More

    ದ್ವಿಶತಕ ಪೂರೈಸಿದ ಕರೊನಾ ವೈರಸ್

    ಬೆಳಗಾವಿ: ಜಿಲ್ಲೆಯಲ್ಲಿ ಮಂಗಳವಾರ ಮಹಾಮಾರಿ ಕರೋನಾ ವೈರಸ್ ಸ್ಫೋಟಗೊಂಡಿದ್ದು, ಒಂದೇ ದಿನ 51 ಜನರಿಗೆ ಕೋವಿಡ್-19 ಪ್ರಕರಣ ದೃಢಪಟ್ಟಿದೆ. ಈ ಮೂಲಕ ಜಿಲ್ಲಾದ್ಯಂತ ಕರೊನಾ ಸೋಂಕಿತರ ಸಂಖ್ಯೆ 204ಕ್ಕೆ ಏರಿದೆ.

    51 ಪ್ರಕರಣಗಳಲ್ಲಿ 18 ಮಹಿಳೆಯರು, 22 ಪುರುಷರು, 3 ಬಾಲಕಿಯರು ಹಾಗೂ 8 ಬಾಲಕರಲ್ಲಿ ಸೋಂಕು ಪತ್ತೆಯಾಗಿದೆ. ಅವರಲ್ಲಿ ಒಟ್ಟು 46 ಜನರಿಗೆ ಮಹಾರಾಷ್ಟ್ರ ನಂಟು ಇದ್ದರೆ, ಇಬ್ಬರಿಗೆ ದೆಹಲಿ ಹಾಗೂ ಒಬ್ಬರಿಗೆ ಗುಜರಾತ್ ಪ್ರವಾಸದಿಂದಾಗಿ ಸೋಂಕು ಧೃಡಪಟ್ಟಿದೆ. ಮತ್ತೊಂದೆಡೆ, ಅನ್ಯ ರಾಜ್ಯಗಳ ಪ್ರಯಾಣದ ಸಂಪರ್ಕವೇ ಇಲ್ಲದ ಇಬ್ಬರಲ್ಲಿ (ಪಿ-3703 ಹಾಗೂ ಪಿ-3714) ಸೋಂಕು ದೃಢಪಟ್ಟಿದ್ದು, ಅವರಿಗೆ ಸೋಂಕು ಹೇಗೆ ತಗುಲಿದೆ ಎಂಬ ಮಾಹಿತಿಯೇ ಇಲ್ಲ. ಹೀಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಸಂಪರ್ಕದ ಮೂಲ ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.

    ಸೋಂಕಿತರ ವಿವರ: ಬೆಳಗಾವಿ ಕಮಿಷನರೇಟ್ ವ್ಯಾಪ್ತಿಯಲ್ಲಿ 22, ಬೆಳಗಾವಿ ತಾಲೂಕಿನ ಅತವಾಡ ಗ್ರಾಮ 11, ಬಾಳೇಕುಂದ್ರಿ 2, ಮುತಗಾ 2, ಸಾಂಬ್ರಾ 1, ಸಾವಗಾಂವ 1, ಸುಳಗಾ 2, ಉಚಗಾಂವ ಗ್ರಾಮದ 3 ಜನರಲ್ಲಿ ಕರೊನಾ ದೃಢಪಟ್ಟಿದೆ.

    ಬೆಳಗಾವಿ ಜಿಲ್ಲೆ ಯಮಕನಮರಡಿ ಕ್ಷೇತ್ರ ವ್ಯಾಪ್ತಿಯಲ್ಲಿ 22 ಜನರಲ್ಲಿ, ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ದಡ್ಡಿ ಗ್ರಾಮದಲ್ಲಿ 11, ಕೋತ್ ಗ್ರಾಮ 3, ಮೋದಗಾ 2, ಮಣಗುತ್ತಿ 2, ಬಿದ್ರೇವಾಡಿ 1, ದುಂಡಗಟ್ಟಿ ಗ್ರಾಮದಲ್ಲಿ 2 ಜನರಿಗೆ ಸೋಂಕು ದೃಢಪಟ್ಟಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕರೊನಾ ಪ್ರಕರಣಗಳಿಂದ ಜಿಲ್ಲೆಯ ಜನ ಆತಂಕಕ್ಕೆ ಈಡಾಡಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts