More

    ಭೂಮನಗುಂಡ ಆಂಜನೇಯ ಜಾತ್ರೆ ಸಂಪನ್ನ

    ಅರಕೇರಾ: ಭೂಮನಗುಂಡದಲ್ಲಿ ಆಂಜನೇಯ ಜಾತ್ರಾ ಮಹೋತ್ಸವ ಶುಕ್ರವಾರ ಅದ್ದೂರಿಯಾಗಿ ನಡೆಯಿತು.


    ಬೆಳಗ್ಗೆ 9 ಗಂಟೆಗೆ ಗಂಗಾಸ್ಥಳಕ್ಕೆ ತೆರಳಿ ಉದಕ ತರಲಾಯಿತು. ರಥದ ಗಾಲಿಗಳಿಗೆ ಭಕ್ತರು ಮೂರು ಸಾವಿರ ತೆಂಗಿನಕಾಯಿ ಒಡೆದು ಭಕ್ತಿ ಸಮರ್ಪಿಸಿದರು. ಮಹಿಳೆಯರು ಕಳಸ ಹಿಡಿದು ಉತ್ಸವಕ್ಕೆ ಮೆರಗು ತಂದರು. ಶನಿವಾರ ಹಾಲಗಂಬ ಉತ್ಸವದಲ್ಲಿ 60 ಅಡಿ ಎತ್ತರದ ಹಾಲುಗಂಬಕ್ಕೆ ಜಾಜು ಲೇಪನ ಹಾಗೂ ಲೋಳೆ ರಸ ಹಚ್ಚಲಾಗಿತ್ತು. ಪೂಜಾರಿ ಕಂಬದ ಮೇಲೆ ಕುಳಿತು ಸ್ಪರ್ಧಿಗಳಿಗೆ ಮೇಲಿನಿಂದ ನೀರು, ಮಜ್ಜಿಗೆ, ತುಪ್ಪ ಹಾಕಿದರು. ಸ್ಪರ್ಧಿಗಳು ಕಂಬ ಏರುವ ಪೈಪೋಟಿ ಜನರಿಗೆ ಮನರಂಜನೆ ನೀಡಿತು. ಬಾಲಯ್ಯ ಕೊಂಡ್ಲ ಪ್ರಥಮ ಸ್ಥಾನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts