More

    ರಾ.ಹೆ.275ರಲ್ಲಿ ಪ್ರಾಯೋಗಿಕ ಸಂಚಾರ ಶುರು ವಂಡರ್‌ಲಾ ಗೇಟ್‌ನಿಂದ ಬೈರಾಪಟ್ಟಣವರೆಗೆ ಏಕಮುಖ ಸಂಚಾರ

    ಬಿಡದಿ: ಬೆಂಗಳೂರಿನಿಂದ ಮೈಸೂರಿಗೆ ನೂತನವಾಗಿ ನಿರ್ವಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಬಿಡದಿಯ ವಂಡರ್‌ಲಾ ಗೇಟ್‌ನಿಂದ ಬೈರಾಪಟ್ಟಣದವರೆಗೆ ವಾಹನಗಳ ಏಕಮುಖ ಸಂಚಾರ ಮಂಗಳವಾರ ಪ್ರಾಯೋಗಿಕವಾಗಿ ಆರಂಭಗೊಂಡಿತು.


    ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ಸಾಗಿದ್ದು, ಆಗಸ್ಟ್ 15ರಂದು ಬೆಂಗಳೂರಿನಿಂದ ನಿಡಟ್ಟವರೆಗೆ ರಸ್ತೆ ಸಂಚಾರ ಆರಂಭವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ವಿಳಂಬವಾದ ಹಿನ್ನೆಲೆಯಲ್ಲಿ ಇದೀಗ ಬಿಡದಿಯಿಂದ – ಬೈರಾಪಟ್ಟಣವರೆಗೆ ಏಕಮುಖ ವಾಹನ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಗಿದೆ.


    ದಿನನಿತ್ಯ ಕಿರಿಕಿರಿ: ಬೆಂಗಳೂರಿನಿಂದ ಮೈಸೂರು ಹಾಗೂ ಮೈಸೂರಿನಿಂದ ಬೆಂಗಳೂರಿಗೆ ಸಂಚರಿಸುವ ಪ್ರಯಾಣಿಕರು ಹಾಗೂ ವಾಹನ ಸವಾರರು ಟ್ರಾಫಿಕ್ ಕಿರಿಕಿರಿಯಿಂದ ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದರು. ಹಾಗಾಗಿ ಕಳೆದ ಮೂರು ವರ್ಷಗಳ ಹಿಂದೆ ಬೆಂಗಳೂರಿನಿಂದ ಮೈಸೂರುವರೆಗೆ ದಶಪಥ ರಸ್ತೆ ನಿರ್ವಾಣಕ್ಕೆ ಉದ್ದೇಶಿಸಲಾಗಿತ್ತು.

    ಪೂರ್ಣಗೊಳ್ಳದ ಕಾಮಗಾರಿ: ಎರಡು ಹಂತದಲ್ಲಿ ಹೆದ್ದಾರಿ ಕಾಮಗಾರಿ ನಡೆಸಲು ಯೋಜನೆ ರೂಪಿಸಲಾಗಿತ್ತು. ಮೊದಲ ಹಂತದಲ್ಲಿ ನೈಸ್ ರಸ್ತೆಯಿಂದ ನಿಡಟ್ಟವರೆಗೆ ಕಾಮಗಾರಿ ಆರಂಭಗೊಂಡಿತ್ತು. ಹಾಗೂ ನಿಡಟ್ಟವರೆಗೆ ರಸ್ತೆ ಉದ್ಘಾಟನೆ ವಾಡಲು ಸಿದ್ಧತೆ ವಾಡಿಕೊಳ್ಳಲಾಗಿತ್ತು. ಅದರೆ ರಾಮನಗರದಿಂದ ಚನ್ನಪಟ್ಟಣವರೆಗೆ ಕೆಲವು ಕಡೆ ರಸ್ತೆ ಕಾಮಗಾರಿಗೆ ಕಲ್ಲಿನ ಬಂಡೆಗಳು ಸಿಕ್ಕಿದ ಪರಿಣಾಮವಾಗಿ ಕಾಮಗಾರಿ ವಿಳಂಬವಾಗಿತ್ತು. ಹಾಗಾಗಿ ಇನ್ನೂ ರಸ್ತೆ ಕೆಲಸ ಪ್ರಗತಿಯಲ್ಲಿದೆ.

    ನೂರಾರು ವಾಹನಗಳ ಸಂಚಾರ: ಬಿಡದಿಯ ವಂಡರ್‌ಲಾ ಗೇಟ್‌ನಿಂದ ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣದವರೆಗೆ ಏಕಮುಖ ಸಂಚಾರಕ್ಕೆ ಪ್ರಾಯೋಗಿಕವಾಗಿ ವಾಹನಗಳನ್ನು ಬಿಡಲಾಗಿದೆ. ಹಾಗಾಗಿ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿವೆ. ಕಾರು, ಗೂಡ್ಸ್ ವಾಹನಗಳು, ಬೈಕ್‌ಗಳು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಸಂಚರಿಸುತ್ತಿವೆ. ಬೆಂಗಳೂರಿನಿಂದ ಮೈಸೂರಿಗೆ ಹೋಗುವ ಬಹುತೇಕ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿವೆ.


    ಸದ್ಯಕ್ಕೆ ಬಿಡದಿ ವಂಡರಲಾ ಗೇಟ್‌ನಿಂದ ಬೈರಾಪಟ್ಟಣವರೆಗೆ ಏಕಮುಖ ಸಂಚಾರಕ್ಕೆ ಅನುವು ವಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಗೌರಿ ಗಣೇಶ, ನಾಡಹಬ್ಬ ದಸರಾ ಬರುತಿದ್ದು ಹಾಗಾಗಿ ಈ ಹಬ್ಬಗಳಿಗೆ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಅಷ್ಟರೊಳಗೆ ಎರಡು ಕಡೆ ಸುಗಮ ಸಂಚಾರಕ್ಕೆ ಅವಕಾಶ ವಾಡಿಕೊಡಬೇಕಿದೆ.
    | ನಾಗೇಶ್ ತಗೆಚಗೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts