ಹೊಸ ವರ್ಷ ಹೊಸ ಪಕ್ಷ, ಡಿಸೆಂಬರ್ 31ಕ್ಕೆ ಮಹತ್ವದ ಘೋಷಣೆ ಎಂದ ಸೂಪರ್​ ಸ್ಟಾರ್ ರಜಿನಿ !

ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್​ ರಾಜಕೀಯ ಪಕ್ಷದ ಭವಿಷ್ಯ ನಿರ್ಧಾರವಾಗಿದ್ದು, ಪಕ್ಷ ಕಟ್ಟುವ ಕೆಲಸ ಈಗಲ್ದೇ ಹೋದರೆ ಇನ್ಯಾವತ್ತೂ ಸಾಧ್ಯವಾಗಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಈ ಸಂಬಂಧ ಗುರುವಾರ ಟ್ವೀಟ್ ಮಾಡಿದ ಅವರು, ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ತಮಿಳು ಭಾಷೆಯಲ್ಲಿರುವ ಟ್ವೀಟ್​ ಮಾಡಿರುವ ಅವರು, ರಾಜಕೀಯ ಪಕ್ಷವನ್ನು ಜನವರಿ ತಿಂಗಳಲ್ಲಿ ಸ್ಥಾಪಿಸುತ್ತೇವೆ. ಇದಕ್ಕೆ ಸಂಬಂಧಿಸಿ ಘೋಷಣೆಯನ್ನು ಡಿಸೆಂಬರ್ 31ರಂದು ಮಾಡುವುದಾಗಿ ತಿಳಿಸಿದ್ದಾರೆ. ಪ್ರತಿಯೊಂದನ್ನೂ ನಾವು ಬದಲಾಯಿಸೋಣ. ಸದ್ಯ ಎದುರಾಗಿರುವ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ತೇವೆ. … Continue reading ಹೊಸ ವರ್ಷ ಹೊಸ ಪಕ್ಷ, ಡಿಸೆಂಬರ್ 31ಕ್ಕೆ ಮಹತ್ವದ ಘೋಷಣೆ ಎಂದ ಸೂಪರ್​ ಸ್ಟಾರ್ ರಜಿನಿ !