ಬೀದರ್: ವಿವಿಧ ವಸತಿ ಯೋಜನೆಯಡಿ ಅಕ್ರಮದಲ್ಲಿ ಭಾಗಿಯಾಗಿದ್ದ 7 ಪಿಡಿಒ ಅಮಾನತು ಸೇರಿದಂತೆ ಒಟ್ಟು 40 ಪಿಡಿಒಗಳಿಗೆ ಸರ್ಕಾರ 72 ಕೋಟಿ ರೂಪಾಯಿ ದಂಡ ವಿಧಿಸಿದೆ.
ವಿವಿಧ ವಸತಿ ಯೋಜನೆಯಡಿ ಅಕ್ರಮದಲ್ಲಿ ಭಾಲ್ಕಿ ತಾಲೂಕಿನ 40 ಗ್ರಾಮ ಪಂಚಾಯತಿ ಪಿಡಿಓಗಳು ಭಾಗಿಯಾಗಿದ್ದು, 07 ಜನ ಪಿಡಒಗಳನ್ನು ಜಿಲ್ಲಾ ಪಂಚಾಯತ್ ಸಿಇಒ ಅಮಾನತು ಮಾಡಿದ್ದಾರೆ.
ವಿವಿಧ ವಸತಿ ಯೋಜನೆಗಳಡಿಯಲ್ಲಿ ಅರ್ಹ ಫಲಾನುಭಾವಿಗಳಿಗೆ ಮನೆ ಹಂಚಿಕೆಯಲ್ಲಿ ಭಾರಿ ಅಕ್ರಮ ಹಿನ್ನೆಲೆಯಲ್ಲಿ ಭಾಲ್ಕಿಯ 40 ಗ್ರಾಮ ಪಂಚಾಯತಿ ಪಿಡಿಒಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. 8 ಸಾವಿರ ಫಲಾನುಭಾವಿಗಳಿಗೆ ಅಕ್ರಮ ಮನೆ ಮಂಜೂರಾತಿ ಮಾಡಿದ ಆರೋಪ ಹೊತ್ತ ಬೀದರ್ನ ಭಾಲ್ಕಿ ತಾಲೂಕಿನ 40 ಗ್ರಾಮ ಪಂಚಾಯತಿಗಳ ಪಿಡಿಒಗಳಿಗೆ 72 ಕೋಟಿ ರೂ. ದಂಡ ವಿಧಿಸಲಾಗಿದೆ.
ಭಾಲ್ಕಿಯ ಬಾಳೂರ್ ಪಿಡಿಒ ಸಂಗಮೇಶ, ಬಿರಿ(ಬಿ) ಪಿಡಿಓ ಮಲ್ಲೇಶ ಮಾರುತಿ, ರೇವಣಪ್ಪ ರೇಖಾ, ಚಂದ್ರಶೇಖರ, ಸಂತೋಷ ಹಾಗೂ ಪ್ರವೀಣಕುಮಾರ ಮಹಾತ್ಮಕರ ಸೇರಿದಂತೆ 7 ಜನ ಪಿಡಿಒಗಳಿಗೆ ಅಮಾನತು ಶಿಕ್ಷೆ ವಿಧಿಸಲಾಗಿದೆ. ಉಳಿದ 33 ಪಿಡಿಒಗಳಿಗೂ ಅಮಾನತು ಶಿಕ್ಷೆ ಗ್ಯಾರಂಟಿ ಎನ್ನಲಾಗಿದೆ.
ಅಮಾನತು ಮಾಡಿ ಜಿಲ್ಲಾ ಪಂಚಾಯತ ಸಿಇಓ ಗ್ಯಾನೇಂದ್ರಕುಮಾರ ಗಂಗವಾರ ಆದೇಶ ಹೊರಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)
VIDEO| ಸ್ವಚ್ಛಂದವಾಗಿ ಹಾರಾಡ್ತಿದ್ದ ಪಕ್ಷಿಗೆ ಶೂಟ್ ಮಾಡಿದ ಬೆನ್ನಲ್ಲೇ ಕರ್ಮದ ಫಲ ಅನುಭವಿಸಿದ ವ್ಯಕ್ತಿ!
8 ತಿಂಗಳ ಮಗುವಿನೊಂದಿಗೆ ಕಟ್ಟಡದಿಂದ ಜಿಗಿದು ಮಹಿಳೆ ಆತ್ಮಹತ್ಯೆಗೆ ಶರಣು: ಮಗುವಿನ ಜೀವ ಉಳಿದಿದ್ಹೇಗೆ?