅಧ್ಯಾತ್ಮಿಕ ರಾಜಕಾರಣವನ್ನು ಮಾಡುತ್ತೇವೆ ಎಂದು ಪಕ್ಷದ ಧ್ಯೇಯೋದ್ದೇಶವನ್ನೂ ಡಿಸೆಂಬರ್ 3ರಂದು ಬಹಳ ವಿಶ್ವಾಸದಿಂದಲೇ ತಿಳಿಸಿದ್ದರು.

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಹೊಸ ವರ್ಷ ಹೊಸ ಪಕ್ಷ, ಡಿಸೆಂಬರ್ 31ಕ್ಕೆ ಮಹತ್ವದ ಘೋಷಣೆ ಎಂದ ಸೂಪರ್​ ಸ್ಟಾರ್ ರಜಿನಿ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts