More

    ಸೋಲು-ಗೆಲುವಿನ ಲೆಕ್ಕಾಚಾರಕ್ಕೆ ಇಂದು ತೆರೆ: ಬಿಡದಿ ಪುರಸಭೆ ಚುನಾವಣೆ ಮತ ಎಣಿಕೆ ಪ್ರಮುಖ ಪಕ್ಷಗಳ ನಾಯಕರಿಗೆ ಗೆಲ್ಲುವ ವಿಶ್ವಾಸ

    ಬಿಡದಿ:  ಪುರಸಭೆಗೆ ಸೋಮವಾರ ನಡೆದ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಮುಖಂಡರು ಈಗ ಸೋಲು – ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
    ಮತದಾನೋತ್ತರ ಸಮೀಕ್ಷೆಯಲ್ಲಿ ಬಿಡದಿ ಮೇಲ್ಭಾಗದ ವಾರ್ಡ್‌ಗಳಲ್ಲಿ ಜೆಡಿಎಸ್ ಪಕ್ಷ ಮೇಲುಗೈ ಸಾಧಿಸಿದರೆ, ಬಿಡದಿ ಕೆಳ ಭಾಗದ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗಳಿಸುವ ಲಕ್ಷಣ ಕಂಡು ಬರುತ್ತಿದೆ. ಒಟ್ಟಾರೆ ಪುರಸಭೆಯ 23 ಸ್ಥಾನಗಳ ಪೈಕಿ 14ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಬಹುಮತದೊಂದಿಗೆ ಮೇಲುಗೈ ಸಾಧಿಸುವ ಅವಕಾಶಗಳು ನಿಚ್ಚಳವಾಗಿ ಕಂಡು ಬರುತ್ತಿದೆ ಎಂಬ ಬಗ್ಗೆಯೂ ಚರ್ಚೆಯಾಗುತ್ತಿದೆ. ಆದರೂ ಮತದಾರ ನೀಡಿರುವ ತೀರ್ಪು ಯಾರ ಪರವಾಗಿದೆ ಎಂಬುದು ಡಿ.30ರ ಗುರುವಾರ ಫಲಿತಾಂಶ ಹೊರಬಿದ್ದ ನಂತರವಷ್ಟೆ ತಿಳಿಯಲಿದೆ.

    ಕೆಲವೊಂದು ವಾರ್ಡ್‌ಗಳನ್ನು ಬಿಟ್ಟರೆ ಉಳಿದೆಡೆ ಜೆಡಿಎಸ್ – ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ನಡೆದಿರುವುದರಿಂದ ಯಾರು ಗೆಲುವು ಸಾಧಿಸಲಿದ್ದಾರೆ ಎಂದು ಹೇಳಲು ಕಷ್ಟ ಸಾಧ್ಯವಾಗಿದೆ. ಮತ್ತೆ ಕೆಲವು ವಾರ್ಡ್‌ಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಗೆ ನಿರಾಯಾಸ ಗೆಲುವು ಸಿಗಲಿದೆ, ತೀವ್ರ ಪೈಪೋಟಿ ಇರುವ ಆರು ವಾರ್ಡ್‌ಗಳಲ್ಲಿ ಕೂದಲೆಳೆ ಅಂತರದಲ್ಲಿ ಫಲಿತಾಂಶ ಬರಲಿದೆ ಎಂಬ ಲೆಕ್ಕಾಚಾರ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

    ಬಿಡದಿ ಪುರಸಭೆಯಲ್ಲಿ ಮತ್ತೆ ಅಧಿಕಾರ ಹಿಡಿಯಲು ಜೆಡಿಎಸ್ ಶಾಸಕ ಎ. ಮಂಜುನಾಥ್ ಮತ್ತು ಕಾಂಗ್ರೆಸ್ ತೆಕ್ಕೆಗೆ ತರಲು ವಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಆದರೆ, ಮತದಾರನ ಒಲವು ಯಾರ ಕಡೆ ಎಂಬುದನ್ನು ಕಾದು ನೋಡಬೇಕಿದೆ. ಹಿಂದಿನ ಚುನಾವಣೆಯಲ್ಲಿ ಜೆಡಿಎಸ್ 12 ಮತ್ತು ಕಾಂಗ್ರೆಸ್ ಪಕ್ಷ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಬಹುಮತ ಹೊಂದಿದ್ದ ಜೆಡಿಎಸ್ ಪಕ್ಷ ಐದು ವರ್ಷಗಳ ಕಾಲ ಪುರಸಭೆಯಲ್ಲಿ ಆಡಳಿತ ನಡೆಸಿತ್ತು.

    ಒಟ್ಟಾರೆ ಬಿಡದಿ ಪುರಸಭೆಯ ಚುಕ್ಕಾಣಿಗಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಪೈಪೋಟಿಯ ನಡುವೆ ಮತದಾರ ಯಾವ ಪರ ತೀರ್ಮಾನ ನೀಡಿದ್ದಾನೆ ಎಂಬುದು ಬಿಡದಿಯ ಜನರಲ್ಲಿ ಕುತೂಹಲ ಮೂಡಿಸಿದೆ. ಗ್ರಾಪಂ 2 ಕ್ಷೇತ್ರದ ಮತ ಎಣಿಕೆ: ಪುರಸಭೆ ಚುನಾವಣೆ ಮತ ಎಣಿಕೆ ನಂತರ ಗ್ರಾಮ ಪಂಚಾಯಿತಿಗಳಿಗೆ ನಡೆದ ಎಸ್‌ವಿಟಿ ಕಾಲನಿ ಮತ್ತು ಮುತ್ತರಾಯನಗುಡಿ ಪಾಳ್ಯದ ಕ್ಷೇತ್ರದ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಚುನಾವಣಾ ಶಿರಸ್ತೆದಾರ್ ಶ್ರೀಧರ್ ತಿಳಿಸಿದ್ದಾರೆ. ಮಂಚನಾಯ್ಕನಹಳ್ಳಿ ಗ್ರಾಪಂಗೆ ಶೇ.83ಹೋಬಳಿಯ ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯಿತಿ ಎಸ್‌ವಿಟಿ ಕಾಲನಿ ಸದಸ್ಯ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಶೇ.83.47 ಮತದಾನ ನಡೆದಿದೆ. ಬನ್ನಿಕುಪ್ಪೆ (ಬಿ) ಮುತ್ತರಾಯನಗುಡಿಪಾಳ್ಯದ ಕ್ಷೇತ್ರ ಚುನಾವಣೆಯಲ್ಲಿ ಶೇ.92.80 ಮತದಾನವಾಗಿದೆ.

     

    68 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ: ಬಿಡದಿಯ ಕೇತಿಗಾನಹಳ್ಳಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 30ರ ಗುರುವಾರ ಬೆಳಿಗ್ಗೆ ಪುರಸಬೆಯ 25 ಮತಗಟ್ಟೆಗಳ ಮತ ಎಣಿಕೆ 6 ಟೇಬಲ್‌ಗಳಲ್ಲಿ ನಡೆಯಲಿದೆ.
    ಇವಿಎಂ ಯಂತ್ರ ಚುನಾವಣೆಯಲ್ಲಿ ಬಳಕೆಯಾಗಿರುದರಿಂದ ಒಂದು ಟೇಬಲ್‌ನಲ್ಲಿ ಇಬ್ಬರು ಆಧಿಕಾರಿಗಳಂತೆ ಒಟ್ಟು 12 ಅಧಿಕಾರಿಗಳ ಮೂಲಕ ಎಣಿಕೆ ಕಾರ್ಯ ನಡೆಯಲಿದೆ ಎಂದು ಶಿರಸ್ತೆದಾರ್ ಶ್ರೀಧರ್ ತಿಳಿಸಿದ್ದಾರೆ.

    ಅಭಿನಂದನೆ: ಪುರಸಭೆಯ 23 ಕೌನ್ಸಿಲರ್ ಸ್ಥಾನಗಳು ಮತ್ತು ಗ್ರಾಮ ಪಂಚಾಯಿತಿಯ ಎರಡು ಸ್ಥಾನಗಳಿಗೆೆ ಸೋಮವಾರ ನಡೆದ ಚುನಾವಣೆಯಲ್ಲಿ ಶಾಂತಿಯುತವಾಗಿ ಭಾಗವಹಿಸಿ ಮತದಾನ ವಾಡಿದ ಮತದಾರರಿಗೆ, ಆಯಾಯ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಚುನಾವಣೆಯಲ್ಲಿ ಭಾಗವಹಿಸಿದ ಮುಖಂಡರು, ಕಾರ್ಯ ಕರ್ತರಿಗೆ ಶಾಸಕ ಎ.ಮಂಜುನಾಥ್, ವಾಜಿ ಶಾಸಕ ಎಚ್.ಸಿ.ಬಾಲಕೃಷ್ಣ, ಬಿಡದಿ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜು, ಬಿಡದಿ ಹೋಬಳಿ ಬಿಜೆಪಿ ಅದ್ಯಕ್ಷ ರವಿಕುವಾರ್, ಬಿಡದಿ ಸ್ಮಾರ್ಟ್‌ಸಿಟಿ ನಿರ್ದೇಶಕ ಮುತ್ತುರಾಜು, ಹನುಮೇಶ್, ರೇಣುಕಯ್ಯ ಮತ್ತಿತರರು ಅಭಿನಂದನೆ ಸಲ್ಲಿಸಿದ್ದಾರೆ.

     

     

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts