More

    ಊರಿನಿಂದ ಬಹಿಷ್ಕಾರ ಆರೋಪ

    ಮಡಿಕೇರಿ:

    ನಮ್ಮ ಕುಟುಂಬವನ್ನು ಊರಿನಿಂದ ಬಹಿಷ್ಕಾರ ಹಾಕಲಾಗಿದ್ದು, ಯಾರಾದರೂ ನಮ್ಮ ಜೊತೆ ಮಾತನಾಡಿದರೆ ೧೦ ಸಾವಿರ ರೂ. ದಂಡ ವಿಧಿಸಲಾಗುತ್ತಿದೆ ಎಂದು ಸೋಮವಾರಪೇಟೆ ತಾಲೂಕು ಹರಗ ಗ್ರಾಮದ ಬಿ.ಡಿ. ಗಿರೀಶ ಹೇಳಿದ್ದಾರೆ. ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಭೂಮಿಯಲ್ಲಿ ತಾನು ಕಾಫಿ ಗಿಡ ಬೆಳೆಸಿರುವುದನ್ನು ಇಲಾಖೆ ಗಮನಕ್ಕೆ ತಂದು ಅಲ್ಲಿನ ಕಾಫಿ ಗಿಡಗಳನ್ನು ಇಲಾಖೆ ಮೂಲಕ ಕಿತ್ತು ಹಾಕಿಸಿರುವ ಗ್ರಾಮದ ಅಧ್ಯಕ್ಷ ನಂತರ ಇದೇ ನೆಪದಲ್ಲಿ ಗ್ರಾಮದ ಹಿತದೃಷ್ಟಿ ಸಮಿತಿ ಮೂಲಕ ೫೦ ಸಾವಿರ ಮತ್ತು ಗ್ರಾಮದ ಮೂಲಕ ೨೫ ಸಾವಿರ ದಂಡ ಹಾಕಿಸಿದ್ದಾರೆ. ಈ ಮೊತ್ತವನ್ನು ಕಟ್ಟದೇ ಇರುವ ಕಾರಣಕ್ಕೆ ಗ್ರಾಮದಿಂದ ಬಹಿಷ್ಕಾರ ಹಾಕಲಾಗಿದೆ.

    ಗ್ರಾಮದಲ್ಲಿ ಯಾವುದೇ ವ್ಯವಹಾರ ಮಾಡದಂತೆ ಮತ್ತು ಯಾರೂ ತಮ್ಮ ಕುಟುಂಬದ ಜೊತೆ ಮಾತನಾಡದಂತೆ ಗ್ರಾಮಸ್ಥರಿಗೆ ಸೂಚಿಸಲಾಗಿದೆ.
    ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಗ್ರಾಮದ ಅಧ್ಯಕ್ಷ ಮತ್ತು ಇತರರನ್ನು ಕರೆಯಿಸಿ ವಿಚಾರಣೆ ಮಾಡಿ ಮುಚ್ಚಳಿಕೆ ಬರೆದುಕೊಟ್ಟಿದ್ದರೂ ಬಹಿಷ್ಕಾರ ಮುಂದುವರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪುನಃ ಪೊಲೀಸರಿಗೆ ದೂರು ಕೊಟ್ಟು ಅವರು ವಿಚಾರಣೆ ನಡೆಸಿ ತೀರ್ಮಾನ ತೆಗೆದುಕೊಳ್ಳುವ ಸಂದರ್ಭದಲ್ಲಿ ವಯೋವೃದ್ಧೆ ತಾಯಿ ಮತ್ತು ಪುತ್ರನ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ.

    ಇದೇ ರೀತಿ ಗ್ರಾಮದ ಇನ್ನೊಬ್ಬ ವ್ಯಕ್ತಿ ಮೇಲೂ ೪ ವರ್ಷಗಳಿಂದ ಬಹಿಷ್ಕಾರ ಹಾಕಲಾಗಿದೆ. ಈ ಬಗ್ಗೆ ಸಂಬಂಧಿಸಿದ ಎಲ್ಲರಿಗೂ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಹಾಗಾಗಿ ಈ ಪ್ರಕರಣದಲ್ಲಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.
    ಗಿರೀಶ ಅವರ ಪತ್ನಿ ಬಿ.ಜಿ. ಪವಿತ್ರ, ತಾಯಿ ಬಿ.ಡಿ. ಪೂವಮ್ಮ, ಸಹೊದರಿಯರಾದ ಯಶೋಧ ಸಿ.ಟಿ., ಜ್ಯೋತಿ ಬಿ.ಡಿ. ಸುದ್ದಿಗೋಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts