More

    ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಭೀಮ ಜ್ಯೋತಿ ಯಾತ್ರೆ

    ಚಿತ್ರದುರ್ಗ: ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ 87 ಹಳ್ಳಿಗಳಲ್ಲಿ ನವೆಂಬರ್ 26ರಿಂದ 86 ದಿನಗಳ ಕಾಲ ಭೀಮಜ್ಯೋತಿ ಯಾತ್ರೆ ಸಂಚರಿಸಲಿದೆ ಎಂದು ಎಸ್ ಡಿಪಿಐ ಜಿಲ್ಲಾಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಸಂಜೆ 6 ಗಂಟೆಗೆ ನಗರದ ಡಾ.ಬಿ. ಆರ್.ಅಂಬೇಡ್ಕರ್ ಪ್ರತಿಮೆಯಿಂದ ಯಾತ್ರೆ ಆರಂಭವಾಗಲಿದೆ.

    ನಾಡಿನಾದ್ಯಂತ ದಲಿತರ ಮೇಲೆ ಮೇಲೆ ದೌರ್ಜನ್ಯ,ದಬ್ಬಾಳಿಕೆ,ಸಾಮಾಜಿಕ ಬಹಿಷ್ಕಾರದಂತ ದುರ್ಘಟನೆಗಳು ಮತ್ತೆ ಮತ್ತೆ ನಡೆಯುತ್ತಿವೆ. ಅ ಸ್ಪಶ್ಯತೆ,ಜಾತಿ ಅಸಮಾನತೆ ವಿರುದ್ದ ಜನರನ್ನು ಜಾಗೃತಿಗೊಳಿಸುವ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಆಶಯಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಯಾತ್ರೆ ದಲಿತ ಕಾಲನಿ,ಕೇರಿ,ಹಟ್ಟಿ,ಹಾಡಿ,ತಾಂಡಗಳಲ್ಲಿ ಸಂಚರಿಸಲಿದೆ ಎಂದರು.

    ರಾಜ್ಯಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಅಧ್ಯಕ್ಷ ಹನುಮಂತಪ್ಪ ದುರ್ಗ ಮಾತನಾಡಿ,ದಲಿತರು,ಹಿಂದುಳಿದವರು,ಅಲ್ಪಸಂಖ್ಯಾತರ ವಿರೋಧಿ ನೀತಿ ಅನುಸರಿಸುತ್ತಿರುವ ಸರ್ಕಾರಗಳ ಧೋರಣೆ ಖಂಡಿಸಿ ಯಾತ್ರೆ ಸಂಚರಿಸುತ್ತಿದೆ. ಪ್ರತಿಯೊಬ್ಬರಿಗೂ ಸಮಾನತೆ ಸಿಗಬೇಕು. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡಬೇಕೆಂದ ಅವರು,ದಲಿತರ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ 2268 ಕೋಟಿ ರೂ.ಅನುದಾನ ಅನ್ಯ ಉದ್ದೇಶ ಗಳಿಗೆ ಬಳಸಲಾಗಿದೆ.

    ಎಸ್‌ಇಪಿಟಿಎಸ್‌ಪಿ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲವೆಂದರು. ವಿವಿಧ ಸಂಘಟನೆಗಳು ಹಾಗೂ ಕರ್ನಾ ಟಕದಲಿತ ಸಂಘಟಗಳ ಒಕ್ಕೂಟ ಪ್ರಮುಖರಾದ ಕೆ.ರಾಜಣ್ಣ,ಕುಂಚಿಗನಾಳ್ ಮಹಲಿಂಗಪ್ಪ,ಶಾಂತಕುಮಾರ್,ನರೇನಹಳ್ಳಿ ಅರುಣ್‌ಕುಮಾರ್ ಇ ದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts