More

    ಶ್ರೀ ಮುದ್ದಿಬಸವೇಶ್ವರ ಸ್ವಾಮಿ ಜಾತ್ರೆ ಸಂಪನ್ನ

    ಹಗರಿಬೊಮ್ಮನಹಳ್ಳಿ: ತಾಲೂಕಿನ ಮಾಲವಿ ಗ್ರಾಮದಲ್ಲಿ ಶ್ರೀ ಮುದ್ದಿಬಸವೇಶ್ವರ ಸ್ವಾಮಿ ರಥೋತ್ಸವ ನಿಮಿತ್ತ ಅಗ್ನಿಕುಂಡ, ಉಚ್ಛಾಯ ಉತ್ಸವ ವಿವಿಧ ವಾದ್ಯಮೇಳ, ಭಕ್ತರ ಜಯಘೋಷದೊಂದಿಗೆ ಅದ್ದೂರಿಯಾಗಿ ಗುರುವಾರ ಜರುಗಿತು.

    ಇದನ್ನು ಓದಿ: ಚುನಾವಣೆಯಲ್ಲಿ ಸೋತಿರುವ ಅಣ್ಣಾಮಲೈರಿಂದ ಮಾರ್ಗದರ್ಶನ ಪಡೆಯುವ ಸ್ಥಿತಿಗೆ ಬಿಜೆಪಿ ಬಂದಿದೆ: ತೇಜಸ್ವಿನಿ ಗೌಡ

    ಭಕ್ತರು ಅಗ್ನಿಕುಂಡ ಹಾಯುವ ಮೂಲಕ ಭಕ್ತರು ಹರಕೆ ತೀರಿಸಿದರು. ಶ್ರೀ ಸ್ವಾಮಿ ಮೂರ್ತಿಯನ್ನು ದೇಗುಲದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಮತ್ತು ಅಭಿಷೇಕ ಸೇರಿದಂತೆ ಘಂಟಾನಾದ ಸಮೇತ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ನೆರವೇರಿಸಲಾಯಿತು. ಭಕ್ತರು ಸ್ವಾಮಿಗೆ ಫಲ-ಪುಷ್ಪಾರ್ಚನೆ ಸೇವೆ ಸಲ್ಲಿಸಿದರು. ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.

    ಪ್ರಮುಖರಾದ ಚನ್ನಬಸವರಾಜ ಸ್ವಾಮಿ, ಕೊಟ್ರಯ್ಯ ಸ್ವಾಮಿ, ಕೆ.ಎಂ.ಅಜ್ಜೇಶ್ವರಯ್ಯ ಸ್ವಾಮಿ, ನರೇಗಲ್ ವೀರಣ್ಣ, ಬಣಕಾರ ಬಸವರಾಜ, ಬಣವಿಕಲ್ ಮಲ್ಲಿಕಾರ್ಜುನ, ಕಮ್ಮಾರ ಮರುಳಸಿದ್ದಪ್ಪ, ಬಡಿಗೇರ ಬಸವರಾಜ, ಬಾರಿಗಿಡ ನಾಗಪ್ಪ, ಅಳವಂಡಿ ಅಂದಾನಪ್ಪ, ಗಜಾಪುರದ ಸಿದ್ದಲಿಂಗಪ್ಪ, ದೇವಸ್ಥಾನದ ಅರ್ಚಕ ಆನಂದ ಪೂಜಾರ್, ಗ್ರಾಪಂ ಉಪಾಧ್ಯಕ್ಷ ಅಮ್ಮರ್ ಮಂಜುನಾಥ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts