More

    ತಿಂಗಳಿಗೆ 1 ಕೋಟಿ ಕೋವಾಕ್ಸಿನ್ ಡೋಸ್​ ತಯಾರಿಸಲಿದೆ ಬಿಬ್ಕಾಲ್

    ನವದೆಹಲಿ : ಕರೊನಾ ಎರಡನೇ ಅಲೆಗೆ ತತ್ತರಿಸಿರುವ ಭಾರತದಲ್ಲಿ ಎಲ್ಲರೂ ಕರೊನಾ ಲಸಿಕೆಯನ್ನು ಶೀಘ್ರವಾಗಿ ಪಡೆದು ಸುರಕ್ಷಿತರಾಗಬೇಕೆಂದು ಹಂಬಲಿಸುತ್ತಿದ್ದಾರೆ. ಆದರೆ ಹಲವು ರಾಜ್ಯಗಳಲ್ಲಿ ಭಾರತ್​ ಬಯೋಟೆಕ್​ನ ಕೋವಾಕ್ಸಿನ್ ಮತ್ತು ಸೀರಮ್​ ಇನ್ಸ್​​ಟಿಟ್ಯೂಟ್​ನ ಕೋವಿಶೀಲ್ಡ್​​ ಲಸಿಕೆಗಳ ಪೂರೈಕೆಯು ಬೇಡಿಕೆಗೆ ತಕ್ಕಷ್ಟು ನಡೆಯುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ. ಹೀಗಿರುವಾಗ, ಸರ್ಕಾರಿ ಲಸಿಕೆ ಉತ್ಪಾದಕ ಕಂಪೆನಿ ಭಾರತ್ ಇಮ್ಯುನಾಲಾಜಿಕಲ್ಸ್​ ಅಂಡ್​ ಬಯೊಲಾಜಿಕಲ್ಸ್​ ಕಾರ್ಪೊರೇಷನ್ ಲಿಮಿಟೆಡ್​​ (ಬಿಬ್ಕಾಲ್) ಕಂಪೆನಿಗೆ ಕೋವಾಕ್ಸಿನ್ ಲಸಿಕೆಯನ್ನು ಉತ್ಪಾದಿಸುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

    ಸೆಪ್ಟೆಂಬರ್​ನಿಂದ ಉತ್ತರಪ್ರದೇಶದ ಬುಲಂದ್​ಶಹರ್​ನಲ್ಲಿರುವ ತನ್ನ ಘಟಕದಲ್ಲಿ ಕರೊನಾ ಲಸಿಕೆ ಉತ್ಪಾದನೆ ಆರಂಭಿಸಲಿರುವ ಬಿಬ್ಕಾಲ್​, ತಿಂಗಳಿಗೆ 1 ಕೋಟಿ ಕೋವಾಕ್ಸಿನ್ ಡೋಸ್​ಗಳನ್ನು ತಯಾರಿಸುವ ಗುರಿ ಹೊಂದಿದೆ. ತದನಂತರದಲ್ಲಿ ಕ್ರಮೇಣ ಈ ಪ್ರಮಾಣವನ್ನು 2 ಕೋಟಿಗೂ ಹೆಚ್ಚಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋವಾಕ್ಸಿನ್ ಉತ್ಪಾದನೆಗಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಬಿಬ್ಕಾಲ್​ಗೆ 30 ಕೋಟಿ ರೂ.ಗಳನ್ನು ಒದಗಿಸುವುದಾಗಿ ಹೇಳಿದೆ.

    ಇದನ್ನೂ ಓದಿ: ಹೇರಳವಾಗಿ ಲಭ್ಯವಾಗಲಿದೆ ಸ್ಪುಟ್ನಿಕ್ ವಿ ಲಸಿಕೆ; ಆಗಸ್ಟ್​​ನಿಂದ ಭಾರತದಲ್ಲೇ ಉತ್ಪಾದನೆ ಶುರು

    “ನಮ್ಮ ಈ ಘಟಕವು ಹಾಲಿ ಶೇ. 60 ರಷ್ಟು ಭಾರತದ ಪೋಲಿಯೋ ಲಸಿಕೆಗಳನ್ನು ಉತ್ಪಾದಿಸುತ್ತಿದೆ. ಈ ಘಟಕದಲ್ಲಿ ಕರೊನಾ ಲಸಿಕೆಯನ್ನು ಶೇಖರಿಸಿಡಲು ಸೌಲಭ್ಯಗಳಿದ್ದು, ಕೋಲ್ಡ್​ ಚೈನ್ ಮೂಲಸೌಕರ್ಯವಿದೆ” ಎಂದು ಬಿಬ್ಕಾಲ್ ಉಪಾಧ್ಯಕ್ಷ ರಾಜೀವ್​ ಕುಮಾರ್​ ಶುಕ್ಲ ಹೇಳಿದ್ದಾರೆ. “ಭಾರತ್​ ಬಯೋಟೆಕ್ ಮತ್ತು ಬಿಬ್ಕಾಲ್ ವಿಜ್ಞಾನಿಗಳು ಶೀಘ್ರದಲ್ಲೇ ಜೈವಿಕ ಸುರಕ್ಷತೆ ಪ್ರಯೋಗಾಲಯ-3(ಬಿಎಸ್-3)ಅನ್ನು ಸ್ಥಾಪಿಸಲಿದ್ದಾರೆ ಮತ್ತು ಕೊವಾಕ್ಸಿನ್ ಉತ್ಪಾದನೆಯು ಸೆಪ್ಟೆಂಬರ್ ವೇಳೆಗೆ ಪ್ರಾರಂಭವಾಗಲಿದೆ” ಎಂದಿದ್ದಾರೆ. (ಏಜೆನ್ಸೀಸ್)

    ರಾಜ್ಯದಲ್ಲಿ ಕರೊನಾ ಆರ್​​ನಾಟ್​ ವ್ಯಾಲ್ಯೂ ಇಳಿಕೆ… ಹರಡುವಿಕೆ ಪ್ರಮಾಣ ಕುಸಿತ

    ರೇಷನ್​ ನಿರಾಕರಿಸಿದರೆ 1967 ಸಹಾಯವಾಣಿಗೆ ದೂರು ನೀಡಿ

    250 ರೂ.ಗೆ ಮನೆಯಲ್ಲೇ ಕರೊನಾ ಪರೀಕ್ಷೆ ! ರಾಪಿಡ್ ಆ್ಯಂಟಿಜನ್ ಹೋಂ ಟೆಸ್ಟ್​ ಕಿಟ್ ಬಳಕೆ​ಗೆ ಹಸಿರು ನಿಶಾನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts