More

    VIDEO| ನಮಗೆ ಇಲ್ಲಿರಲು ಆಗುತ್ತಿಲ್ಲ, ದಯಮಾಡಿ ನಮ್ಮನ್ನು ರಕ್ಷಿಸಿ ಎಂದು ವಿದ್ಯಾರ್ಥಿನಿಯರ ಅಳಲು

    ಬೀದರ್: ದಯಮಾಡಿ ನಮ್ಮನ್ನು ನಮ್ಮ ರಾಜ್ಯಕ್ಕೆ ಕರೆಸಿಕೊಳ್ಳಿ ಎಂದು ಕರೊನಾ ಬಾಧಿತ ಮಹಾರಾಷ್ಟ್ರದಲ್ಲಿ ಸಿಲುಕಿಕೊಂಡಿರುವ ರಾಜ್ಯದ 45 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಸರ್ಕಾರದ ಬಳಿ ಅಂಗಲಾಚಿದ್ದಾರೆ.

    ಮಹಾರಾಷ್ಟ್ರದಲ್ಲಿ ಎರಡು ತಿಂಗಳ ಹಿಂದೆ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕೃಷಿ ತರಬೇತಿಯಲ್ಲಿ ಬೀದರ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯ 45 ಕ್ಕೂ ಹೆಚ್ವು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ತರಬೇತಿ ಮುಗಿಸಿ ತವರಿಗೆ ಮರಳುವಷ್ಟರಲ್ಲೇ ಕರೊನಾ ಲಾಕ್​ಡೌನ್ ಘೋಷಣೆ ಆದ್ದರಿಂದ ಎರಡು ತಿಂಗಳಿಂದ ಸೊಲ್ಲಾಪುರದಲ್ಲಿಯೇ ಉಳಿದಿದ್ದಾರೆ.

    ಇದನ್ನೂ ಓದಿ: VIDEO| ಭಾರತದಲ್ಲಿ ಪತ್ತೆಯಾಯ್ತು ಎರಡು ತಲೆ: ಇದರ ವಿಶೇಷತೆ ಕೇಳಿದ್ರೆ ಅಚ್ಚರಿಗೊಳ್ತಿರಾ…!

    ಶಿವಮೊಗ್ಗ, ಉತ್ತರ ಕನ್ನಡ, ದಾವಣಗೆರೆ, ಚಿಕ್ಕಬಳ್ಳಾಪುರ, ಧಾರವಾಡ, ಬಾಗಲಕೋಟೆ ಹಾಗೂ ಬೀದರ್ ಸೇರಿದಂತೆ ವಿವಿಧ ಜಿಲ್ಲೆಯ ವಿದ್ಯಾರ್ಥಿನಿಯರಿಗೆ ಊಟ ವಸತಿ ಸೇರಿದಂತೆ ನಾನು ಸಮಸ್ಯೆಯಾಗುತ್ತಿದ್ದು, ದಯಮಾಡಿ ನಮ್ಮ ಸರ್ಕಾರ ನಮ್ಮ ನೆರವಿಗೆ ಬರಬೇಕು ಹಾಗೂ ನಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗಿ ಎಂದು ಭಯಭೀತರಾಗಿ ಕಣ್ಣೀರಾಕಿದ್ದಾರೆ. (ದಿಗ್ವಿಜಯ ನ್ಯೂಸ್​)

    ನಮಗೆ ಇಲ್ಲಿರಲು ಆಗುತ್ತಿಲ್ಲ, ದಯಮಾಡಿ ನಮ್ಮನ್ನು ರಕ್ಷಿಸಿ ಎಂದು ವಿದ್ಯಾರ್ಥಿನಿಯರ ಅಳಲು

    ನಮಗೆ ಇಲ್ಲಿರಲು ಆಗುತ್ತಿಲ್ಲ, ದಯಮಾಡಿ ನಮ್ಮನ್ನು ರಕ್ಷಿಸಿ ಎಂದು ವಿದ್ಯಾರ್ಥಿನಿಯರ ಅಳಲು#Bidar #Maharashtra #KarnatakaStudents #Coronavirus #Covid19 #Lockdown

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಮೇ 7, 2020

    ಹಳಿಗಳ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಹರಿದ ಗೂಡ್ಸ್​ ರೈಲು: 15 ಮಂದಿ ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts