More

    ದೆಹಲಿಯ ನಿಜಾಮುದ್ದೀನ್​ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡಿದ್ದ ಬೀದರ್​ನ 26 ಮಂದಿಗೆ ಕ್ವಾರಂಟೈನ್​

    ಬೀದರ್: ದೆಹಲಿಯ ನಿಜಾಮುದ್ದೀನ್​ ಪ್ರಾರ್ಥನಾ ಮಂದಿರಕ್ಕೆ ಬೀದರ್​ನಿಂದ ತೆರಳಿದ್ದ 26 ಮಂದಿಯನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಚ್​.ಆರ್​.ಮಹಾದೇವ ಹೇಳಿದರು.

    ಪ್ರಾರ್ಥನಾ ಸಭೆಗೆ ಹಾಜರಾಗಿದ್ದವರಲ್ಲಿ ಕರೊನಾ ವೈರಸ್​ ಸೋಂಕು ಲಕ್ಷಣಗಳು ಗೋಚರಿಸಿಲ್ಲ. ಆದರೂ ಅವರನ್ನು ಪ್ರತ್ಯೇಕವಾಗಿ ಇರಿಸಿ ನಿಗಾ ವಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

    26 ಮಂದಿಯ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಸೋಂಕಿನ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದ ಮಜರುದ್ದೀನ್​ ಎಂಬ ವ್ಯಕ್ತಿಯನ್ನು 2 ಬಾರಿಗೆ ಪರೀಕ್ಷೆಗೆ ಒಳಪಡಿಸಲಾಗಿದೆ. 2 ಬಾರಿಯೂ ವರದಿಯಲ್ಲಿ ನೆಗೆಟಿವ್​ ಬಂದಿದೆ. ಜಿಲ್ಲೆಯ ಜನರು ಭೀತಿಪಡುವುದು ಬೇಡ. ಮನೆಯಿಂದ ಯಾರು ಹೊರಗೆ ಬರಬೇಡಿ ಎಂದು ಅವರು ಹೇಳಿದರು.

    ದೆಹಲಿಯ ನಿಜಾಮುದ್ದೀನ್​ ಪ್ರಾರ್ಥನಾ ಮಂದಿರದಲ್ಲಿ ಮಾ.1 ರಿಂದ 15ರವರೆಗೆ ನಡೆದ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡಿದ್ದ 6 ಮಂದಿ ತೆಲಂಗಾಣದಲ್ಲಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನಿಗಾ ವಹಿಸಲಾಗಿದೆ. (ದಿಗ್ವಿಜಯ ನ್ಯೂಸ್​)

    ದೆಹಲಿಯ ನಿಜಾಮುದ್ದೀನ್​ ಪ್ರಾರ್ಥನಾ ಮಂದಿರದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 6 ಮಂದಿ ಕರೊನಾ ವೈರಸ್​ನಿಂದ ಸಾವು; ಅಪಾಯದಲ್ಲಿ 2000 ಜನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts